3 ವರ್ಷದಲ್ಲಿ ಬರೋಬ್ಬರಿ 159 ಕೆಜಿ ತೂಕ ಇಳಿಸಿದ ವ್ಯಕ್ತಿ – ದೇಹ ದಂಡನೆ & ಆಹಾರ ಕ್ರಮದಿಂದಲೇ ಚಮತ್ಕಾರ

3 ವರ್ಷದಲ್ಲಿ ಬರೋಬ್ಬರಿ 159 ಕೆಜಿ ತೂಕ ಇಳಿಸಿದ ವ್ಯಕ್ತಿ – ದೇಹ ದಂಡನೆ & ಆಹಾರ ಕ್ರಮದಿಂದಲೇ  ಚಮತ್ಕಾರ

ಆಧುನಿಕ ಜೀವನಶೈಲಿಯ ನಡುವೆ ದೇಹದ ತೂಕವೂ ಹೆಚ್ಚಾಗುತ್ತಿದೆ. ಕೆಲವರು ಬೊಜ್ಜು ಕರಗಿಸಲು ವ್ಯಾಯಾಮ, ಜಿಮ್, ಯೋಗಾ, ವಾಕಿಂಗ್ ಸೇರಿದಂತೆ ಹಲವು ದೈಹಿಕ ಕಸರತ್ತುಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇಡೀ ದಿನ ದೇಹ ದಂಡಿಸಿದರೂ ಅರ್ಧ ಕೆಜಿ ಕರಗಿಲ್ಲ ಅಂತಾ ಶಪಿಸುತ್ತಾರೆ. ಈತನ ದೈಹಿಕ ಕಸರತ್ತು ಮಾತ್ರ ಬೇರೆ ರೀತಿಯೇ ಇದೆ. ಎಲ್ಲರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿ ತೋರಿಸಿದ್ದಾನೆ.

38 ವರ್ಷದ ವ್ಯಕ್ತಿ ಮೂರು ವರ್ಷದಲ್ಲಿ ಬರೋಬ್ಬರಿ 159 ಕೆ.ಜಿ ತೂಕ ಇಳಿಸಿಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾನೆ. ಜರ್ಮನ್‌ನ 38 ವರ್ಷದ ಮೈಕೆಲ್ ಮೆಹ್ಲರ್ ಇಂಥಾದ್ದೊಂದು ಸಾಹಸ ಮಾಡಿದ್ದಾರೆ. ಅವರು ಮೂರು ವರ್ಷಗಳ ಸುದೀರ್ಘ ಪ್ರಯತ್ನದ ನಂತರ 159 ಕಿಲೋಗಳಿಗಿಂತ ಹೆಚ್ಚು ತೂಕವನ್ನು ಇಳಿಸಿದ್ದಾರೆ. ತೂಕ ಇಳಿಸುವ ಪ್ರಯಾಣದ ಮೊದಲು, ಮೆಹ್ಲರ್ ಬೆವರು ಸುರಿಸದೆ ಮೂರು ಅಡಿ ಕೂಡಾ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ, ಅವರು 10XL ಅಳತೆಯ ಶರ್ಟ್ ಮತ್ತು 74-ಇಂಚಿನ ಪ್ಯಾಂಟ್ ಅನ್ನು ಧರಿಸುತ್ತಿದ್ದರು. ಆದರೆ ಮೆಹ್ಲರ್ ಈಗ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : RSSಗೆ 35 ಎಕರೆ ಭೂಮಿ ಹಸ್ತಾಂತರಕ್ಕೆ ಸರ್ಕಾರ ತಡೆ – ಸದನದಲ್ಲೂ ಲಿಖಿತ ಉತ್ತರ ನೀಡಿದ ಸಚಿವ

2020 ರ ಆರಂಭದಲ್ಲಿ, ಮೆಹ್ಲರ್‌ನ ತೂಕವು 263 ಕೆಜಿಗಿಂತ ಹೆಚ್ಚಿತ್ತು. ಅವರು ಬಾರಿಯಾಟ್ರಿಕ್ ಸ್ಲೀವ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ತ್ವರಿತವಾಗಿ ಸುಮಾರು 23 ಕಿಲೋಗಳನ್ನು ಕಳೆದುಕೊಂಡರು. ಬಾರಿಯಾಟ್ರಿಕ್ ಸ್ಲೀವ್ ಶಸ್ತ್ರಚಿಕಿತ್ಸೆಯಲ್ಲಿ, ಹೊಟ್ಟೆಯ ಹೆಚ್ಚಿನ ಭಾಗವನ್ನು ತೆಗೆದುಹಾಕಲಾಗುತ್ತದೆ. ವಾಸ್ತವವಾಗಿ ಈ ಶಸ್ತ್ರಚಿಕಿತ್ಸೆಯನ್ನು ವ್ಯಕ್ತಿಯ ಆಹಾರ ಸೇವನೆಯ ಪ್ರಮಾಣವನ್ನು ಮಿತಿಗೊಳಿಸಲು ಮಾಡಲಾಗುತ್ತದೆ. ಮೊದಲೆಲ್ಲಾ ಮೆಹ್ಲರ್ ಹೆಚ್ಚು ಕ್ಯಾಲೋರಿ ಹೊಂದಿರುವ ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದರು. ಮಾರ್ಮಲೇಡ್, ನುಟೆಲ್ಲಾ ಮತ್ತು ವಿಶಿಷ್ಟವಾಗಿ ಜರ್ಮನ್ ಕೋಲ್ಡ್ ಕಟ್‌ಗಳೊಂದಿಗೆ ಬೆಳಗಿನ ಉಪಾಹಾರಕ್ಕಾಗಿ ಆರರಿಂದ ಎಂಟು ಬ್ರೆಡ್ ರೋಲ್‌ಗಳನ್ನು ತಿನ್ನುತ್ತಿದ್ದರು. ತನ್ನ ತೂಕ ನಷ್ಟ ಫಲಿತಾಂಶಗಳನ್ನು ತಲುಪಲು, ಮೆಹ್ಲರ್ ತನ್ನ ಆಹಾರವನ್ನು ಆರೋಗ್ಯಕರ ಆಯ್ಕೆಗಳಿಗೆ ಬದಲಾಯಿಸಿದರು. ಆರಂಭಿಕ ಶಸ್ತ್ರಚಿಕಿತ್ಸೆಯ ಜೊತೆಗೆ ಅವರ ವ್ಯಾಯಾಮ ಮತ್ತು ಆಹಾರದ ಡಯೆಟ್‌ ನಿಂದಾಗಿ ಮೆಹ್ಲರ್‌ ಮೂರು ವರ್ಷದಲ್ಲಿ 159 ಕೆಜಿಯನ್ನು ಕಳೆದುಕೊಂಡಿದ್ದಾರೆ.

ಮೆಹ್ಲರ್ ಶಸ್ತ್ರಚಿಕಿತ್ಸೆಯ ನಂತರ ವ್ಯಾಯಾಮವನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ವಾರಕ್ಕೆ ಆರು ಬಾರಿ ಎರಡು ಗಂಟೆಗಳ ತೂಕ ತರಬೇತಿ ಮತ್ತು ಎರಡು ಗಂಟೆಗಳ ಕಾರ್ಡಿಯೋ ತರಬೇತಿಯನ್ನು ಮಾಡಿದರು. ಆಹಾರಕ್ರಮವನ್ನು ಬದಲಾಯಿಸಿದ ನಂತರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದ ನಂತರ ದೇಹದ ತೂಕವನ್ನ ಕಡಿಮೆ ಮಾಡಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.

suddiyaana