ಗೋಡಂಬಿ ಹಾಗೂ ತೆಂಗು ಬೆಳೆಗಾರರಿಗೆ ಬಂಪರ್ – ಕ್ಯಾನ್ಸರ್, ಮಧುಮೇಹ ಔಷಧಿ ಅಗ್ಗ

ಗೋಡಂಬಿ ಹಾಗೂ ತೆಂಗು ಬೆಳೆಗಾರರಿಗೆ ಬಂಪರ್ – ಕ್ಯಾನ್ಸರ್, ಮಧುಮೇಹ ಔಷಧಿ ಅಗ್ಗ

ತೆಂಗು ಮಾರಾಟಗಾರರಿಗೆ ಬಜೆಟ್‌ನಲ್ಲಿ ಬಂಪರ್ ನ್ಯೂಸ್ ಸಿಕ್ಕಿದೆ. ಇತ್ತೀಚೆಗೆ ತೆಂಗು ರೇಟ್ ಜಾಸ್ತಿಯಾಗುತ್ತಿದೆ. ಇದೇ ಸಮಯದಲ್ಲಿ ತೆಂಗು ಬೆಳೆ ಮತ್ತು ಮಾರಾಟಕ್ಕೆ ವಿಶೇಷ ಯೋಜನೆ ತಂದಿದೆ ಕೇಂದ್ರ ಸರ್ಕಾರ. ಇದಲ್ಲದೇ, ಶ್ರೀಗಂಧ ಬೆಳೆಯಲು ವಿಶೇಷ ಉತ್ತೇಜನ ನೀಡಲಿದೆ.

ಇದನ್ನೂ ಓದಿ: ಖಾದಿ ಉದ್ಯಮಕ್ಕೆ ಗಾಂಧಿ ಹೆಸರು – ಚೆನ್ನೈ- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ 4 ರಾಜ್ಯಗಳಿಗೆ ಕೇಂದ್ರದಿಂದ ಬಂಪರ್ ಗಿಫ್ಟ್

ಗೋಡಂಬಿ ಸೇರಿದಂತೆ ಹಲವು ಒಣ ಹಣ್ಣುಗಳ ಬೆಳೆಗೆ ಒತ್ತು ನೀಡಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಕೋಕೋ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಲಾಗಿದೆ. ಭಾರತವನ್ನು ಕಚ್ಚಾ ಗೋಡಂಬಿ ಮತ್ತು ತೆಂಗಿನಕಾಯಿ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ಅದರ ಪ್ರಮುಖ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು 2030 ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಭಾರತೀಯ ಕೋಕೋವನ್ನು ಪ್ರೀಮಿಯಂ ಜಾಗತಿಕ ಬ್ರಾಂಡ್‌ಗಳನ್ನಾಗಿ ಪರಿವರ್ತಿಸಲು ಹಣಕಾಸು ಸಚಿವೆ ಸೀತಾರಾಮನ್ ಅವರು ಭಾರತೀಯ ಗೋಡಂಬಿ ಮತ್ತು ಕೋಕೋಗೆ ಯೋಜನೆ ಘೋಷಣೆ ಮಾಡಲಾಗಿದೆ.

ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆ

ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಒತ್ತು ನೀಡಲಾಗಿದೆ. ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗೆ ಶಿ-ಮಾರ್ಟ್‌ಗಳು ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ಸ್ವ-ಸಹಾಯ ಉದ್ಯಮಗಳು ಅಂದರೆ ಶಿ-ಮಾರ್ಟ್ಗಳನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

Sulekha