ವಾಂಖೆಡೆ ಸ್ಟೇಡಿಯಂನಲ್ಲಿ ಗಿಲ್ – ಕೊಹ್ಲಿ ಜೊತೆಯಾಟ ಕಣ್ತುಂಬಿಕೊಂಡ ಫ್ಯಾನ್ಸ್ – ಲಂಕಾ ವಿರುದ್ಧ ಅಬ್ಬರಿಸಿದ ಸ್ಟಾರ್ ಆಟಗಾರರು

ವಾಂಖೆಡೆ ಸ್ಟೇಡಿಯಂನಲ್ಲಿ ಗಿಲ್ – ಕೊಹ್ಲಿ ಜೊತೆಯಾಟ ಕಣ್ತುಂಬಿಕೊಂಡ ಫ್ಯಾನ್ಸ್ – ಲಂಕಾ ವಿರುದ್ಧ ಅಬ್ಬರಿಸಿದ ಸ್ಟಾರ್ ಆಟಗಾರರು

ಒಂದು ಕಡೆ ವಿರಾಟ್ ಕೊಹ್ಲಿ.. ಮತ್ತೊಂದೆಡೆ ಶುಭ್‌ಮನ್ ಗಿಲ್.. ಇಬ್ಬರ ನಡುವೆಯೇ ರನ್ ರೇಸ್.. ಕೊಹ್ಲಿ ಹಾಫ್​ ಸೆಂಚೂರಿಯಾಗ್ತಿದ್ದಂತೆ ಶುಭ್‌ಮನ್ ಗಿಲ್ ಅರ್ಧ ಶತಕ ಬಾರಿಸಿದ್ರು. ಬಳಿಕ ಯಾರು ಮೊದಲು ಸೆಂಚೂರಿ ಬಾರಿಸ್ತಾರೊ ನೋಡೋಣ ಅನ್ನೋ ಕಾಂಪಿಟೀಶನ್. ಆದರೆ, ಶತಕ ತಲುಪದೇ ಇದ್ದರೂ ಕೂಡಾ ಇಬ್ಬರೂ ಸ್ಟಾರ್ ಆಟಗಾರರು ಅಭಿಮಾನಿಗಳ ಮನಗೆದ್ದಿದ್ದರು.

ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಅನಾವರಣ – ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ತಲೆಯೆತ್ತಿದ ಪ್ರತಿಮೆ

ಟೀಂ ಇಂಡಿಯಾದ ಮೂರು ಬ್ಯಾಟ್ಸ್​​ಮನ್​​ಗಳ ವಿಚಾರದಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಸೇರಿದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಹೋಮ್​​ ಗ್ರೌಂಡ್​​ನಲ್ಲಿ ರೋಹಿತ್​ ಶರ್ಮಾ ಬಿಗ್ ಸ್ಕೋರ್ ಮಾಡಿಲ್ಲ.. ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಗಿಲ್​ರಿಂದ ಸೆಂಚುರಿ ಬರಲಿಲ್ಲ. ಅದ್ರಲ್ಲೂ ವಿರಾಟ್ ಕೊಹ್ಲಿಯ 49ನೇ ಶತಕಕ್ಕಾಗಿ ಇಡೀ ದೇಶವೇ ಕಾಯುತ್ತಿತ್ತು. ಆರಂಭದಲ್ಲೇ ಶ್ರೀಲಂಕನ್ನರು ಕೊಹ್ಲಿಯ ಮೂರು ಕ್ಯಾಚ್​ಗಳನ್ನ ಡ್ರಾಪ್ ಮಾಡಿ, ಜೀವದಾನ ಕೊಟ್ಟಿದ್ದರು. ಕೊಹ್ಲಿ ಕೂಡ ಇದನ್ನ ಅಡ್ವಾಂಟೇಜ್​ ಆಗಿ ತಗೊಂಡ್ರು ಚೆನ್ನಾಗಿಯೇ ಬ್ಯಾಟ್ ಬೀಸುತ್ತಿದ್ದರು. ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ 2ನೇ ವಿಕೆಟ್​ಗೆ ಉತ್ತಮ ಪಾಟ್ನರ್​ಶಿಪ್ ಕೂಡ ಬಂತು. ಆದರೆ, ಇಬ್ಬರು ಸ್ಟಾರ್ ಆಟಗಾರರು ಸೆಂಚುರಿ ಹೊಡೆಯದೆ ಪೆವಿಲಿಯನ್‌ಗೆ ಮರಳಿದರು. ಗಿಲ್ 92 ರನ್ ಹೊಡೆದರೆ, ವಿರಾಟ್ ಕೊಹ್ಲಿ 88 ರನ್ ಗಳಿಸಿ ಔಟಾದರು.

