ರಾಹುಲ್ ಗಾಂಧಿ ಮದುವೆ ಯಾವಾಗ ಎಂದು ಅಮ್ಮನಿಗೆ ಪ್ರಶ್ನೆ- ಸೋನಿಯಾ ಗಾಂಧಿ ಉತ್ತರ ಹೇಗಿತ್ತು?
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ವಿಚಾರ ಆಗಾಗ ಪ್ರಸ್ತಾಪವಾಗುತ್ತಿದೆ. ರಾಹುಲ್ ಗಾಂಧಿ ಮದುವೆ ಯಾವಾಗ ಅಂತಾ ಜನರೂ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಹರಿಯಾಣದ ಸೋನಿಪತ್ನ ರೈತ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಮದುವೆ ಯಾವಾಗ ಎಂದು ತಾಯಿ ಸೋನಿಯಾ ಗಾಂಧಿ ಬಳಿ ಕೇಳಿದ್ದಾರೆ. ಇದರ ವಿಡಿಯೋ ತುಣುಕುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಬಳಿಕ ರಾಹುಲ್ ಗಾಂಧಿಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ
ಇತ್ತೀಚೆಗೆ ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು. ಮನೆಗೆ ಬಂದ ರೈತ ಮಹಿಳೆಯರ ಪೈಕಿ ಓರ್ವ ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ ಮಾಡುತ್ತೀರಾ ಅಂತಾ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ..ʼ ಎಂದು ಚಟಾಕಿ ಹಾರಿಸಿದ್ದಾರೆ. ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು GST ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ, ರಾಹುಲ್ ಗಾಂಧಿ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದಾರೆ. ನಿಮಗೆ ಊಟ ಇಷ್ಟವಾಯಿತೇ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಸಿಹಿತಿಂಡಿಗಳಿವೆಯೇ ಎಂದು ವಿಚಾರಿಸಿತ್ತಿದ್ದಾರೆ. ಮಕ್ಕಳು ಮತ್ತು ಹುಡುಗಿಯರಿಗೆ ಚಾಕೊಲೇಟ್ಗಳನ್ನು ವಿತರಿಸುವುದನ್ನು ಸಹ ಕಾಣಬಹುದು.