3 ಪಂದ್ಯ, 3 ಅದೇ ತಪ್ಪು, ಕೊಹ್ಲಿಗೆ ಕ್ಲಾಸ್ – ವಿರಾಟ್ ತಾಳ್ಮೆವಹಿಸಿ ಆಟವಾಡಬೇಕು ಎಂದು ಗವಾಸ್ಕರ್ ಸಲಹೆ

3 ಪಂದ್ಯ, 3 ಅದೇ ತಪ್ಪು, ಕೊಹ್ಲಿಗೆ ಕ್ಲಾಸ್ – ವಿರಾಟ್ ತಾಳ್ಮೆವಹಿಸಿ ಆಟವಾಡಬೇಕು ಎಂದು ಗವಾಸ್ಕರ್ ಸಲಹೆ

ಒಂದ್ಸಲ ಆದ್ರೆ, ಜಸ್ಟ್ ಮಿಸ್ ಅಂತಾ ಸುಮ್ನಿರಬಹುದು. ಎರಡನೇ ಸಲ ಅದೇ ರಿಪೀಟ್ ಆದ್ರೆ ಆ ಮಿಸ್ಟೇಕ್ ಮತ್ತೆ ಆಗದಂತೆ ಎಚ್ಚರ ವಹಿಸಬೇಕು. ಮೂರನೇ ಸಲ ಕೂಡಾ ಮತ್ತದೇ ಮಿಸ್ಟೇಕ್ ರಿಪೀಟ್ ಆದ್ರೆ, ತಪ್ಪು ತಪ್ಪೇ.. ಇದು ಸದ್ಯ ನಮ್ಮ ವಿರಾಟ್ ಕೊಹ್ಲಿ ವಿರುದ್ಧ ಲೆಜೆಂಡರಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಸಿಟ್ಟು ಮಾಡಿಕೊಂಡಿರೋ ರೀತಿ.

ಇದನ್ನೂ ಓದಿ:6 ವಿಕೆಟ್ ಕಿತ್ತು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! – ಹೆಡ್ ಶತಕ ಸಿಡಿಸಿದ ಪಂದ್ಯಗಳಲ್ಲೆಲ್ಲಾ ಭಾರತದ ಸೋಲು ಫಿಕ್ಸ್!

ಮತ್ತೊಮ್ಮೆ ಔಟ್​ಸೈಡ್ ಆಫ್​ ಸ್ಟಂಪ್​ನಲ್ಲಿ ಹೋಗುವ ಚೆಂಡನ್ನ ಕೆಣಕಿ ಔಟಾಗುವ ಮೂಲಕ ಕೊಹ್ಲಿ ತನ್ನ ದೌರ್ಬಲ್ಯವನ್ನು ಮುಂದುವರಿಸಿದ್ದಾರೆ. ಜೋಶ್ ಹೇಜಲ್​ವುಡ್​ ಔಟ್ ಸೈಡ್​ ಆಫ್ ಸ್ಟಂಪ್ ಬಾಲ್ ಅನ್ನು ಬೆನ್ನಟ್ಟಿ ಹೋಗಿ ಎಡ್ಜ್​ ಆಗಿ ಕೊಹ್ಲಿ ಔಟಾದರು. ಈ ಸರಣಿಯಲ್ಲಿ ಕೊಹ್ಲಿ ಈ ರೀತಿ ಔಟಾಗಿರುವುದು ಇದು ಮೂರನೇ ಬಾರಿ. ‘ಕೊಹ್ಲಿ.. ನಿಮಗೆ ತಾಳ್ಮೆ ಇಲ್ಲವೇ? ಆ ಚೆಂಡನ್ನು ಆಡುವ ಅಗತ್ಯವೇನು? ನಾಲ್ಕನೇ ಸ್ಟಂಪ್ ಲೈನ್‌ನಲ್ಲಿ ಚೆಂಡು ಎಸೆದರೆ ನಾನು ಆಡಲು ಪ್ರಯತ್ನಿಸುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ದೂರ ಹೋಗುವ ಚೆಂಡನ್ನು ಬೆನ್ನಟ್ಟುವ ಅಗತ್ಯವೇನು? ಎಂದು ಸಿಟ್ಟಲ್ಲೇ ಪ್ರಶ್ನಿಸಿದ್ದಾರೆ ಸುನಿಲ್ ಗವಾಸ್ಕರ್.

ಸ್ವಲ್ಪ ತಾಳ್ಮೆಯಿಂದ ಆಡಿದ್ದರೆ ಕೆಎಲ್ ರಾಹುಲ್ ಜತೆ ವಿರಾಟ್ ಕೊಹ್ಲಿ ಕೂಡಾ ಕ್ರೀಸ್ ನಲ್ಲಿ ಇರುತ್ತಿದ್ದರು. ಆದರೆ, ಹೊರ ಹೋಗುವ ಚೆಂಡನ್ನು ಬೆನ್ನಟ್ಟಿದ ಅವರು ದುಬಾರಿ ಬೆಲೆ ತೆರಬೇಕಾಯ್ತು. ವಿರಾಟ್ ಕೊಹ್ಲಿ ಅವರ ಕಳಪೆ ಶಾಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ದೇಹಕ್ಕೆ ಹತ್ತಿರವಾಗುವ ಚೆಂಡುಗಳನ್ನು ಆಡಬೇಕೆಂಬ ಸಚಿನ್ ಸಲಹೆಯನ್ನು ಕೊಹ್ಲಿ ಅನುಸರಿಸಬೇಕು ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

suddiyaana