ವಿಲನ್ ಕೊಟ್ಟ ಟಾಸ್ಕ್‌ನಲ್ಲಿ ಸೋತ ಗಿಲ್ಲಿ? – ಕ್ಯಾಪ್ಟನ್ಸಿ ರೇಸ್‌ನಿಂದ ಗಿಲ್ಲಿನಟ ಔಟ್?

ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಕೊಡುತ್ತಿದ್ದಂತೆ ದೊಡ್ಮನೆಯ ಆಟಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ವಾರದ ಆರಂಭದಲ್ಲೇ ಸ್ಪಂದನಾ ಕ್ಯಾಪ್ಟನ್ ಸ್ಥಾನ ಕಳೆದುಕೊಂಡಿದ್ರು. ಚೈತ್ರಾಳನ್ನ ವಿಲನ್ ಕ್ಯಾಪ್ಟನ್ ಮಾಡಿದ್ರು. ಇದೀಗ ವಿಲನ್ ಗಿಲ್ಲಿ, ಅಶ್ವಿನಿ ಜೊತೆಗೆ ಡೀಲ್ ಮಾಡಿಕೊಂಡಿದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಅವಕಾಶ ಬೇಕಂದ್ರೆ, ತಾನು ಹೇಳಿದ ಕೆಲಸ ಮಾಡಬೇಕು ಎಂದು ಹೇಳಲಾಗಿದೆ. ಎಲ್ಲಾ ಟಾಸ್ಕ್‌ನಲ್ಲಿ ಗೆದ್ದ ಗಿಲ್ಲಿ ಈಗ ಕೊನೆಯ ಆಟದಲ್ಲಿ ಸೋತ್ರಾ ಅನ್ನೋ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಅದೃಷ್ಟ ಪರೀಕ್ಷೆಗಿಳಿದ ದಾಸ! – ಡೆವಿಲ್ ಸಿನಿಮಾಗೆ ರಿಷಬ್ ಶೆಟ್ಟಿ ವಿಶ್!
ಬಿಗ್‌ಬಾಸ್ ಮನೆಯಲ್ಲಿ ವಿಲನ್ ಎಂಟ್ರಿ ಆದ ಬಳಿಕ ಇಡೀ ಆಟದ ಚಿತ್ರಣವೇ ಬದಲಾಗಿದೆ. ಇದೀಗ ವಿಲನ್ ಗಿಲ್ಲಿ ಜೊತೆ ಡೀಲ್ ಮಾಡಿಕೊಂಡಿದ್ದಾರೆ. ಗಿಲ್ಲಿ ಹಾಗೂ ಅಶ್ವಿನಿಯನ್ನ ಕನ್ಪೆಷನ್ ರೂಮ್‌ಗೆ ಕರೆದ ವಿಲನ್. ಮನೆಗೆ ರೇಷನ್ ಬೇಕಂದ್ರೆ ನೀವೇ ಅಡುಗೆ ಮಾಡಬೇಕು ಎಂದು ಹೇಳಿದ್ರು. ಅದಾದ ಬಳಿಕ ನೀವು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗ್ತೀರಾ.. ಆದರೆ ನಾನು ಹೇಳಿದ ಕಂಡೀಷನ್‌ಗೆ ಒಪ್ಪಿಕೊಳ್ಳಬೇಕು ಎಂದು ಹೇಳಿದ್ರು. ಇದಕ್ಕೆ ಗಿಲ್ಲಿ ಒಪ್ಪಿಕೊಳ್ಳುತ್ತಿದ್ದಂತೆ ವಿಲನ್ ಟ್ವಿಸ್ಟ್ ಕೊಟ್ಟಿದ್ದಾರೆ. ತನ್ನ ಸ್ನೇಹಿತೆ ಕಾವ್ಯಗೆ ಕಣ್ಣೀರು ತರಿಸಬೇಕು ಎಂದು ಹೇಳಿದ್ದಾರೆ. ಇಷ್ಟ ಇಲ್ಲದಿದ್ದರೂ ಗಿಲ್ಲಿ ಈ ಟಾಸ್ಕ್‌ಗೆ ಒಪ್ಪಿಕೊಂಡಿದ್ದಾರೆ. ಬಳಿಕ ಕಾವ್ಯಗೆ ಚುಚ್ಚು ಮಾತುಗಳಿಂದ ನೋಯಿಸಿದ್ದಾರೆ. ಗಿಲ್ಲಿ ಮಾತಿನಿಂದ ಕಾವ್ಯ ಕಣ್ಣೀರು ಹಾಕಿದ್ರು. ವಿಲನ್ ಕೊಟ್ಟ ಮೊದಲ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ದಾಗಿದೆ. ಇದೀಗ ಗಿಲ್ಲಿ ಎರಡನೇ ಟಾಸ್ಕ್‌ನಲ್ಲಿ ಸೋತ್ರ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ. ಇದೀಗ ಇದರ ಪ್ರೋಮೋ ರಿಲೀಸ್ ಆಗಿದೆ.
ಪ್ರೋಮೋದಲ್ಲಿ ಧನುಷ್ ಸೈಕಲ್ ತುಳಿಯುತ್ತಿರುತ್ತಾರೆ. ಆಗ ವಿಲನ್, ಈ ಮನೆಯವರು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ ಸೈಕಲ್ ತುಳಿಯುತ್ತಲೇ ಇರಬೇಕು ಎಂದು ಹೇಳಿದ್ದಾರೆ. ಬಳಿಕ ಗಿಲ್ಲಿಗೆ ಮತ್ತೊಂದು ಟಾಸ್ಕ್ ನೀಡಲಾಗಿದೆ. ಇದ್ರಲ್ಲಿ ಗಿಲ್ಲಿ ಮನೆಯ ಲೈಟ್ ಆಫ್ ಆಗುತ್ತಿದ್ದಂತೆ, ಯಾರಿಗೂ ಗೊತ್ತಾಗದಂತೆ, ಕಿಚ್ಚನ ಚಪ್ಪಾಳೆಯ ಫೋಟೋವನ್ನ ತೆಗೆದು ಸ್ಟೋರ್ ರೂಮ್‌ನಲ್ಲಿ ಇಟ್ಟಿದ್ದಾರೆ. ಗೋಡೆಯಲ್ಲಿ ಫೋಟೋ ಇಲ್ಲದೇ ಇರುವುದನ್ನ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಎಲ್ಲರಿಗೂ ಗಿಲ್ಲಿ ಮೇಲೆ ಡೌಟ್ ಬಂದಿದೆ. ಗಿಲ್ಲಿಯನ್ನ ದೇವರ ಮೂರ್ತಿ ಬಳಿ ಕರೆದುಕೊಂಡು ಹೋದ ರಜತ್ ಆಣೆ ಮಾಡುವಂತೆ ಹೇಳಿದ್ದಾರೆ. ಆದ್ರೆ ಗಿಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಇದೀಗ ಗಿಲ್ಲಿ ಈ ಟಾಸ್ಕ್‌ನಲ್ಲಿ ಸೋತ್ರಾ? ಗಿಲ್ಲಿಗೆ ಕ್ಯಾಪ್ಟನ್ ಆಗುವ ಅವಕಾಶ ತಪ್ಪಿತಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡ್ತಿದೆ. ಗಿಲ್ಲಿಗೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಅವಕಾಶ ಸಿಗುತ್ತಾ? ಇಲ್ವಾ ಅನ್ನೋ ಪ್ರಶ್ನೆಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ನೋಡಿರಿ

