ಒಂದು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ G20 ಶೃಂಗಸಭೆಗೆ ಹಾಜರಾದ ಜರ್ಮನ್ ಚಾನ್ಸೆಲರ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದೆ. ವಿದೇಶಗಳಿಂದ ನೂರಾರು ಗಣ್ಯರು ಆಗಮಿಸಿದ್ದಾರೆ. ಈ ಸಭೆಗೆ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ ಕೂಡ ಆಗಮಿಸಿದ್ದು, ಅವರು ಒಂದು ಕಣ್ಣಿಗೆ ಕಪ್ಪು ಬಟ್ಟೆ ಧರಿಸಿಕೊಂಡು ಬಂದಿದ್ದಾರೆ. ಇದರ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಓಲಾಫ್ ಸ್ಕೋಲ್ ಅವರ ಕಣ್ಣಿಗೆ ಏನಾಯ್ತು?
ಓಲಾಫ್ ಸ್ಕೋಲ್ ಅವರು ಕಳೆದ ಶನಿವಾರ ಜಾಗಿಂಗ್ ಮಾಡುವಾಗ ಮುಖಕ್ಕೆ ಗಾಯವಾಗಿದೆ. ಆ ಗಾಯ ಮರೆ ಮಾಡಲು 65 ವರ್ಷದ ಸ್ಕೋಲ್ಜ್ ಈ ರೀತಿ ಐ ಪ್ಯಾಚ್ ಧರಿಸಿದ್ದಾರೆ. ಕೆಲವು ದಿನಗಳವರೆಗೆ ಕಣ್ಣಿನ ಪ್ಯಾಚ್ ಅನ್ನು ಧರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಓಲಾಫ್ ಸ್ಕೋಲ್ ಅವರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಜಾಗಿಂಗ್ ಮಾಡುವಾಗ ಮುಖಕ್ಕೆ ಗಾಯವಾಗಿದೆ. ಕೆಲವು ದಿನಗಳವರೆಗೆ ಕಣ್ಣಿನ ಪ್ಯಾಚ್ ಅನ್ನು ಧರಿಸಬೇಕಾಗುತ್ತದೆ. ಗಾಯಗಳಿದ್ದರೂ, ಸ್ಕೋಲ್ಜ್ ಅವರ ಆರೋಗ್ಯ ಉತ್ತಮ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಗಳ ಮದುವೆ ಮಾಡಿಸಿದ್ದ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ದಂಪತಿ ಆತ್ಮಹತ್ಯೆ – ಡೆತ್ ನೋಟ್‌ನಲ್ಲಿ ಬಯಲಾಯ್ತು ಸಾವಿನ ರಹಸ್ಯ!
ಈ ವಾರದ ಆರಂಭದಲ್ಲಿ, ಜರ್ಮನ್ ಚಾನ್ಸೆಲರ್ ಟ್ವಿಟರ್‌ನಲ್ಲಿ ತಮ್ಮ ಬಲಗಣ್ಣಿನ ಮೇಲೆ ದೊಡ್ಡ ಕಪ್ಪು ಪ್ಯಾಚ್ ಅನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಕಣ್ಣಿನ ಸುತ್ತವೂ ಕೆಂಪಗೆ ಗಾಯದ ಗುರುತೂ ಕಾಣಿಸುತ್ತಿತ್ತು. ನಿಮ್ಮ ಹಾರೈಕೆಗೆ ಧನ್ಯವಾದಗಳು. ಅದು ಇರುವುದಕ್ಕಿಂತ ಕೆಟ್ಟದಾಗಿ ಕಾಣುತ್ತದೆ!” ಅವರು ತಮ್ಮ ಅಧಿಕೃತ ಖಾತೆಯಲ್ಲಿ ಫೋಟೊ ಜತೆ ಹೀಗೆ ಬರೆದಿದ್ದು,”ಮೀಮ್‌ಗಳನ್ನು ನೋಡಲು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶನಿವಾರ ನವದೆಹಲಿಯಲ್ಲಿ ಜಿ20 ಶೃಂಗಸಭೆಗೆ ವಿಶ್ವ ನಾಯಕರನ್ನು ಅಭಿನಂದಿಸಿದರು. ಉಕ್ರೇನ್, ಹವಾಮಾನ ಬದಲಾವಣೆ ಮತ್ತು ಇತರ ವಿವಾದಾತ್ಮಕ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿರುವ ವಿಶ್ವ ನಾಯಕರಿಗೆ ಹಸ್ತಲಾಘವ ಮಾಡಿ ಆವರು ಆಲಿಂಗಿಸಿ ಬರ ಮಾಡಿಕೊಂಡರು. 1999 ರಲ್ಲಿ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ನಂತರ G20 ಪ್ರಪಂಚದ 20 ಪ್ರಮುಖ ರಾಷ್ಟ್ರಗಳ ಗುಂಪಾಗಿದ್ದು, ಗಡಿಗಳಲ್ಲಿ ಹರಡುವ ಬಿಕ್ಕಟ್ಟುಗಳನ್ನು ನಿಭಾಯಿಸಲು ಉತ್ತಮ ಅಂತರಾಷ್ಟ್ರೀಯ ಆರ್ಥಿಕ ಸಹಕಾರದ ಅಗತ್ಯವಿದೆ ಎಂದು ಹೇಳುತ್ತದೆ. ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿದೆ.