ಅಭಿಮಾನಿಗಳ ಮನಗೆದ್ದ ಗಿಲ್ ಮತ್ತು ಧ್ರುವ್ – ಭಾರತದ ಕ್ರಿಕೆಟ್ ಹೀರೋಗಳು ಗೆಲುವಿನ ದಡ ಸೇರಿದ್ದು ಹೇಗೆ ಗೊತ್ತಾ?

ಅಭಿಮಾನಿಗಳ ಮನಗೆದ್ದ ಗಿಲ್ ಮತ್ತು ಧ್ರುವ್ – ಭಾರತದ ಕ್ರಿಕೆಟ್ ಹೀರೋಗಳು ಗೆಲುವಿನ ದಡ ಸೇರಿದ್ದು ಹೇಗೆ ಗೊತ್ತಾ?

ರೋಹಿತ್ ಶರ್ಮಾರ ಯುವ ಸೈನ್ಯ ಇಂಗ್ಲೆಂಡ್ ಟೀಮ್​ಗೆ ಮುಟ್ಟಿ ನೋಡಿಕೊಳ್ಳುವಂತಾ ಹೊಡೆತ ಕೊಟ್ಟಿದೆ. ಬೆನ್​ಸ್ಟೋಕ್ಸ್​ ಅಂದುಕೊಂಡಿದ್ದೆಲ್ಲಾ ಮೇಲೆ ಕೆಳಗಾಗಿದೆ. 4ನೇ ಟೆಸ್ಟ್​ನ ನಾಲ್ಕನೇ ದಿನದಾಟದಲ್ಲಿ ಅಕ್ಷರಶ: ಕಮಾಲ್ ಕಾ ಪರ್ಫಾಮೆನ್ಸ್. ಹಾಗಂತಾ ಟೀಂ ಇಂಡಿಯಾ ತುಂಬಾ ಸುಲಭದಲ್ಲಂತೂ ಈ ಮ್ಯಾಚ್​ ಗೆದ್ದಿಲ್ಲ. ಮ್ಯಾಚ್ ಕುತ್ತಿಗೆವರೆಗೂ ಬಂದಿತ್ತು. ಉಗುರು ಕಚ್ಚಿಕೊಂಡು ನೋಡುವಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಬ್ಬರು ಯಂಗ್​ಸ್ಟರ್ಸ್​ ಕಲ್ಲಿನಂತೆ ನಿಂತು ಭಾರತವನ್ನ ಬಚಾವ್ ಮಾಡಿದ್ದಾರೆ.

ಇದನ್ನೂ ಓದಿ:ರಾಂಚಿ ಗೆಲುವಿನೊಂದಿಗೆ ಸತತ 17ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

4ನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾಗೆ ಗೆಲ್ಲೋಕೆ​ ಟಾರ್ಗೆಟ್ ಇದ್ದಿದ್ದು 192 ರನ್. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್​ನಲ್ಲಿದ್ದರು. ಮೂರನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಗೆಲುವನ್ನ ಸೆಟ್ ಮಾಡಿದ್ದರು. ನಮ್ಮ ಸ್ಕೋರ್ 40 ರನ್​ ಆಗಿತ್ತು. ನಾಲ್ಕನೇ ದಿನ ಗೆಲ್ಲೋಕೆ 152 ರನ್ ಬೇಕಾಗಿತ್ತು. ಕೈಯಲ್ಲಿ 10 ವಿಕೆಟ್​​ ಕೂಡ ಇತ್ತು. ಮ್ಯಾಚ್​ ಈಸಿಯಾಗೆ ಗೆದ್ದು ಬಿಡ್ತೀವಿ ಅಂದ್ಕೊಂಡ್ರೆ, ಬಿತ್ತು ನೋಡಿ ವಿಕೆಟ್​ಗಳು. ಆ್ಯಕ್ಚುವಲಿ ರೋಹಿತ್ ಮತ್ತು ಜೈಸ್ವಾಲ್​ ಇಬ್ಬರೂ ಚೆನ್ನಾಗಿಯೇ ಆಡಿದ್ದರು. ರೋಹಿತ್ ಶರ್ಮಾ 55 ರನ್ ಹೊಡೆದ್ರೆ, ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿದ್ರು. 84 ರನ್​ಗೆ ಟೀಂ ಇಂಡಿಯಾದ ಫಸ್ಟ್ ವಿಕೆಟ್ ಬೀಳುತ್ತೆ. ಜೈಸ್ವಾಲ್ ಔಟಾಗ್ತಿದ್ದಂತೆ ಪರೇಡ್ ಶುರುವಾಗುತ್ತೆ. 99 ರನ್​ಗೆ 2ನೇ ವಿಕೆಟ್. ರೋಹಿತ್ ಶರ್ಮಾ ಸ್ಟಂಪ್ ಔಟಾಗ್ತಾರೆ. ಆಮೇಲೆ ಕ್ರೀಸ್​ಗಿಳಿದಿದ್ದು ರಜತ್ ಪಾಟೀದಾರ್. ಮತ್ತೊಮ್ಮೆ ಸೊನ್ನೆ. ಈ ಸೀರಿಸ್​​ನಲ್ಲಿ ರಜತ್ ಪಾಟೀದಾರ್ ಸ್ಕೋರ್ 9, 32, 0, 5, 17, 0.. ನೆಕ್ಸ್ಟ್ ಮ್ಯಾಚ್​ಗೆ ಸೆಲೆಕ್ಟ್ ಆಗೋಕೆ ಚಾನ್ಸೇ ಇಲ್ಲ. ನಮ್ಮಲ್ಲಿ ಬೇಜಾನ್ ಟ್ಯಾಲೆಂಟೆಡ್​ ಬ್ಯಾಟ್ಸ್​​ಮನ್​ಗಳು ಕಾಯ್ತಾ ಇದ್ದಾರೆ. ಅವರಿಗಾದ್ರೂ ಚಾನ್ಸ್ ಕೊಡ್ಬಹುದು. ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಇದ್ದಾರೆ. ಆವರನ್ನ ಈ ಮ್ಯಾಚ್​ನಲ್ಲಿ ಆಡಿಸಿಲ್ಲ. ಹೀಗಾಗಿ ರಜತ್​ ಪಾಟೀದಾರ್​​ರನ್ನ ಡ್ರಾಪ್ ಮಾಡಿ ಐದನೇ ಟೆಸ್ಟ್​ನಲ್ಲಿ ಪಡಿಕ್ಕಲ್​ಗೆ ಅವಕಾಶ ನೀಡಬಹುದು. ಓಕೆ ಪಾಟೀದಾರ್ ಔಟಾದ್ಮೇಲೆ ರವೀಂದ್ರ ಜಡೇಜಾ ಕೂಡಾ ಔಟ್. 120-4 ವಿಕೆಟ್ ಬಿದ್ದಿರುತ್ತೆ. ನಂತರ ಬಂದ ಸರ್ಫರಾಜ್ ಕೂಡ ಸೊನ್ನೆ ಸುತ್ತಿದ್ರು. 120-5 ವಿಕೆಟ್ ಢಮಾರ್. 20 ಓವರ್​ಗಳ ಅಂತರದಲ್ಲಿ ಕೇವಲ 36 ರನ್​ ಮಾಡೋವಷ್ಟರಲ್ಲೇ ನಮ್ಮ ಐದು ವಿಕೆಟ್​​ಗಳು ಬಿದ್ದಿದ್ವು.

