ಗಿಲ್ & ಆವೇಶ್ ಬೆಂಚ್ ಗಷ್ಟೇ ಸೀಮಿತ – ಭಾರತಕ್ಕೆ ಇಬ್ಬರು ಪ್ಲೇಯರ್ಸ್ ವಾಪಸ್
ವಿಶ್ವಕಪ್ ಅಖಾಡದಲ್ಲಿ ಕಾದಿದ್ಯಾ ಶಾಕ್?

ಗಿಲ್ & ಆವೇಶ್ ಬೆಂಚ್ ಗಷ್ಟೇ ಸೀಮಿತ – ಭಾರತಕ್ಕೆ ಇಬ್ಬರು ಪ್ಲೇಯರ್ಸ್ ವಾಪಸ್ವಿಶ್ವಕಪ್ ಅಖಾಡದಲ್ಲಿ ಕಾದಿದ್ಯಾ ಶಾಕ್?

ಟಿ20 ವಿಶ್ವಕಪ್​​ ಟೂರ್ನಿ ಮಹತ್ವದ ಘಟ್ಟ ತಲುಪಿದೆ. ಅದ್ಭುತ ಪ್ರದರ್ಶನದದ ಮೂಲಕ ಟೀಮ್ ಇಂಡಿಯಾ ಸೂಪರ್​-8ಕ್ಕೂ ಗ್ರ್ಯಾಂಡ್ ಎಂಟ್ರಿ ನೀಡಿದೆ. ಆದ್ರೆ ಟೀಂ ಇಂಡಿಯಾದಲ್ಲಿ ಆಗಿರೋ ಕೆಲವೊಂದು ಬದಲಾವಣೆಗಳು ಅಭಿಮಾನಿಗಳನ್ನ ಕಾಡ್ತಿದೆ. ಫಸ್ಟ್​ ಚಾಯ್ಸ್​ ಓಪನರ್ ಶುಭ್​ಮನ್​ ಗಿಲ್, ರಿಸರ್ವ್​​ಡ್​​ ಪ್ಲೇಯರ್ ಆಗಿದ್ದೇಗೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಗ್ತಿಲ್ಲ. ಗಿಲ್​ ಓವರ್​ ಟೇಕ್​ ಮಾಡಿದ ಜೈಸ್ವಾಲ್​ಗೆ ಅವಕಾಶವೂ ಸಿಗ್ತಿಲ್ಲ. ಸಂಜು ಸ್ಯಾಮ್ಸನ್ ಕೂಡ ಬೆಂಚ್ ಕಾಯಿಸ್ತಿದ್ದಾರೆ. ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್ ಸ್ಥಿತಿಯೂ ಇದೇ ಆಗಿದೆ. ಇದ್ರ ನಡುವೆ ಭಾರತ ತಂಡ ಸೂಪರ್ 8 ಪಂದ್ಯಗಳ ಆರಂಭಕ್ಕೂ ಮುನ್ನವೇ ಇಬ್ಬರು ಆಟಗಾರರು ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ಇಬ್ಬರು ಆಟಗಾರರು ಯಾರು ಮತ್ತು ಯಾಕೆ..? ಇದ್ರಿಂದ ಟೀಮ್ ಇಂಡಿಯಾಗೆ ಎಫೆಕ್ಟ್ ಆಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಮೆಗಾ ಫ್ಯಾಮಿಲಿಯಿಂದ ಅಲ್ಲು ದೂರ? – ಪವನ್ ಕಲ್ಯಾಣ್ ಗೆಲುವೇ ಕಾರಣವಾ?

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನದ ಮೂಲಕ ಸೂಪರ್ 8 ಹಂತಕ್ಕೆ ಸೆಲೆಕ್ಟ್ ಆಗಿದೆ. ಐರ್ಲೆಂಡ್, ಪಾಕಿಸ್ತಾನ ಹಾಗೇ ಅಮೆರಿಕ ತಂಡಗಳನ್ನ ಮಣಿಸಿ ಒಂದೂ ಸೋಲನ್ನ ಕಾಣದೆ ಮುನ್ನುಗ್ಗುತ್ತಿದೆ. ಶನಿವಾರ ಅಮೆರಿಕದಲ್ಲಿ ಕೆನಡಾ ವಿರುದ್ಧ ಇನ್ನೊಂದು ಪಂದ್ಯವನ್ನ ಆಡಲಿದ್ದು, ಇದು ಲೀಗ್ ಹಂತದ ಕೊನೇ ಪಂದ್ಯವಾಗಲಿದೆ. ಯುಎಸ್​ಎನಲ್ಲಿ ಅಜೇಯವಾಗಿ ಉಳಿದಿರುವ ಟೀಂ ಇಂಡಿಯಾ ಸೂಪರ್ 8 ಮತ್ತು ನಂತರದ ನಾಕೌಟ್ ಹಂತಕ್ಕಾಗಿ ವೆಸ್ಟ್ ಇಂಡೀಸ್‌ಗೆ ಹಾರಲಿದೆ. ಬಟ್ ಇದಕ್ಕೂ ಮುನ್ನ ಭಾರತ ತಂಡದ ಮೀಸಲು ಆಟಗಾರರಾದ ಶುಭ್​ಮನ್ ಗಿಲ್ ಮತ್ತು ಆವೇಶ್ ಖಾನ್ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಆದ್ರೆ ಇನ್ನಿಬ್ಬರು ಮೀಸಲು ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹ್ಮದ್ ತಂಡದಲ್ಲಿಯೇ ಉಳಿಯಲಿದ್ದಾರೆ. ಸದ್ಯ, ಎಲ್ಲ ಮೀಸಲು ಆಟಗಾರರು ಫೋರ್ಟ್ ಲಾಡರ್‌ಡೇಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದಾರೆ.

ಗಿಲ್ & ಆವೇಶ್ ಖಾನ್ ವಾಪಸ್!

ಟಿ-20 ವಿಶ್ವಕಪ್ ಟೂರ್ನಿಗಾಗಿ ಅಮೆರಿಕದಲ್ಲಿರುವ ಟೀಂ ಇಂಡಿಯಾ ಜೂನ್ 15ರ ಪಂದ್ಯದ ಬಳಿಕ ವೆಸ್ಟ್ ಇಂಡೀಸ್​ಗೆ ಹಾರಲಿದೆ. ಬಟ್ ಇದಕ್ಕೂ ಮುನ್ನ ಭಾರತ ತಂಡದ ಮೀಸಲು ಆಟಗಾರರಾದ ಶುಭ್​ಮನ್ ಗಿಲ್ ಮತ್ತು ಆವೇಶ್ ಖಾನ್ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್‌ಗೆ ಭಾರತ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಜೊತೆಗೆ ರಿಂಕು ಸಿಂಗ್, ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ಶುಭ್‌ಮನ್ ಗಿಲ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಭಾರತ ಟಿ20 ವಿಶ್ವಕಪ್ 2024ರ ತನ್ನ ಕೊನೆಯ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಶನಿವಾರ ಆಡಲಿದೆ. ಈ ಪಂದ್ಯವು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿದೆ. ಈ ಪಂದ್ಯದ ನಂತರ ಶುಭಮನ್ ಗಿಲ್ ಮತ್ತು ವೇಗದ ಬೌಲರ್ ಅವೇಶ್ ಖಾನ್ ತವರಿಗೆ ಮರಳಲಿದ್ದಾರಂತೆ. ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಈ ಆಟಗಾರರಿಗೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಹಂತವನ್ನು ತಲುಪಿದೆ. ಬಿಸಿಸಿಐ ಯೋಜನೆ ಪ್ರಕಾರ ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ಇಬ್ಬರೂ ಅಮೆರಿಕ ಪ್ರವಾಸಿ ತಂಡದಲ್ಲಿ ಮಾತ್ರ ಇರಬೇಕಿತ್ತು. 15 ಆಟಗಾರರ ಪೈಕಿ ಯಾರಾದ್ರೂ ಗಾಯಗೊಂಡಿದ್ರೆ ರಿಪ್ಲೇಸ್ ಮಾಡಲು ಮಾತ್ರ ಅವಕಾಶ ಇತ್ತು. ಆದ್ರೆ ಆಟಗಾರನಿಗೆ ಗಾಯವಾಗದ ಹೊರತು ಮೀಸಲು ಆಟಗಾರರು ತಂಡದಲ್ಲಿ ಆಡಲು ಸಾಧ್ಯವಿಲ್ಲ. ಯಾವುದೇ ಆಟಗಾರನಿಗೆ ಹಠಾತ್ ಗಾಯವಾದ ಸಂದರ್ಭದಲ್ಲಿ ಭಾರತದಿಂದ ಯಾವುದೇ ಹೆಚ್ಚುವರಿ ಆಟಗಾರನನ್ನು ತಕ್ಷಣವೇ ಅಮೆರಿಕ ಅಥವಾ ಕೆರಿಬಿಯನ್ ದೇಶಕ್ಕೆ ಕಳುಹಿಸಲು ಬಿಸಿಸಿಐಗೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಭಾರತ ಮಾತ್ರವಲ್ಲದೇ ಎಲ್ಲಾ ದೇಶದ ತಂಡದಲ್ಲಿಯೂ ಮೀಸಲು ಆಟಗಾರರನ್ನು ಇರಿಸಲಾಗುತ್ತದೆ.