ಶುಭ್ಮನ್ ಗಿಲ್-ಕೊಹ್ಲಿ ಔಟಾದ ಬಳಿಕ ಟೀಂ ಇಂಡಿಯಾಗೆ ನೆರವಾಗಿದ್ದು ಶ್ರೇಯಸ್ ಅಯ್ಯರ್. ಆಕ್ಚುವಲಿ ಶ್ರೇಯಸ್ ಪಾಲಿಗೆ ಈ ಮ್ಯಾಚ್ ತುಂಬಾನೆ ಇಂಪಾರ್ಟೆಂಟ್ ಆಗಿತ್ತು. ಅಡಲೇಬೇಕಾದ ಅನಿವಾರ್ಯತೆ ಇತ್ತು. ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ದ್ರಾವಿಡ್ ಇಟ್ಟಿರುವ ನಂಬಿಕೆಯನ್ನ, ಕೊಟ್ಟ ಅವಕಾಶ ಶ್ರೇಯಸ್ ಅಯ್ಯರ್ ಈ ಬಾರಿ ಉಳಿಸಿಕೊಂಡಿದ್ದಾರೆ. ಬೌಂಡರಿಗಿಂತಲೂ ಹೆಚ್ಚಾಗಿ ಸಿಕ್ಸರ್​​ಗಳಲ್ಲೇ ಸ್ಕೋರ್​​ ಮಾಡಿದ್ರು. ಹಾಫ್ ಸೆಂಚೂರಿ ಬಾರಿಸಿ ಟೀಂ ಇಂಡಿಯಾ ದೊಡ್ಡ ಮೊತ್ತದ ಸ್ಕೋರ್ ಗಳಿಸುವಲ್ಲಿ ನೆರವಾದ್ರು. ಶ್ರೇಯಸ್ ಅಯ್ಯರ್​ ಸಿಕ್ಸರ್​​ಗಳು ಅಂದ್ರೆ ಯಾವಾಗಲೂ ಕ್ಲೀನ್ ಹಿಟ್ಟಿಂಗ್​​ ಆಗಿರುತ್ತೆ. ಬೌಂಡರಿ ಲೈನ್​ ಬಳಿ ಎಲ್ಲ ಬಿದ್ದ ಜಸ್ಟ್ ಸಿಕ್ಸರ್​ ಹೊಡಿಯೇ ಪ್ರಶ್ನೆಯೇ ಇಲ್ಲ. ಆಕಾಶದೆತ್ತರಕ್ಕೆ ಹೋಗಿ ಸ್ಟ್ಯಾಂಡ್ ಮೇಲೆಯೇ ಬೀಳುತ್ತೆ. ಅದೆಷ್ಟೋ ಬಾರಿ ಈ ರೀತಿ ಹೈಟ್ ಸಿಕ್ಸ್ ಹೊಡಿಯೋಕೆ ಹೋಗಿ ಔಟಾಗಿದ್ದೂ ಇದೆ.

ಆದ್ರೂ ಶ್ರೀಲಂಕಾ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ಅಬ್ಬರದ ಬ್ಯಾಟಿಂಗ್ ಅಂತಾ ಮಾಡಿಲ್ಲ. ಶುಭ್‌ಮನ್​ ಗಿಲ್ 92 ಬಾಲ್​ಗಳಲ್ಲಿ 92 ರನ್​ ಗಳಿಸಿದ್ರು. ವಿರಾಟ್ ಕೊಹ್ಲಿ 94 ಬಾಲ್​ಗಳಲ್ಲಿ 88 ರನ್ ಮಾಡಿದ್ರು. ಶ್ರೇಯಸ್ ಅಯ್ಯರ್ 56 ಬಾಲ್​ಗಳಲ್ಲಿ 82 ರನ್ ಮಾಡಿದ್ರು. ಇದ್ರಲ್ಲಿ ಶ್ರೇಯಸ್ ಹೊಡೆದಿದ್ದು 6 ಸಿಕ್ಸರ್.. 3 ಬೌಂಡರಿ.. ರವೀಂದ್ರ ಜಡೇಜಾ 35 ರನ್ ಗಳಿಸಿದ್ರು.. ಹೀಗಾಗಿ ಟಿಂ ಇಂಡಿಯಾದ ಸ್ಕೋರ್ 357 ರನ್​ಗಳಾಯ್ತು.

ಇಲ್ಲಿ ಶ್ರೀಲಂಕಾದ ಯುವ ಬೌಲರ್​ ದಿಲ್​ಶಾನ್ ಮದುಶನ್​ಕಾ ಬಗ್ಗೆ ಹೇಳಲೇಬೇಕು. ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಕೆಎಲ್​ ರಾಹುಲ್​ ಮತ್ತು ಸೂರ್ಯಕುಮಾರ್​ ಯಾದವ್ ಈ ಎಲ್ಲಾ ಐವರು  ಪ್ರಮುಖ ಬ್ಯಾಟ್ಸ್​ಮನ್​ಗಳನ್ನ ಕೂಡ ಔಟ್ ಮಾಡಿರೋದು ದಿಲ್​ಶಾನ್ ಮದುಶನ್​ಕಾ. ಭಾರತದ ವಿರುದ್ಧ ಐದು ವಿಕೆಟ್​ಗಳನ್ನ ಬಾಚಿಕೊಂಡ್ರು. ಅದ್ರಲ್ಲೂ ವಿರಾಟ್ ಕೊಹ್ಲಿ ಮತ್ತು ಕೆಎಲ್​ ರಾಹುಲ್​ರನ್ನ ತಮ್ಮ ಬಾಲ್​​ ಮೂಲಕ ಬಲೆಗೆ ಕೆಡವಿದ್ರು.

Sulekha