ಬಾಂಗ್ಲಾ ಎದುರೇ ತಿಣುಕಾಡಿ ಗೆದ್ದ ಭಾರತ – ಪಾಕಿಸ್ತಾನದ ಎದುರು ಪಿಚ್ ಕೈ ಕೊಡುತ್ತಾ?

ಬಾಂಗ್ಲಾ ಎದುರೇ ತಿಣುಕಾಡಿ ಗೆದ್ದ ಭಾರತ – ಪಾಕಿಸ್ತಾನದ ಎದುರು ಪಿಚ್ ಕೈ ಕೊಡುತ್ತಾ?

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸಿ ಗೆದ್ದು ಬೀಗಿದೆ. ಅದ್ರಲ್ಲೂ ಶುಭ್​ಮನ್ ಗಿಲ್ ಸೆಂಚುರಿ ಮತ್ತು ಮೊಹಮ್ಮದ್ ಶಮಿಯವ್ರ 5 ವಿಕೆಟ್​ಗಳ ಬೇಟೆಯೇ ಗೆಲುವಿಗೆ ಕಾರಣವಾಯ್ತು. ಬಟ್ ಒನ್ ಟೈಮಲ್ಲಿ ಈಸಿ ಟಾರ್ಗೆಟ್ ಚಾಲೆಂಜಿಂಗ್ ಆಗಿದ್ದೂ ಉಂಟು. ಹಾಗೇ ಈ ಮ್ಯಾಚ್ ಮುಂದಿನ ಪಂದ್ಯಗಳಿಗೆ ಎಚ್ಚರಿಕೆಯ ಕರೆ ಗಂಟೆಯೂ ಆಗಿದೆ.

ಇದನ್ನೂ ಓದಿ : ಮೊದಲ ಪಂದ್ಯದ ಭಾರತಕ್ಕೆ ಭರ್ಜರಿ ಜಯ – ಬಾಂಗ್ಲಾಕ್ಕೆ ಬಿಗ್ ಶಾಕ್ ನೀಡಿದ ಭಾರತ

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ವರ್ಸಸ್ ಬಾಂಗ್ಲಾ ನಡುವಿನ ಫೈಟ್​ನಲ್ಲಿ ಬಾಂಗ್ಲಾ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ತೌಹಿದ್ ಹ್ರಿದೋಯ್ ಸೆಂಚುರಿ ಮತ್ತು ಜೇಕರ್ ಅಲಿ ಜವಾಬ್ದಾರಿಯುತ ಆಟದಿಂದ ಬಾಂಗ್ಲಾ ತಂಡ 228 ರನ್​ಗಳನ್ನ ಸ್ಕೋರ್ ಮಾಡಿತ್ತು.  ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಇವ್ರಿಬ್ಬರ ಕ್ಯಾಚ್ ಬಿಟ್ಟಿದ್ರು. ಇದೇ ಭಾರತಕ್ಕೆ ದುಬಾರಿಯಾಗಿ 150 ರನ್​ಗಳ ಜೊತೆಯಾಟವಾಡಿದ್ರು. ಹೀಗಿದ್ರೂ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಬ್ರೇಕ್ ಥ್ರ್ಯೂ ತಂದು ಕೊಟ್ರು. ಸೋ 229 ರನ್​​ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾಗೆ ಸುಲಭವಾಗಿ ಜಯ ಸಾಧಿಸಲು ಬಾಂಗ್ಲಾದೇಶ ಬಿಡಲಿಲ್ಲ. ಬಟ್ ಓಪನರ್ ಆಗಿ ಬಂದು ಅಜೇಯರಾಗಿ ಉಳಿದ ಶುಭ್​ಮನ್ ಗಿಲ್ ಕಂಪ್ಲೀಟ್ ಜವಾಬ್ದಾರಿಯನ್ನ ಹೊತ್ತಿದ್ರು. ಒಂದು ಕಡೆ ವಿಕೆಟ್​ಗಳು ಉರುಳುತ್ತಿದ್ರೂ ಮತ್ತೊಂದೆಡೆ ಪಿಲ್ಲರ್​ನಂತೆ ನಿಂತಿದ್ರು.

ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದು, ಉತ್ತಮ ಜೊತೆಯಾಟವಾಡಿದ್ರು. ಬಟ್ 41 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ರು. ಹೀಗೆ ಟೀಂ ಇಂಡಿಯಾ 69 ರನ್‌ಗಳ ಉತ್ತಮ ಆರಂಭ ಪಡೆದ್ರೂ ನಂತರದಲ್ಲಿ ಸಂಕಷ್ಟಕ್ಕೆ ಸಿಲುಕಿತು.  ರೋಹಿತ್ ವಿಕೆಟ್ ಬಿದ್ಮೇಲೆ ಟೀಂ ಇಂಡಿಯಾ ಸುಮಾರು 8 ಓವರ್‌ಗಳವರೆಗೆ ಯಾವುದೇ ಬೌಂಡರಿ ಗಳಿಸಲಿಲ್ಲ. ಸ್ಪಿನ್ನರ್‌ಗಳ ವಿರುದ್ಧವೇ ಎಡವುತ್ತಿರೋ ಕೊಹ್ಲಿ ಮತ್ತೊಮ್ಮೆ ಲೆಗ್ ಸ್ಪಿನ್ನರ್‌ಗೆ ವಿಕೆಟ್ ಕಳ್ಕೊಂಡ್ರು. ಇನ್ನು ಶ್ರೇಯಸ್ ಅಯ್ಯರ್ ಕೂಡ 15 ರನ್​ಗೆ ಆಟ ಮುಗಿಸಿದ್ರು. ಇತ್ತ 5ನೇ ಸ್ಲಾಟ್​ನಲ್ಲಿ ಕ್ರೀಸ್​ಗೆ ಬಂದ ಅಕ್ಷರ್ ಪಟೇಲ್ 8 ರನ್ ಗಳಿಸಿ ಔಟಾದ್ರು. ಬಟ್ ಇಂಥಾ ಟೈಮಲ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದೇ ಕನ್ನಡಿಗ ಕೆಎಲ್ ರಾಹುಲ್!

31ನೇ ಓವರ್‌ನಲ್ಲಿ ಟೀಂ ಇಂಡಿಯಾ 144 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಟ್ 6ನೇ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ ತಾಳ್ಮೆ ಮತ್ತು ಜವಾಬ್ದಾರಿಯಿಂದ ಆಡಿದ್ರು. ಹೀಗಿದ್ರೂ ಒಂದು ಸಲ ಕ್ಯಾಚ್ ಮತ್ತು ರನ್​ಔಟ್​ನಿಂದ ಜೀವದಾನ ಪಡೆದಿದ್ದೂ ಪ್ಲಸ್ ಆಯ್ತು. ಹಾಗೇನಾದ್ರೂ ಕೆಎಲ್ ರಾಹುಲ್ ಅವರ ಸುಲಭ ಕ್ಯಾಚ್ ಅನ್ನು ಜಾಕಿರ್ ಅಲಿ ಹಿಡಿದಿದ್ದರೆ ಔಟ್ ಆಗ್ತಿದ್ರು. ಆ ಟೈಮಲ್ಲಿ ರಾಹುಲ್ ಕೇವಲ 9 ರನ್ ಗಳಿಸಿದ್ದರು. ಇದಾದ ನಂತರ ಎಚ್ಚರಿಕೆಯಿಂದ ಆಡಿ ಗಿಲ್ ಜೊತೆ 87 ರನ್‌ಗಳ ಅಜೇಯ ಸ್ಕೋರ್​ನಿಂದ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಗೆಲುವಿನ ಸಿಕ್ಸ್ ಬಾರಿಸಿದ್ದು 41 ರನ್ ಗಳಿಸಿ ಅಜೇಯರಾಗಿ ಉಳಿದ್ರು.   ಹೀಗೆ ಭಾರತ ಗೆದ್ರೂ ಕೂಡ ಟಫ್ ಫೈಟ್ ಮೂಲಕ ಗೆದ್ದಿದೆ. ಅಯ್ಯೋ ಬಾಂಗ್ಲಾವನ್ನ ಈಸಿಯಾಗಿ ಸೋಲಿಸ್ಬೋದು ಅನ್ಕೊಂಡಿದ್ದವ್ರಿಗೆ ಈಗ ಒಂದಂಥೂ ಅರ್ಥ ಆಗಿರುತ್ತೆ. ದುಬೈ ಪಿಚ್​ನ ಅಷ್ಟು ಈಸಿಯಾಗಿ ಜಡ್ಜ್ ಮಾಡೋಕೆ ಆಗಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಮುಂದಿನ ಪಂದ್ಯಗಳು ಇರೋದು ಪಾಕ್ ಮತ್ತು ನ್ಯೂಜಿಲೆಂಡ್ ವಿರುದ್ಧ. ಸೋ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಅಲರ್ಟ್ ಆಗ್ಲೇಬೇಕಿದೆ.

Shantha Kumari

Leave a Reply

Your email address will not be published. Required fields are marked *