ಮತ್ತು ಬರುವ ಔಷಧಿ ನೀಡಿ ಅಶ್ಲೀಲ ವಿಡಿಯೋ ಸೆರೆ.. ಕರೆದಾಗ ಬರುವಂತೆ ಬೆದರಿಕೆ – ಪಾಪಿಗಳ ಆಟಕ್ಕೆ ವಿದ್ಯಾರ್ಥಿನಿ ಸೂಸೈಡ್
ಮಕ್ಕಳ ಮೇಲೆ ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದ್ರೂ ಸಾಕಾಗೋದಿಲ್ಲ. ಅದ್ರಲ್ಲೂ ಶಾಲಾ, ಕಾಲೇಜಿಗೆ ಹೋಗೋರ ಬಗ್ಗೆ ತುಸು ಹೆಚ್ಚೇ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಕೇರ್ ಲೆಸ್ ಆದರೂ ಘೋರ ದುರಂತಗಳು ನಡೆದುಹೋಗುತ್ತವೆ. ಇದೀಗ ದಾವಣಗೆರೆಯಲ್ಲೂ ಇಂಥದ್ದೇ ದುರಂತ ನಡೆದಿದೆ. ಪಾಪಿಗಳ ಬಲೆಗೆ ಬಿದ್ದ ವಿದ್ಯಾರ್ಥಿನಿಯೊಬ್ಬಳು ಸಾವಿನ ಮನೆ ಸೇರಿದ್ದಾಳೆ.
ಇದನ್ನೂ ಓದಿ : ಸಿಡಿಲು ಬಡಿದು 12 ಮಂದಿ ಸಾವು.. 14 ಜನರಿಗೆ ಗಾಯ – ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥ
ಅಶ್ಲೀಲ ವಿಡಿಯೋ (Video) ಹರಿಬಿಡುವ ಬೆದರಿಕೆಗೆ (Threat) ಬೇಸತ್ತ ವಿದ್ಯಾರ್ಥಿನಿಯೊಬ್ಬಳು (Student) ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ದಾವಣಗೆರೆ (Davanagere) ಜಿಲ್ಲೆಯ ಜಗಳೂರು (Jagaluru) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾಲೆಗೆ ಹೋಗುವ ವೇಳೆ 17 ವರ್ಷದ ವಿದ್ಯಾರ್ಥಿನಿಗೆ ಇಬ್ಬರು ಯುವಕರು ಪರಿಚಯವಾಗಿದ್ದರು. ಒಂದು ದಿನ ಬೇಕರಿ ತಿನಿಸಿನಲ್ಲಿ ಮತ್ತು ಬರುವ ಔಷಧಿ ಹಾಕಿದ ಯುವಕರು ಆಕೆಯ ಅಶ್ಲೀಲ ವಿಡಿಯೋವನ್ನು ಮಾಡಿದ್ದರು. ಅಲ್ಲದೇ ತಾವು ಕರೆದಾಗ ಬರದಿದ್ದರೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಯುವಕರ ಈ ಬೆದರಿಕೆಗೆ ಬೇಸತ್ತ ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಘಟನೆಯ ಬಳಿಕ ಆಕೆಯನ್ನು ಉಡುಪಿಯ (Udupi) ಮಣಿಪಾಲ ಆಸ್ಪತ್ರೆಗೆ (Manipal Hospital) ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಆರೋಪಿಗಳಿಗೆ ಶಿಕ್ಷೆ ಆಗಲಿ ಎಂಬ ಗಾಯಾಳು ವಿದ್ಯಾರ್ಥಿನಿ ಹೇಳಿಕೆ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.