ಟೀ ಮಾಡಿಕೊಡುವ ವಿಚಾರಕ್ಕೆ ದಂಪತಿ ಮಧ್ಯೆ ಕಲಹ – ಸಿಟ್ಟಿನಿಂದ ಹೆಂಡತಿಯನ್ನು ಕೊಂದೇ ಬಿಟ್ಟ ಪಾಪಿ ಪತಿ!

ಟೀ ಮಾಡಿಕೊಡುವ ವಿಚಾರಕ್ಕೆ ದಂಪತಿ ಮಧ್ಯೆ ಕಲಹ – ಸಿಟ್ಟಿನಿಂದ ಹೆಂಡತಿಯನ್ನು ಕೊಂದೇ ಬಿಟ್ಟ ಪಾಪಿ ಪತಿ!

ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಸಹಜ. ಅದು ಲವ್ ಮ್ಯಾರೇಜ್ ಆಗಿರಲಿ ಅಥವಾ ಆರೆಂಜ್ಡ್ ಮ್ಯಾರೇಜ್ ಆಗಿರಲಿ ಗಂಡ ಹೆಂಡತಿ ಜಗಳ ಆಡುವುದು ಸಾಮಾನ್ಯ. ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಲೇ ಇರುತ್ತಾರೆ. ಕೆಲವೊಂದು ಬಾರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮನಸ್ತಾಪ ದೊಡ್ಡ ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ. ಸಣ್ಣ ಜಗಳ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಇದೆ. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಚಹಾ ಮಾಡಿಕೊಡುವ ವಿಚಾರಕ್ಕೆ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಹೈಅಲರ್ಟ್‌, KSRTC, BMTC ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ!

ಮನೆ ಕೆಲಸದ ವಿಚಾರದಲ್ಲಿ ಗಂಡ, ಹೆಂಡತಿ ಮಧ್ಯೆ ಜಗಳ ಬರುವುದು ಸಾಮಾನ್ಯ. ಗಂಡ ಕೆಲಸಕ್ಕೆ ಸಹಾಯ ಮಾಡುವುದಿಲ್ಲ ಅಂತಾ ಹೆಂಡತಿ ದೂರುವುದು, ಹೆಂಡತಿ ರುಚಿಯಾಗಿ ಅಡುಗೆ ಮಾಡಿಕೊಡುವುದಿಲ್ಲ ಅಂತಾ ದೂರುವುದು ಕಾಮನ್. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲೊಂದು ಬೆಚ್ಚಬೀಳಿಸುವ ಘಟನೆ ನಡೆದಿದೆ. ಚಹಾ ಮಾಡಿಕೊಡುವ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಕಲಹ ಉಂಟಾಗಿದೆ. ಇದೇ ಸಿಟ್ಟಿನಲ್ಲಿ ಪತಿರಾಯ ತನ್ನ ಪತ್ನಿಯನ್ನೇ ಇರಿದು ಕೊಲೆ ಮಾಡಿದ್ದಾನೆ.

ಧರ್ಮವೀರ್ ಮತ್ತು ಆತನ ಪತ್ನಿ ಸುಂದರಿ (50) ನಡುವೆ ಚಹಾ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ.  ಇದೇ ಜಗಳ ತಾರಕಕ್ಕೇರಿದ್ದು, ಇದೇ ಸಿಟ್ಟಿನಿಂದ ಧರ್ಮವೀರ್ ಮನೆಯಲ್ಲಿಟ್ಟಿದ್ದ ಕತ್ತಿಯಿಂದ ಪತ್ನಿಯ ಕುತ್ತಿಗೆಗೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾನೆ.  ಬಳಿಕ ಆತ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಘಟನೆ ಬಗ್ಗೆ‌ ಮಹಿಳೆಯ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ‌ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಘಟನೆ ನಡೆದ ‘ಫಜಲಗಢ ಗ್ರಾಮಕ್ಕೆ ತೆರಳಿ, ಆರೋಪಿಯನ್ನು ಬಂಧಿಸಿದ್ದಾರೆ.

ಸದ್ಯ ಮಹಿಳೆಯ ಪುತ್ರನ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M