ಅಭಿಮಾನಿಗಳ ಮನಗೆದ್ದ ಗಿಲ್ ಮತ್ತು ಧ್ರುವ್ – ಭಾರತದ ಕ್ರಿಕೆಟ್ ಹೀರೋಗಳು ಗೆಲುವಿನ ದಡ ಸೇರಿದ್ದು ಹೇಗೆ ಗೊತ್ತಾ?
ರೋಹಿತ್ ಶರ್ಮಾರ ಯುವ ಸೈನ್ಯ ಇಂಗ್ಲೆಂಡ್ ಟೀಮ್ಗೆ ಮುಟ್ಟಿ ನೋಡಿಕೊಳ್ಳುವಂತಾ ಹೊಡೆತ ಕೊಟ್ಟಿದೆ. ಬೆನ್ಸ್ಟೋಕ್ಸ್ ಅಂದುಕೊಂಡಿದ್ದೆಲ್ಲಾ ಮೇಲೆ ಕೆಳಗಾಗಿದೆ. 4ನೇ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ಅಕ್ಷರಶ: ಕಮಾಲ್ ಕಾ ಪರ್ಫಾಮೆನ್ಸ್. ಹಾಗಂತಾ ಟೀಂ ಇಂಡಿಯಾ ತುಂಬಾ ಸುಲಭದಲ್ಲಂತೂ ಈ ಮ್ಯಾಚ್ ಗೆದ್ದಿಲ್ಲ. ಮ್ಯಾಚ್ ಕುತ್ತಿಗೆವರೆಗೂ ಬಂದಿತ್ತು. ಉಗುರು ಕಚ್ಚಿಕೊಂಡು ನೋಡುವಂಥಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಬ್ಬರು ಯಂಗ್ಸ್ಟರ್ಸ್ ಕಲ್ಲಿನಂತೆ ನಿಂತು ಭಾರತವನ್ನ ಬಚಾವ್ ಮಾಡಿದ್ದಾರೆ.
ಇದನ್ನೂ ಓದಿ:ರಾಂಚಿ ಗೆಲುವಿನೊಂದಿಗೆ ಸತತ 17ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ
4ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾಗೆ ಗೆಲ್ಲೋಕೆ ಟಾರ್ಗೆಟ್ ಇದ್ದಿದ್ದು 192 ರನ್. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್ನಲ್ಲಿದ್ದರು. ಮೂರನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಗೆಲುವನ್ನ ಸೆಟ್ ಮಾಡಿದ್ದರು. ನಮ್ಮ ಸ್ಕೋರ್ 40 ರನ್ ಆಗಿತ್ತು. ನಾಲ್ಕನೇ ದಿನ ಗೆಲ್ಲೋಕೆ 152 ರನ್ ಬೇಕಾಗಿತ್ತು. ಕೈಯಲ್ಲಿ 10 ವಿಕೆಟ್ ಕೂಡ ಇತ್ತು. ಮ್ಯಾಚ್ ಈಸಿಯಾಗೆ ಗೆದ್ದು ಬಿಡ್ತೀವಿ ಅಂದ್ಕೊಂಡ್ರೆ, ಬಿತ್ತು ನೋಡಿ ವಿಕೆಟ್ಗಳು. ಆ್ಯಕ್ಚುವಲಿ ರೋಹಿತ್ ಮತ್ತು ಜೈಸ್ವಾಲ್ ಇಬ್ಬರೂ ಚೆನ್ನಾಗಿಯೇ ಆಡಿದ್ದರು. ರೋಹಿತ್ ಶರ್ಮಾ 55 ರನ್ ಹೊಡೆದ್ರೆ, ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿದ್ರು. 