ಬೆಂಗಳೂರಿನಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ – ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!

ಬೆಂಗಳೂರಿನಲ್ಲಿ ಮೆಣಸಿನಕಾಯಿ ಖರೀದಿಸಿದ ಜರ್ಮನಿ ಸಚಿವ – ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಶ್ಲಾಘನೆ!

ಬೆಂಗಳೂರು: ಜರ್ಮನಿಯ ಡಿಜಿಟಲ್‌ ಹಾಗೂ ಸಾರಿಗೆ ಸಚಿವರೊಬ್ಬರು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸಿ ಗಮನ ಸೆಳೆದಿದ್ದಾರೆ.

ಜರ್ಮನಿಯ ಡಿಜಿಟಲ್‌ ಹಾಗೂ ಸಾರಿಗೆ ಸಚಿವ ವೋಲ್ಕರ್‌ ವಿಸ್ಸಿಂಗ್ ಬೆಂಗಳೂರಿನಲ್ಲಿ ನಡೆದ ಜಿ20 (G20) ಸಭೆಯಲ್ಲಿ ಭಾಗವಹಿಸಿದ್ದಾರೆ. ಬಳಿಕ ನಗರದ ಮಾರುಕಟ್ಟೆಯಲ್ಲಿ ಅಡ್ಡಾಡಿದರು. ವ್ಯಾಪಾರ ವಹಿವಾಟು ಹೇಗೆ ನಡೆಯುತ್ತದೆ ಎಂದು ಗಮನಿಸಿದ್ದಾರೆ. ನಂತರ ತಾವೇ ಮೆಣಸಿನಕಾಯಿ ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ತೆಂಗಿನಕಾಯಿ, ಹಣ್ಣು, ಮಾಂಸ ಕೊಂಡೊಯ್ಯಲು ಅವಕಾಶವಿಲ್ಲ – ಪ್ರಯಾಣಿಕರಿಗೆ ಇಲ್ಲಿದೆ ಅವಶ್ಯಕ ಮಾಹಿತಿ

ಮಡಿವಾಳ ಮಾರುಕಟ್ಟೆಗೆ ಭೇಟಿ ನೀಡಿದ್ದ ಜರ್ಮನಿ ಸಚಿವ 1 ಕೆಜಿ ಮೆಣಸಿನಕಾಯಿ ಖರೀದಿಸಿದರು. ಯುಪಿಐ ಮೂಲಕ ಹಣ ಪಾವತಿ ಮಾಡಿ ಭಾರತದ ಡಿಜಿಟಲ್‌ ವ್ಯಾಪಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿ ಡಿಜಿಟಲ್ ಇಂಡಿಯಾ ಬಗ್ಗೆ ಜರ್ಮನಿ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ. ತಮ್ಮ ಸಚಿವರು ಭಾರತದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಖರೀದಿಸುತ್ತಿರುವ ಫೋಟೋ ಕೂಡ ಹಂಚಿಕೊಂಡಿದೆ.

suddiyaana