ಲಿಕ್ಕರ್ ಮಾಫಿಯಾ ಕಿಂಗ್ ಪಿನ್ ಎಸ್ಕೇಪ್ – ಪೊಲೀಸರಿಗೆ ಸುಳಿವು ನೀಡಿತಾ ಗಿಳಿ?

ಲಿಕ್ಕರ್ ಮಾಫಿಯಾ ಕಿಂಗ್ ಪಿನ್ ಎಸ್ಕೇಪ್ – ಪೊಲೀಸರಿಗೆ ಸುಳಿವು ನೀಡಿತಾ ಗಿಳಿ?

ಪಾಟ್ನಾ (ಬಿಹಾರ): ಸಾಮಾನ್ಯವಾಗಿ ಯಾವುದೇ ಒಂದು ಪ್ರಕರಣ ಭೇದಿಸಲು ಪೊಲೀಸರು ಸಾಕ್ಷ್ಯಾಧಾರಗಳ ಮೊರೆ ಹೋಗುತ್ತಾರೆ. ಕೆಲವೊಂದು ಬಾರಿ ಆರೋಪಿಯ ಸ್ನೇಹಿತರು, ಸಂಬಂಧಿಕರ ಹೇಳಿಕೆ ಮೇಲೆ ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಬಿಹಾರದಲ್ಲಿ ಮದ್ಯ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಲು ಪೊಲೀಸರು ಗಿಳಿಯ ಮೊರೆ ಹೋಗಿದ್ದಾರಂತೆ!

ಇದನ್ನೂ ಓದಿ: ಒಂದೇ ಬಾರಿಗೆ 64 ಮೊಬೈಲ್ ಗಳಲ್ಲಿ ಗೇಮ್ –  74 ವರ್ಷದ ಅಜ್ಜನಿಗೆ ಇದೆಂಥಾ ಚಟ?

ಇತ್ತೀಚೆಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಲಿಕ್ಕರ್ ಮಾಫಿಯಾ ಆರ್ಭಟ ಜೋರಾಗಿದೆ. ಹೀಗಾಗಿ, ಜಿಲ್ಲೆಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕನ್ಹಯ್ಯ ಕುಮಾರ್ ಸಾರಥ್ಯದ ತಂಡ ಇಲ್ಲಿನ ಗ್ರಾಮವೊಂದರ ಮೇಲೆ ದಾಳಿ ನಡೆಸಿದ್ದಾರೆ. ಲಿಕ್ಕರ್ ಮಾಫಿಯಾದ ಕಿಂಗ್ ಪಿನ್ ಅಮ್ರಿತ್ ಮೊಲ್ಲಾ ಎಂಬಾತನನ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಪೊಲೀಸರು ಗ್ರಾಮ ತಲುಪುವ ಮೊದಲೇ ಈತನಿಗೆ ಸುಳಿವು ಸಿಕ್ಕಿತ್ತು. ಹೀಗಾಗಿ, ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಕುಟುಂಬ ಸಮೇತವಾಗಿ ಈತ ಪರಾರಿಯಾಗಿದ್ದ. ಆದ್ರೆ ಈತ ಸಾಕಿದ್ದ ಗಿಳಿಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಆದರೆ ಆತನಿಗೆ ತಾನು ಸಾಕಿದ ಗಿಳಿಯೇ ಕಂಟಕವಾಗಿದೆ. ಯಾಕೆಂದರೆ ತನಿಖೆ ವೇಳೆ ಗಿಳಿ ಅಲ್ಪ ಸ್ವಲ್ಪ  ಮಾತನಾಡುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರು ಗಿಳಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಪೊಲೀಸರು ಗಿಳಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. “ಹೇ ಗಿಳಿಯೇ ನಿನ್ನ ಮಾಲೀಕ ಎಲ್ಲಿ ಹೋದ? ಅಮ್ರಿತ್ ಮೊಲ್ಲಾ ಎಲ್ಲಿದ್ದಾನೆ? ನಿನ್ನನ್ನು ಮನೆಯಲ್ಲಿ ಬಿಟ್ಟು ಎಲ್ಲರೂ ಎಲ್ಲಿಗೆ ಹೋದರು? ಹೀಗೆ ಹಲವು ಪ್ರಶ್ನೆಗಳನ್ನು ಸಬ್‌ ಇನ್ಸ್‌ಪೆಕ್ಟರ್ ಕನ್ಹಯ್ಯ ಕುಮಾರ್ ಕೇಳಿದ್ದಾರೆ. ಆದರೆ ಪೊಲೀಸರು ಪ್ರಶ್ನೆ ಕೇಳಿದಾಗ ಗಿಳಿ ಮೌನ ವಹಿಸಿದೆ. ಗಿಳಿಯ ಹೆಸರಾದ ಮಿಥು ಎಂದು ಕರೆದಾಗ ಮತ್ತೆ ಅದು ಚೀರಲು ಪ್ರಾರಂಭಿಸಿದೆ.

ಇದೀಗ ನಾಪತ್ತೆಯಾಗಿರುವ ಲಿಕ್ಕರ್ ಮಾಫಿಯಾ ಕುರಿತು ಸುಳಿವು ಸಿಗೋದು ಗಿಳಿಯಿಂದ ಮಾತ್ರ ಎಂದು ಪೊಲೀಸರು ನಂಬಿದ್ದಾರೆ. ಗಿಳಿಗೆ ಪೊಲೀಸರ ಭಾಷೆ ಅರ್ಥ ಆಗುತ್ತಿದೆ. ಆದ್ರೆ ಅದು ಕೇವಲ ಕಟೋರೆ (ತಟ್ಟೆ) ಎನ್ನುತ್ತಿದೆ. ಇದನ್ನು ಬಿಟ್ಟು ಬೇರೇನೂ ಹೇಳುತ್ತಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

suddiyaana