9 ಕೆಜಿ ಚಿನ್ನ.. 2 ಕೋಟಿ ಹಣ.. ಸಾವಿರ ಸೀರೆ – ಅಬ್ಬಬ್ಬಾ ‘ಮತ’ಕ್ಕಾಗಿ ಏನೆಲ್ಲಾ ಅಡ್ಡದಾರಿ..!?

9 ಕೆಜಿ ಚಿನ್ನ.. 2 ಕೋಟಿ ಹಣ.. ಸಾವಿರ ಸೀರೆ – ಅಬ್ಬಬ್ಬಾ ‘ಮತ’ಕ್ಕಾಗಿ ಏನೆಲ್ಲಾ ಅಡ್ಡದಾರಿ..!?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಈಗಾಗ್ಲೇ ಮತದಾರರ ಮನಗೆಲ್ಲೋಕೆ ಕುಕ್ಕರ್, ಸೀರೆ ಅಂತಾ ಹತ್ತಾರು ಗಿಫ್ಟ್ ನೀಡುತ್ತಿದ್ದಾರೆ. ಹೀಗಾಗಿ ಜಿಲ್ಲೆಗಳ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್​ಗಳನ್ನ ನಿರ್ಮಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಗೊಂದಲ -ಘೋಷಣೆಗೂ ಮುನ್ನವೇ ಕಾದಾಟ..!

ಚಿಕ್ಕಮಗಳೂರಿನ ತರೀಕೆರೆ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ನಡೆಸುವ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9 ಕೆಜಿ ಚಿನ್ನ ಪತ್ತೆಯಾಗಿದೆ. ಪಿಕಪ್ ವಾಹನದಲ್ಲಿ ಸಾಗಾಟ ಮಾಡ್ತಿದ್ದ 2 ಕೋಟಿ 30 ಲಕ್ಷ ರೂಪಾಯಿ ಮೌಲ್ಯದ 9 ಕೆಜಿ 300 ಗ್ರಾಂ ಚಿನ್ನವನ್ನ ಜಪ್ತಿ ಮಾಡಲಾಗಿದೆ. ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಪಿಕಪ್ ವಾಹನ ಸವಾರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹಾಗೇ ಚಿಕ್ಕಮಗಳೂರಿನ ಜಯನಗರದಲ್ಲಿರುವ ವಿ.ಆರ್.ಎಲ್. ಲಾಜಿಸ್ಟಿಕ್ಸ್ ಗೋದಾಮಿನಲ್ಲಿ  ಮತದಾರರಿಗೆ ಹಂಚಲು ಇರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೀರೆಗಳನ್ನ ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ಸೂರತ್​ನಿಂದ ಬುಕ್ ಮಾಡಿರುವ ವಿಷಯ ಬೆಳಕಿಗೆ ಬಂದಿದೆ..

ಮತ್ತೊಂದೆಡೆ ಕಲಬುರಗಿ ಜಿಲ್ಲೆಯಲ್ಲೂ ಚೆಕ್ ಪೋಸ್ಟ್ ಪರಿಶೀಲನೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.9ಕೋಟಿ ಹಣವನ್ನ ಸೀಜ್ ಮಾಡಲಾಗಿದೆ. ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಈಗಿನಿಂತದಲೇ ಮತದಾರರನ್ನ ಸೆಳೆಯೋಕೆ ನಾನಾ ಕಸರತ್ತು ನಡೆಸುತ್ತಿದ್ದಾರೆ.

suddiyaana