ರಕ್ಷಿತಾ ಶೆಟ್ಟಿ ಜೊತೆ ಗಿಲ್ಲಿ ಪವಿತ್ರ ಬಂಧನ – ಕಾವ್ಯಾಗೆ ಫಿನಾಲೆ ವೀಕ್‌ನಲ್ಲಿ ಶಾಕ್ ಕೊಟ್ಟ ಗಿಲ್ಲಿ

ರಕ್ಷಿತಾ ಶೆಟ್ಟಿ ಜೊತೆ ಗಿಲ್ಲಿ ಪವಿತ್ರ ಬಂಧನ – ಕಾವ್ಯಾಗೆ ಫಿನಾಲೆ ವೀಕ್‌ನಲ್ಲಿ ಶಾಕ್ ಕೊಟ್ಟ ಗಿಲ್ಲಿ

ಬಿಗ್‌ಬಾಸ್ ರಿಯಾಲಿಟಿ ಶೋ ಈಗ ಫಿನಾಲೆ ಹಂತದಲ್ಲಿದೆ. ಯಾವಾಗ ನೋಡಿದರೂ ಕಾವು ಕಾವು ಅಂತಾ ಹಿಂದೆ ತಿರುಗುತ್ತಿದ್ದ ಗಿಲ್ಲಿ ಈಗ ಬದಲಾಗಿದ್ದಾರೆ. ಕಾವ್ಯಾ ಕೂಡಾ ಗಿಲ್ಲಿ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಇದರ ಮಧ್ಯೆ ಗಿಲ್ಲಿ ನಟ ರಕ್ಷಿತಾ ಶೆಟ್ಟಿ ಜೊತೆ ಪವಿತ್ರ ಬಂಧನ ಉಂಟಾಗಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ:ಕಿಚ್ಚ ಸುದೀಪ್ ಮುಂದೆ ಗಿಲ್ಲಿ ಹವಾ – ಕುಣಿಗಲ್ ಉತ್ಸವದಲ್ಲಿ ಗಿಲ್ಲಿ ನಟನಿಗೆ ಜೈಕಾರ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರದಲ್ಲಿ, ಗಿಲ್ಲಿ ನಟ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮೊದಲ ಬಾರಿಗೆ ಕಾವುನ ಹೊರಗಿಟ್ಟು ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಗೆ ಸೂರಜ್ ಸಿಂಗ್ ಆಗಮಿಸಿದ್ದರು. ಸೀರಿಯಲ್ ಹೀರೋ ಆಗಿರುವ ಬಗ್ಗೆ ಸರ್‌ಪ್ರೈಸ್ ಕೊಟ್ಟರು. ಸೂರಜ್ ಜೊತೆ ಪವಿತ್ರ ಬಂಧನ ಸೀರಿಯಲ್ ತಂಡ ಕೂಡಾ ಆಗಮಿಸಿತ್ತು. ಆಗ ಪವಿತ್ರ ಬಂಧನ ತಂಡ ನಿಮಗೆ ಯಾರ ಜೊತೆ ಪವಿತ್ರ ಬಂಧನವಿದೆ ಎಂದು ಕೇಳಿದ್ದಾರೆ. ಆಗ ಗಿಲ್ಲಿ ಕೊಟ್ಟ ಉತ್ತರಕ್ಕೆ ಕಾವ್ಯ ಶಾಕ್ ಆಗಿದ್ದಾರೆ.

ಇಷ್ಟು ದಿನ ಕಾವ್ಯಾ ಸುತ್ತವೇ ಗಿರಕಿ ಹೊಡೆಯುತ್ತಿದ್ದ ಗಿಲ್ಲಿ ನಟ ಫಿನಾಲೆ ವಾರದಲ್ಲಿ ಬದಲಾದಂತೆ ಕಂಡು ಬರುತ್ತಿದೆ. ವೀಕೆಂಡ್ ಸಂಚಿಕೆಯಲ್ಲಿ ಗಿಲ್ಲಿಯೇ ತನ್ನ ಸುತ್ತ ಸರ್ಕಲ್ ಎಳೆದಿದ್ದಾರೆ ಎಂದು ಕಾವ್ಯಾ ಹೇಳಿದ್ದರು. ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಗಿಲ್ಲಿ ನಟ ಹೇಳಿದ ಮಾತನ್ನು ಕೇಳಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ನಿಮಗೆ ಈ ಮನೆಯಲ್ಲಿ ಯಾರಿಗೆ ಯಾರ ಜೊತೆಯಲ್ಲಿ ಪವಿತ್ರ ಬಂಧನವಿದೆ ಎಂದು ಸೂರಜ್  ಕೇಳುತ್ತಾರೆ. ನನಗೆ ಫ್ರೆಂಡ್ ಆಗಿ ಗಿಲ್ಲಿ ನಟ ಸಿಕ್ಕರು ಎಂದು ರಕ್ಷಿತಾ ಹೇಳುತ್ತಾರೆ. ಹಾಗೆಯೇ ರಘು ಮತ್ತು ಕಾವ್ಯಾ ಸಹ ಗಿಲ್ಲಿಯೊಂದಿಗೆ ಪವಿತ್ರವಾದ ಬಂಧನ ಉಂಟಾಗಿದೆ ಅಂತ ಹೇಳಿದರು. ನಾನು ಮನೆಯಲ್ಲಿ ಊಟ ಮಾಡಿರುವ ತಟ್ಟೆಯನ್ನು ಸಹ ಎತ್ತಿಡದಂತಹ ವ್ಯಕ್ತಿ. ಈ ಮನೆಯಲ್ಲಿ ರಕ್ಷಿತಾ ನನಗೆ ಊಟದ ವಿಷಯದಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿದ್ದಾಳೆ. ಪ್ರತಿಯೊಂದು ವಿಷಯದಲ್ಲಿ ಕೇರ್ ಮಾಡುವ ರಕ್ಷಿತಾಳಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ. ಈ ಮನೆಯಲ್ಲಿ ರಕ್ಷಿತಾ ಮತ್ತು ನನ್ನ ನಡುವೆ ಪವಿತ್ರ ಬಂಧನ ಉಂಟಾಗಿದೆ ಎಂದು ಗಿಲ್ಲಿ ನಟ ವಿವರಿಸಿದರು. ಈ ಮಾತುಗಳನ್ನು ಹೇಳುವ ಸಂದರ್ಭದಲ್ಲಿ ಗಿಲ್ಲಿ ನಟ ಭಾವುಕರಾದರು. ಕಾವ್ಯ ಮಾತ್ರ ಶಾಕ್ ಆಗಿ ಕೂತಿರುವುದು ಕಂಡು ಬಂತು.

Sulekha