ಡೇಟಿಂಗ್ ಆ್ಯಪ್ ಚಾಟಿಂಗ್.. – ಮೀಟ್ ಮಾಡೋಣ ಎಂದು ಚಿನ್ನ, ಐಫೋನ್, ಲಕ್ಷ ಲಕ್ಷ ಹಣದೊಂದಿಗೆ ಮಹಿಳೆ ಎಸ್ಕೇಪ್!

ಆಕೆ ಡೇಟಿಂಗ್ ಅಪ್ಲಿಕೇಷನ್ ಮುಖಾಂತರ ಪರಿಚಯವಾಗಿದ್ದಳು. ಬಳಿಕ ಆಕೆಯೊಂದಿಗೆ ಚಾಟಿಂಗ್ ಶುರುಮಾಡಿದ್ದಾನೆ. ಇಬ್ಬರು ಒಬ್ಬರನ್ನೊಬ್ಬರು ಪರಿಚಯಿಸಿಕೊಂಡಿದ್ದಾರೆ. ತಮ್ಮ ಸಂಪೂರ್ಣ ವಿವರಗಳನ್ನು ಆಕೆಯೊಂದಿ ಶೇರ್ ಮಾಡಿದ್ದ. ಇಬ್ಬರು ಚಾಟಿಂಗ್ ಮಾಡುತ್ತಾ ಖುಷಿ ಖಷಿಯಿಂದಲೇ ಇದ್ದರು. ಆಕೆ ಜೀವನ ಪೂರ್ತಿ ತನ್ನೊಂದಿಗೆ ಇರುತ್ತಾಳೆ. ತನ್ನ ಸುಖ – ದುಖಃಗಳನ್ನು ಸಮನಾಗಿ ಹಂಚಿಕೊಳ್ಳುತ್ತಾಳೆ ಎಂದು ಆತ ಅಂದುಕೊಂಡಿದ್ದ. ಆದರೆ ಆತನ ಕನಸೆಲ್ಲಾ ನುಚ್ಚು ನೂರಾಗಿದೆ. ಭೇಟಿಯಾದ ಒಂದೇ ದಿನದಲ್ಲಿ ತನ್ನ ನರಿಬುದ್ಧಿ ತೋರಿಸಿದ್ದಾಳೆ.
ಏನಿದು ಘಟನೆ?
ರೋಹಿತ್ ಗುಪ್ತಾ ಬಂಬಲ್ ಡೇಟಿಂಗ್ ಅಪ್ಲಿಕೇಷನ್‌ನಲ್ಲಿ ಸಕ್ರೀಯನಾಗಿದ್ದ. ಇದರಲ್ಲಿ ಸಾಕ್ಷಿ ಎಂಬ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಪ್ರತಿದಿನ ಇಬ್ಬರು ಚಾಟಿಂಗ್ ಮಾಡುತ್ತಾ ಇರುತ್ತಿದ್ದರು. ಒಂದು ದಿನ ಆತ ಸಾಕ್ಷಿಯನ್ನು ಮನೆಗೆ ಕರೆದಿದ್ದ. ಈ ವೇಳೆ ಆಕೆ ತನ್ನ ನರಿಬುದ್ದಿ ತೋರಿಸಿದ್ದಾಳೆ. ರೋಹಿತ್ ಮನೆಗೆ ಬಂದಿದ್ದ ಆಕೆ ಆತನಿಗೆ ಮಾದಕ ವಸ್ತು ನೀಡಿ ತನ್ನ ಮೊಬೈಲ್ ಫೋನ್, ಬೆಲೆಬಾಳುವ ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ. ಅಷ್ಟೇ ಅಲ್ಲದೇ ಬ್ಯಾಂಕ್ ಖಾತೆಗಳ ಮೂಲಕ ತನ್ನಿಂದ ₹ 1.78 ಲಕ್ಷ ದುಡ್ಡನ್ನು ಕಸಿದುಕೊಂಡಿದ್ದಾಳೆ.