84 ರನ್ಗೆ ಟೀಂ ಇಂಡಿಯಾದ ಫಸ್ಟ್ ವಿಕೆಟ್ ಬೀಳುತ್ತೆ. ಜೈಸ್ವಾಲ್ ಔಟಾಗ್ತಿದ್ದಂತೆ ಪರೇಡ್ ಶುರುವಾಗುತ್ತೆ. 99 ರನ್ಗೆ 2ನೇ ವಿಕೆಟ್. ರೋಹಿತ್ ಶರ್ಮಾ ಸ್ಟಂಪ್ ಔಟಾಗ್ತಾರೆ. ಆಮೇಲೆ ಕ್ರೀಸ್ಗಿಳಿದಿದ್ದು ರಜತ್ ಪಾಟೀದಾರ್. ಮತ್ತೊಮ್ಮೆ ಸೊನ್ನೆ. ಈ ಸೀರಿಸ್ನಲ್ಲಿ ರಜತ್ ಪಾಟೀದಾರ್ ಸ್ಕೋರ್ 9, 32, 0, 5, 17, 0.. ನೆಕ್ಸ್ಟ್ ಮ್ಯಾಚ್ಗೆ ಸೆಲೆಕ್ಟ್ ಆಗೋಕೆ ಚಾನ್ಸೇ ಇಲ್ಲ. ನಮ್ಮಲ್ಲಿ ಬೇಜಾನ್ ಟ್ಯಾಲೆಂಟೆಡ್ ಬ್ಯಾಟ್ಸ್ಮನ್ಗಳು ಕಾಯ್ತಾ ಇದ್ದಾರೆ. ಅವರಿಗಾದ್ರೂ ಚಾನ್ಸ್ ಕೊಡ್ಬಹುದು. ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಇದ್ದಾರೆ. ಆವರನ್ನ ಈ ಮ್ಯಾಚ್ನಲ್ಲಿ ಆಡಿಸಿಲ್ಲ. ಹೀಗಾಗಿ ರಜತ್ ಪಾಟೀದಾರ್ರನ್ನ ಡ್ರಾಪ್ ಮಾಡಿ ಐದನೇ ಟೆಸ್ಟ್ನಲ್ಲಿ ಪಡಿಕ್ಕಲ್ಗೆ ಅವಕಾಶ ನೀಡಬಹುದು. ಓಕೆ ಪಾಟೀದಾರ್ ಔಟಾದ್ಮೇಲೆ ರವೀಂದ್ರ ಜಡೇಜಾ ಕೂಡಾ ಔಟ್. 120-4 ವಿಕೆಟ್ ಬಿದ್ದಿರುತ್ತೆ. ನಂತರ ಬಂದ ಸರ್ಫರಾಜ್ ಕೂಡ ಸೊನ್ನೆ ಸುತ್ತಿದ್ರು. 120-5 ವಿಕೆಟ್ ಢಮಾರ್. 20 ಓವರ್ಗಳ ಅಂತರದಲ್ಲಿ ಕೇವಲ 36 ರನ್ ಮಾಡೋವಷ್ಟರಲ್ಲೇ ನಮ್ಮ ಐದು ವಿಕೆಟ್ಗಳು ಬಿದ್ದಿದ್ವು.
ಟೀಮ್ ಇಂಡಿಯಾ ಗೆಲ್ಲಲು ಇನ್ನೂ 72 ರನ್ಗಳು ಬೇಕಾಗಿತ್ತು. ಆಗ ಶುರುವಾಯ್ತು ಅಸಲಿ ಆಟ. ಶುಬ್ಮನ್ ಗಿಲ್ ಮತ್ತು ಧ್ರುವ್ ಜ್ಯುರೆಲ್ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ಪ್ರೆಷರ್ ಸ್ವಿಚ್ಯುವೇಶನ್ನಲ್ಲಿ ಹೇಗೆ ಆಡಬೇಕು ಅನ್ನೋದನ್ನ ತೋರಿಸಿಕೊಟ್ರು. ಶುಬ್ಮನ್ ಗಿಲ್ ಅಂತೂ 124 ಬಾಲ್ಗಳನ್ನ ಫೇಸ್ ಮಾಡಿ 52 ರನ್ ಹೊಡೆದ್ರು. ಧ್ರುವ್ ಜ್ಯುರೆಲ್ 77 ಬಾಲ್ಗಳಲ್ಲಿ 39 ರನ್ ಗಳಿಸಿದ್ರು. ಇಬ್ಬರ ಬೆಸ್ಟ್ ಪಾರ್ಟ್ನರ್ಶಿಪ್ನಿಂದಾಗಿ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಗೆದ್ದು, ಸೀರಿಸ್ ಕೂಡ ಗೆದ್ದುಕೊಂಡಿದೆ. ಧ್ರುವ್ ಜ್ಯುರೆಲ್ ಅಂತೂ ನಿಜಕ್ಕೂ ತುಂಬಾನೆ ಇಂಪ್ರೆಸಿವ್ ಆಗಿ ಆಡಿದ್ದಾರೆ. ಹೇಗೆ ಈ ಹಿಂದೆ ರಿಷಬ್ ಪಂತ್ ಟೆಸ್ಟ್ನಲ್ಲಿ ಫೀಯರ್ಲೆಸ್ ಬ್ಯಾಟಿಂಗ್ ಮಾಡ್ತಿದ್ರೋ, ಅದೇ ರೀತಿ ಧ್ರುವ್ ಜ್ಯುರೆಲ್ ಕೂಡ ಅಂಥಾ ಪ್ರೆಷರ್ ಟೈಮ್ನಲ್ಲೂ ಸ್ಮೂತ್ ಆಗಿ ಆಡಿದ್ರು. ಕ್ಲಾಸ್ ಶಾಟ್ಗಳು.. ಎಲ್ಲೂ ಕೂಡ ಅವಸರ ಮಾಡಿಲ್ಲ.. ಲೂಸ್ ಶಾಟ್ಸ್ ಹೊಡೆದಿಲ್ಲ. ಸ್ಟೈಕ್ ರೊಟೇಟ್ ಮಾಡೋಕೆ ಹೆಚ್ಚು ಪ್ರಿಫರೆನ್ಸ್ ಕೊಟ್ರು. ಧ್ರುವ್ ಜ್ಯುರೆಲ್ ಬ್ಯಾಟಿಂಗ್ ನೋಡೋಕೂ ಖುಷಿಯಾಗುತ್ತೆ. ನೋ ಡೌಟ್ ಟೀಂ ಇಂಡಿಯಾಗೆ ಒಬ್ಬ ಸ್ಪೆಷಲ್ ಟ್ಯಾಲೆಂಟ್ ಸಿಕ್ಕಿರೋದಂತೂ ಸತ್ಯ. ಸುನಿಲ್ ಗವಾಸ್ಕರ್ ಅಂತೂ ಧ್ರುವ್ ಜ್ಯುರೆಲ್ರನ್ನ ಈಗಲೇ ಎಂ.ಎಸ್.ಧೋನಿಗೆ ಕಂಪೇರ್ ಮಾಡಿದ್ದಾರೆ. ಅದಕ್ಕೆ ಕಾರಣ ಜ್ಯುರೆಲ್ ವಿಕೆಟ್ ಕೀಪಿಂಗ್. ವಿಕೆಟ್ ಹಿಂದೆ ಸಖತ್ ಚಾಲೂ ಇದ್ದಾರೆ. ಅವರು ಮಾಡಿರೋ ರನ್ನೌಟ್, ಸ್ಟಂಪ್, ಹಿಡಿದ ಕ್ಯಾಚ್ಗಳು ಎಲ್ಲವೂ ತುಂಬಾನೆ ಸ್ಮಾರ್ಟ್ ಆಗಿದ್ವು.
ಇನ್ನು ಶುಬ್ಮನ್ ಗಿಲ್ ಆಡಿದ ರೀತಿ ನೋಡಿದ ಕೋಚ್ ರಾಹುಲ್ ದ್ರಾವಿಡ್ ಗೂ ಇಷ್ಟವಾಗಿದೆ. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಗಿಲ್ ಆಲ್ಮೋಸ್ಟ್ ದ್ರಾವಿಡ್ ರೀತಿಯೇ ಕ್ರೀಸ್ನಲ್ಲಿ ಗಟ್ಟಿ ನಿಂತು ಆಡಿದ್ರು. ಈಗ ಫಾರ್ಮ್ ಗೆ ಮರಳಿದ್ದಾರೆ. ಶುಬ್ಮನ್ ಗಿಲ್ ಹಲವು ದಿನಗಳ ಸ್ಟ್ರಗಲ್ ಎಂಡ್ ಆಗಿದೆ. ಹಾಗೆಯೇ ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಲಿಸ್ಟ್ನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ನಂ.1, ಭಾರತ ನಂ.2, ಆಸ್ಟ್ರೇಲಿಯಾ ನಂ.3 ಪೊಸೀಶನ್ನಲ್ಲಿದೆ.