ಶುಭ್ಮನ್ ಆರೋಗ್ಯ ವಿಚಾರದಲ್ಲಿ ಅಭಿಮಾನಿಗಳಿಗೆ ಶುಭಸುದ್ದಿ – ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲು ಅಹ್ಮದಾಬಾದ್‌ಗೆ ಬಂದ ಗಿಲ್

ಶುಭ್ಮನ್ ಆರೋಗ್ಯ ವಿಚಾರದಲ್ಲಿ ಅಭಿಮಾನಿಗಳಿಗೆ ಶುಭಸುದ್ದಿ – ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲು ಅಹ್ಮದಾಬಾದ್‌ಗೆ ಬಂದ ಗಿಲ್

ಡೆಂಘೀ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಶುಭ್‌ಮನ್ ಗಿಲ್ ಅಕ್ಟೋಬರ್​​ 14ರಂದು ಪಾಕಿಸ್ತಾನ ವಿರುದ್ಧದ ಮ್ಯಾಚ್​ನಲ್ಲೂ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದ್ರೀಗ ಲೇಟೆಸ್ಟ್ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ಓಪನರ್​​ ಪಾಕ್​ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಇಷ್ಟು ದಿನ ಚೆನ್ನೈನಲ್ಲಿದ್ದ ಶುಭ್‌ಮನ್ ಗಿಲ್ ಈಗ ಗುಜರಾತ್​ನ ಅಹ್ಮದಾಬಾದ್​ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ – ನವೀನ್ ಉಲ್ ಹಕ್ ಪ್ರೀತಿಯ ಅಪ್ಪುಗೆ – ಅಭಿಮಾನಿಗಳ ಕಣ್ಣೆದುರೇ ಕ್ರಿಕೆಟಿಗರ ಭಾವನಾತ್ಮಕ ಬೆಸುಗೆ

ಗುರುವಾರದಂದು ಶುಭ್‌ಮನ್ ಗಿಲ್​ ಟ್ರೈನಿಂಗ್ ಸೆಷನ್​ ನಡೆಸುವ ಸಾಧ್ಯತೆ ಇದೆ. ಹಾಗಂತಾ ಪಾಕಿಸ್ತಾನ ವಿರುದ್ಧದ ಮ್ಯಾಚ್​ನಲ್ಲಿ ಶುಭ್‌ಮನ್ ಗಿಲ್ ಆಡಿಯೇ ಆಡ್ತಾರೆ ಅನ್ನೋದು ಇನ್ನೂ ಕೂಡ ಗ್ಯಾರಂಟಿ ಇಲ್ಲ. ಸಂಪೂರ್ಣವಾಗಿ ಫಿಟ್ ಆದರೆ ಮಾತ್ರ ಪಾಕ್​ ವಿರುದ್ಧ ಗಿಲ್ ಅಖಾಡಕ್ಕಿಳಿಯಲಿದ್ದಾರೆ ಅಂತಾ ಬಿಸಿಸಿಐ ಮೂಲಗಳು ತಿಳಿಸಿವೆ. ಗಿಲ್ ಸ್ಥಾನದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಭಾರತ ತಂಡದ ಆಡಳಿತ ಮಂಡಳಿ ಗಿಲ್‌ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗಿಲ್ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ತಂಡದಲ್ಲಿ ಆಡಿಸಲು ತೀರ್ಮಾನಿಸಿದೆ. ಒಂದು ವೇಳೆ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯವಾಗದಿದ್ದರೆ ಅವರ ಸ್ಥಾನದಲ್ಲಿ ಮತ್ತೊಮ್ಮೆ ಇಶಾನ್ ಕಿಶನ್ ಕಣಕ್ಕಿಳಿಯಲ್ಲಿದ್ದಾರೆ. ಡೆಂಘೀ ಜ್ವರದಿಂದ ಬಳಲುತ್ತಿರುವ ಗಿಲ್ ಪ್ಲೇಟ್​ಲೇಟ್ 70,000ಕ್ಕೆ ಇಳಿದಿತ್ತು. ಪ್ಲೇಟ್​ಲೇಟ್ ಪ್ರಮಾಣ ಕನಿಷ್ಠ 1 ಲಕ್ಷವಾದ್ರೂ ಇರಲೇಬೇಕು.

ತಂಡವನ್ನು ಸೇರಿಕೊಳ್ಳಲು ಅಹಮದಾಬಾದ್​ಗೆ ಬಂದಿಳಿದ ಗಿಲ್​ರನ್ನು ವಿಮಾನ ನಿಲ್ದಾಣದಲ್ಲಿ ನೀವು ಪಾಕಿಸ್ತಾನದ ವಿರುದ್ಧ ಆಡಲು ಫಿಟ್ ಆಗಿದ್ದೀರಾ? ಎಂದು ಪತ್ರಕರ್ತರು ಪಶ್ನಿಸಿದರು. ಇದಕ್ಕೆ ಶುಭ್​ಮನ್ ಗಿಲ್ ಯಾವುದೇ ಉತ್ತರ ನೀಡದೆ ತೆರಳಿದರು.

Sulekha