ಇದನ್ನೂ ಓದಿ: ಪತಿಯ ಕುಡಿತದ ಚಟಕ್ಕೆ ಬೇಸತ್ತು ಸಾಯಲು ಬಂದ ಹೆಂಡ್ತಿ – ಸಮಾಧಾನಿಸಲು ಬಂದ ಗಂಡನೂ ವಿಧಿಯಾಟಕ್ಕೆ ಬಲಿ!
ಈ ದುರದೃಷ್ಟಕರ ಘಟನೆಯು ಹರ್ಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ರೋಹಿತ್ ಗುಪ್ತಾ ಬಂಬಲ್ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಸಾಕ್ಷಿ ಮಹಿಳೆಯನ್ನು ಭೇಟಿಯಾಗಿದ್ದಾಗಿ ತನ್ನ ಅಧಿಕೃತ ದೂರಿನಲ್ಲಿ ವಿವರಿಸಿದ್ದಾನೆ. ತನ್ನ ಊರು ದೆಹಲಿಯಾಗಿದ್ದು, ಚಿಕ್ಕಮ್ಮನೊಂದಿಗೆ ಗುರುಗ್ರಾಮ್‌ನಲ್ಲಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಕ್ಟೋಬರ್ 1 ರಂದು, ಅವಳು ನನಗೆ ಕರೆ ಮಾಡಿ ನನ್ನನ್ನು ಭೇಟಿಯಾಗಬೇಕೆಂದು ಹೇಳಿದಳು. ರಾತ್ರಿ 10 ಗಂಟೆಯ ಸುಮಾರಿಗೆ, ಸೆಕ್ಟರ್ 47 ರ ಡಾಕ್ಯಾರ್ಡ್ ಬಾರ್ ಬಳಿಯಿಂದ ಪಿಕಪ್ ಮಾಡಲು ನನಗೆ ಕರೆದಳು. ನಾನು ಅವಳನ್ನು ಕರೆದುಕೊಂಡು ಹತ್ತಿರದ ಅಂಗಡಿಯಿಂದ ಸ್ವಲ್ಪ ಮದ್ಯವನ್ನು ಖರೀದಿಸಿ ನನ್ನ ಮನೆಗೆ ಬಂದೆ ಎಂದು ರೋಹಿತ್ ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಐಸ್ ತರಲು ತನ್ನ ಮನೆಯ ಅಡುಗೆಮನೆಗೆ ಹೋಗುವಂತೆ ಕೇಳಿದಳು. ಈ ವೇಳೆ ಡ್ರಿಂಕ್ಸ್‌ನಲ್ಲಿ ಯಾವುದೋ ಮಾದಕ ದ್ರವ್ಯವನ್ನು ಸೇರಿಸಿದ್ದಾಳೆ. ಡ್ರಗ್ಸ್ ಪರಿಣಾಮವು ತುಂಬಾ ತೀವ್ರವಾಗಿತ್ತು. ನಾನು ಅಕ್ಟೋಬರ್ 3 ರಂದು ಬೆಳಗ್ಗೆ ಎದ್ದೆ. ಆಗ ಮಹಿಳೆ ಕಾಣೆಯಾಗಿದ್ದು, ನನ್ನ ಚಿನ್ನದ ಸರ, ಐಫೋನ್ 14 ಪ್ರೋ, 10,000 ರೂ. ನಗದು ಮತ್ತು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳು ಕಾಣೆಯಾಗಿತ್ತು. ಅಲ್ಲದೆ, ನನ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 1.78 ಲಕ್ಷ ರೂ. ಹಿಂಪಡೆಯಲಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ” ಎಂದೂ ರೋಹಿತ್ ಗುಪ್ತಾ ತಮ್ಮ ದೂರಿನಲ್ಲಿ ತಿಳಿಸಿದ್ದಾನೆ.
ಈ ಮಹಿಳೆ ಸದ್ಯ ತಲೆಮರೆಸಿಕೊಂಡಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.