ಈ ರೋಡ್ಗೆ ನಾನೇ ಡಾನ್! – ಕಾರಿನ ಮೇಲೆ ಗೂಳಿಯಿಂದ ಡೆಡ್ಲಿ ಅಟ್ಯಾಕ್!

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ವಾಹನಗಳ ಮೇಲೆ ಗೂಳಿಗಳು ದಾಳಿ ನಡೆಸುತ್ತವೆ. ಗೂಳಿ ದಾಳಿ ನಡೆಸಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗಗ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಪುಣೆಯ ಮುಲ್ಶಿಯಲ್ಲಿ ಬೀಡಾಡಿ ಗೂಳಿಯೊಂದು ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಪೌರುಷ ಮೆರೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಪ್ಪುಗೆ ಗೊತ್ತಾಯ್ತು ಅಪ್ಪನ ರಹಸ್ಯ! – ಗೌತಮ್ನ ಅಪ್ಪಿಕೊಂಡ ಆಕಾಶ್
ಪುಣೆಯ ಮುಲ್ಶಿಯ ಮಾನ್-ಘೋಟ್ವಾಡೆ ರಸ್ತೆಯಲ್ಲಿರುವ ಬಾಪುಜಿಬುವಾ ಘಾಟ್ನಲ್ಲಿ ಈ ಘಟನೆ ನಡೆದಿದ್ದು, ದಾರಿತಪ್ಪಿ ಗೂಳಿಯೊಂದು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಅದರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಗೂಳಿಯ ಅಟ್ಟಹಾಸಕ್ಕೆ ಕಾರು ಚಾಲಕ ಭಯಭೀತರಾಗಿದ್ದು, ಸರಿಯಾದ ಸಮಕ್ಕೆ ಬಂದಂತಹ ರಾಜಕೀಯ ನಾಯಕ ಬಾಬಾಜಿ ಶೆಲ್ಕೆ ಟ್ರ್ಯಾಕ್ಟರ್ ಏರಿ ಗೂಳಿಯನ್ನು ಓಡಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ರಸ್ತೆ ಬದಿಯಲ್ಲಿ ನಿಂತಿದ್ದ ದೈತ್ಯ ಗೂಳಿ ಕಾರಿನ ಮೇಲೆ ದಾಳಿ ಮಾಡಿ ಅದು ಕಾರಿನ ಮುಂಭಾಗದ ಹೆಡ್ಲೈಟ್ ಅನ್ನು ಮುರಿಯಲು ಪ್ರಯತ್ನಿಸಿತು. ಈ ದಾಳಿಯಿಂದ ಹೇಗೆ ತಪ್ಪಿಸಿಕೊಂಡು ಹೋಗುವುದು ಎಂದು ದಿಕ್ಕು ತೋಚದೆ ಚಾರು ಚಾಲಕ ಕಾರೊಳಗೆಯೇ ಕುಳಿತಿದ್ದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಬಂದು ರಾಜಕೀಯ ಬಾಬಾಜಿ ಶೆಲ್ಕೆ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಹೌದು ಪರಿಸ್ಥಿತಿ ಕೈ ಮೀರುತ್ತಿದ್ದಂತೆ, ಹತ್ತಿರದ ಟ್ರ್ಯಾಕ್ಟರ್ ಚಾಲಕನಿಗೆ ಗೂಳಿಯನ್ನು ದೂರ ಸರಿಸಲು ವಿನಂತಿಸಲಾಯಿತು, ಆದರೆ, ಭಯದಿಂದಾಗಿ ಟ್ರ್ಯಾಕ್ಟರ್ ಚಾಲಕ ಮುಂದೆ ಬರಲು ಸಿದ್ಧರಿರಲಿಲ್ಲ. ಕೊನೆಗೆ ಬಾಬಾಜಿ ಶೆಲ್ಕೆ ಸ್ವತಃ ಟ್ರ್ಯಾಕ್ಟರ್ ಏರಿ ಅದರ ಸಹಾಯದಿಂದ ಗೂಳಿಯನ್ನು ಅಲ್ಲಿಂದ ಓಡಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗೂಳಿಯೊಂದು ನಡು ರಸ್ತೆಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಪೌರುಷ ಮೆರೆಯುತ್ತಿರುವ ದೃಶ್ಯವನ್ನು ಕಾಣಬಹುದು. ಇನ್ನೇನು ಪರಿಸ್ಥಿತಿ ಕೈ ಮೀರುತ್ತಿದೆ ಎನ್ನುವಷ್ಟರಲ್ಲಿ ಸ್ಥಳಕ್ಕಾಗಮಿಸಿದ ಬಾಬಾಜಿ ಶೆಲ್ಕೆ ಸ್ವತಃ ತಾವೇ ಟ್ರ್ಯಾಕ್ಟರ್ ಏರಿ ಮುಂದಿನಿಂದ ಟ್ರ್ಯಾಕ್ಟರ್ ಓಡಿಸುತ್ತಾ ಬಂದು ಗೂಳಿಯನ್ನು ಓಡಿಸಿದ್ದಾರೆ.

ನೋಡಿರಿ