ಜೂನ್ 20 ರಂದು ಭಾರತ ತಂಡ ಸೂಪರ್ 8ರ ಮೊದಲ ಪಂದ್ಯವನ್ನು ಆಡಲಿದೆ. ಇತರ ಎರಡು ಸೂಪರ್ 8 ಪಂದ್ಯಗಳು ಜೂನ್ 22 ರಂದು ಆಂಟಿಗುವಾ ಮತ್ತು ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ನಡೆಯಲಿವೆ. ಹೀಗಾಗಿ ಸೂಪರ್‌ 8 ಹಂತದ ವೇಳೆಗೆ ಗಿಲ್‌ ಹಾಗೂ ಆವೇಶ್‌ ಖಾನ್‌ ತಂಡದಲ್ಲಿ ಇರುವುದಿಲ್ಲ ಎಂದು ವರದಿಯಾಗಿದೆ. ಅಸಲಿಗೆ ಗಿಲ್ ಟೀಮ್ ಇಂಡಿಯಾದ ಸೆನ್ಸೇಷನಲ್ ಪ್ಲೇಯರ್. ಡೆಬ್ಯು ಮಾಡಿದ ವರ್ಷವೇ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಮೂಡಿಸಿದ್ರು. ಟೆಸ್ಟ್​, ಏಕದಿನ ಕ್ರಿಕೆಟ್​​ನಲ್ಲಿ ರನ್​​ ಮಳೆ ಹರಿಸಿ ವಿಶ್ವ ಕ್ರಿಕೆಟ್​ನ ಭವಿಷ್ಯದ ರೂಲರ್ ಆಗಿ ಗುರುತಿಸಿಕೊಂಡಿದ್ರು. ಆದ್ರೀಗ ಇದೇ ಗಿಲ್​​​​​​ಗೆ ಬೆಂಚ್ ಖಾಯಂ ಆಗಿದೆ. ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸಿದ್ದ ಶುಭ್​​ಮನ್, ಟಿ20 ವಿಶ್ವಕಪ್​ನಲ್ಲಿ ರಿಸರ್ವ​ಡ್​​ ಪ್ಲೇಯರ್ ಆಗಿದ್ದಾರೆ. ಇತ್ತ ಆವೇಶ್ ಖಾಲ್ ಸ್ಥಿತಿಯೂ ಭಿನ್ನವಾಗಿಲ್ಲ.

Shwetha M

Leave a Reply

Your email address will not be published. Required fields are marked *