ಟೀಮ್ ಇಂಡಿಯಾ ಗೆಲ್ಲಲು ಇನ್ನೂ 72 ರನ್​ಗಳು ಬೇಕಾಗಿತ್ತು. ಆಗ ಶುರುವಾಯ್ತು ಅಸಲಿ ಆಟ. ಶುಬ್ಮನ್ ಗಿಲ್ ಮತ್ತು ಧ್ರುವ್ ಜ್ಯುರೆಲ್ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ರು. ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರೆಷರ್​ ಸ್ವಿಚ್ಯುವೇಶನ್​ನಲ್ಲಿ ಹೇಗೆ ಆಡಬೇಕು ಅನ್ನೋದನ್ನ ತೋರಿಸಿಕೊಟ್ರು. ಶುಬ್ಮನ್ ಗಿಲ್ ಅಂತೂ 124 ಬಾಲ್​ಗಳನ್ನ ಫೇಸ್ ಮಾಡಿ 52 ರನ್ ಹೊಡೆದ್ರು. ಧ್ರುವ್ ಜ್ಯುರೆಲ್ 77 ಬಾಲ್​ಗಳಲ್ಲಿ 39 ರನ್ ಗಳಿಸಿದ್ರು. ಇಬ್ಬರ ಬೆಸ್ಟ್ ಪಾರ್ಟ್ನರ್​​ಶಿಪ್​​ನಿಂದಾಗಿ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಗೆದ್ದು, ಸೀರಿಸ್ ಕೂಡ ಗೆದ್ದುಕೊಂಡಿದೆ. ಧ್ರುವ್ ಜ್ಯುರೆಲ್ ಅಂತೂ ನಿಜಕ್ಕೂ ತುಂಬಾನೆ ಇಂಪ್ರೆಸಿವ್ ಆಗಿ ಆಡಿದ್ದಾರೆ. ಹೇಗೆ ಈ ಹಿಂದೆ ರಿಷಬ್ ಪಂತ್ ಟೆಸ್ಟ್​​ನಲ್ಲಿ ಫೀಯರ್​ಲೆಸ್ ಬ್ಯಾಟಿಂಗ್​ ಮಾಡ್ತಿದ್ರೋ, ಅದೇ ರೀತಿ ಧ್ರುವ್ ಜ್ಯುರೆಲ್ ಕೂಡ ಅಂಥಾ ಪ್ರೆಷರ್ ಟೈಮ್​​ನಲ್ಲೂ ಸ್ಮೂತ್ ಆಗಿ ಆಡಿದ್ರು. ಕ್ಲಾಸ್​ ಶಾಟ್​ಗಳು.. ಎಲ್ಲೂ ಕೂಡ ಅವಸರ ಮಾಡಿಲ್ಲ.. ಲೂಸ್​​ ಶಾಟ್ಸ್​ ಹೊಡೆದಿಲ್ಲ. ಸ್ಟೈಕ್​ ರೊಟೇಟ್ ಮಾಡೋಕೆ ಹೆಚ್ಚು ಪ್ರಿಫರೆನ್ಸ್ ಕೊಟ್ರು. ಧ್ರುವ್ ಜ್ಯುರೆಲ್ ಬ್ಯಾಟಿಂಗ್ ನೋಡೋಕೂ ಖುಷಿಯಾಗುತ್ತೆ.  ನೋ ಡೌಟ್ ಟೀಂ ಇಂಡಿಯಾಗೆ ಒಬ್ಬ ಸ್ಪೆಷಲ್ ಟ್ಯಾಲೆಂಟ್ ಸಿಕ್ಕಿರೋದಂತೂ ಸತ್ಯ. ಸುನಿಲ್ ಗವಾಸ್ಕರ್ ಅಂತೂ ಧ್ರುವ್​ ಜ್ಯುರೆಲ್​​ರನ್ನ ಈಗಲೇ ಎಂ.ಎಸ್.ಧೋನಿಗೆ ಕಂಪೇರ್ ಮಾಡಿದ್ದಾರೆ. ಅದಕ್ಕೆ ಕಾರಣ ಜ್ಯುರೆಲ್ ವಿಕೆಟ್ ಕೀಪಿಂಗ್. ವಿಕೆಟ್ ಹಿಂದೆ ಸಖತ್ ಚಾಲೂ ಇದ್ದಾರೆ. ಅವರು ಮಾಡಿರೋ ರನ್ನೌಟ್, ಸ್ಟಂಪ್​, ಹಿಡಿದ ಕ್ಯಾಚ್​ಗಳು ಎಲ್ಲವೂ ತುಂಬಾನೆ ಸ್ಮಾರ್ಟ್ ಆಗಿದ್ವು.

ಇನ್ನು ಶುಬ್ಮನ್​​ ಗಿಲ್ ಆಡಿದ ರೀತಿ ನೋಡಿದ ಕೋಚ್ ರಾಹುಲ್ ದ್ರಾವಿಡ್ ಗೂ ಇಷ್ಟವಾಗಿದೆ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಗಿಲ್ ಆಲ್​ಮೋಸ್ಟ್ ದ್ರಾವಿಡ್ ರೀತಿಯೇ ಕ್ರೀಸ್​​ನಲ್ಲಿ ಗಟ್ಟಿ ನಿಂತು ಆಡಿದ್ರು. ಈಗ ಫಾರ್ಮ್ ಗೆ​​ ಮರಳಿದ್ದಾರೆ. ಶುಬ್ಮನ್ ಗಿಲ್ ಹಲವು ದಿನಗಳ ಸ್ಟ್ರಗಲ್ ಎಂಡ್ ಆಗಿದೆ. ಹಾಗೆಯೇ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​​ ಲಿಸ್ಟ್​​ನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ನಂ.1, ಭಾರತ ನಂ.2, ಆಸ್ಟ್ರೇಲಿಯಾ ನಂ.3 ಪೊಸೀಶನ್​​ನಲ್ಲಿದೆ.

Sulekha