ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಮಾವನಿಗೆ ಕಂಟಕ – ಲಕ್ಷ್ಮೀಕಾಂತ್ ಪಾತ್ರ ಸಾವಲ್ಲಿ ಅಂತ್ಯವಾಗುತ್ತಾ?

ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಮಾವನಿಗೆ ಕಂಟಕ – ಲಕ್ಷ್ಮೀಕಾಂತ್ ಪಾತ್ರ ಸಾವಲ್ಲಿ ಅಂತ್ಯವಾಗುತ್ತಾ?

ಅಮೃತಧಾರೆ ಧಾರಾವಾಹಿ ಈಗ ಅನಿರೀಕ್ಷಿತ ತಿರುವು ಕಾಣುತ್ತಿದೆ. ಮಗಳ ಹುಡುಕಾಟದಲ್ಲಿದ್ದ ಗೌತಮ್ ಗೆ ಸಧ್ಯದಲ್ಲೇ ನೋವಿನ ಸುದ್ದಿ ಸಿಗಬಹುದು. ಗೌತಮ್‌ ಹಾಗೂ ಭೂಮಿಕಾಳ ನಿಜವಾದ ಮಗಳು ಮಿಂಚು ಎನ್ನೋದು ಲಕ್ಷ್ಮೀಕಾಂತ್‌ ಮಾವನಿಗೆ ಗೊತ್ತಾಗಿದೆ. ಈ ವಿಷಯವನ್ನು ಮನೆಯವರಿಗೆ ತಿಳಿಸಬೇಕು ಎನ್ನುವಷ್ಟರಲ್ಲಿ ಕೇಡಿ ಜೇಡಿ ಮಾವನನ್ನು ಕಿಡ್ನ್ಯಾಪ್ ಮಾಡಿದ್ದಾನೆ.

ಇದನ್ನೂ ಓದಿ:ಕೊನೆಗೂ ಗೆದ್ದ ಕರ್ಣ ನಿಧಿ ಪ್ರೀತಿ – ಮದುವೆಯಾದ ಪ್ರೇಮಿಗಳು, ರಮೇಶ್ ಪ್ಲಾನ್ ಠುಸ್

ಗೌತಮ್ ಮತ್ತು ಭೂಮಿಕಾ ತಮ್ಮ ಮಗಳ ಹುಡುಕಾಟದಲ್ಲಿದ್ದಾರೆ. ಅಖಿಲಾಂಡೇಶ್ವರಿ ಕೂಡಾ ಇವರಿಬ್ಬರಿಗೆ ಸಹಾಯ ಮಾಡುತ್ತಿದ್ದಾಳೆ.  ಅಖಿಲಾಂಡೇಶ್ವರಿಗೆ ಮಿಂಚುವೇ ಗೌತಮ್ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಇದನ್ನ ಲಕ್ಷ್ಮೀಕಾಂತ್‌ಗೆ ಹೇಳುತ್ತಾಳೆ. ಮಿಂಚು ಬಗ್ಗೆ ಸತ್ಯ ಗೊತ್ತಾಗುತ್ತಿದ್ದಂತೆ ಮಾವ ತನ್ನ ಅಳಿಯ ಗೌತಮ್‌ಗೆ ಹೇಳಲು ಹೋಗುತ್ತಿರುತ್ತಾನೆ. ಆಗಲೇ ಶಕುನಿಮಾಮಾನಿಗೆ ಅಡ್ಡ ಬರುವುದು ಜೈದೇವ್. ಮೊ ಈತನ ಬಳಿ ಎಲ್ಲಾ ಡಿಟೇಲ್ಸ್ ಇದೆ ಎನ್ನುವ ಸತ್ಯ ಜೈದೇವ್​ಗೆ ತಿಳಿದಿದೆ.

ಈಗ ಜೈದೇವ್ ಮಾವ ಲಕ್ಷ್ಮೀಕಾಂತ್‌ ನನ್ನು ಕಿಡ್ನ್ಯಾಪ್‌ ಮಾಡಿ, ಮಗುವಿನ ಬಗ್ಗೆ ಹೇಳು ಎಂದು ಹೇಳಿದ್ದಾನೆ. ಆದರೆ ಲಕ್ಷ್ಮೀಕಾಂತ್‌ ಮಾತ್ರ ಸತ್ಯ ಬಾಯಿ ಬಿಡುತ್ತಿಲ್ಲ. ಮಗುವಿಗೋಸ್ಕರ ಗೌತಮ್‌ ಹುಡುಕಾಟದಲ್ಲಿದ್ದಾನೆ, ಇನ್ನೊಂದು ಕಡೆ ಮಾವ ಕಿಡ್ನ್ಯಾಪ್‌ ಆಗಿರೋ ವಿಷಯವೂ ಗೊತ್ತಿಲ್ಲ. ಮಾವ ಕಿಡ್ನ್ಯಾಪ್‌ ಆಗಿರೋ ವಿಷಯ ಹೇಗೆ ಗೌತಮ್‌ಗೆ ಗೊತ್ತಾಗುತ್ತೆ?, ಲಕ್ಷ್ಮೀಕಾಂತ್‌ನನ್ನು ಹುಡುಕಿಕೊಂಡು ಗೌತಮ್ ಬಂದೇ ಬರುತ್ತಾನೆ.. ಆಗ ತನ್ನ ಸೇಡು ತೀರಿಸಿಕೊಳ್ಳಲು ಜೈದೇವ್ ಕಾಯುತ್ತಿದ್ದಾನೆ. ಮತ್ತೊಂದೆಡೆ  ಲಕ್ಷ್ಮೀಕಾಂತ್‌ ಜೈದೇವ್ ಗೆ ಸತ್ಯ ಹೇಳಲು ತಯಾರಿಲ್ಲ. ನನ್ನ ಸಾಯಿಸಿದರೂ ಕೂಡಾ ನಾನು ಸತ್ಯ ಹೇಳುವುದಿಲ್ಲ ಎಂದು ಜೈದೇವ್‌ಗೆ ಶಕುನಿಮಾಮ ಸವಾಲ್ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜೇಡಿ ಮಾವನನ್ನು ಸಾಯಿಸುತ್ತಾನಾ?  ಮಾವನಿಗೆ ತೊಂದರೆ ಕೊಟ್ಟು, ಅವನ ಪ್ರಾಣಕ್ಕೆ ಸಂಚಕಾರ ತರುತ್ತಾನಾ? ಈ ಎಲ್ಲಾ ಪ್ರಶ್ನೆಗೆ ಸಧ್ಯದ್ಲಲೇ ಉತ್ತರ ಸಿಗಲಿದೆ.

ಲಕ್ಷ್ಮೀಕಾಂತ್‌ ಪ್ರಾಣಕ್ಕೆ ಅಪಾಯ ಆಗಿ, ಅವನ ಪಾತ್ರ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಸೀರಿಯಲ್‌ ಕಥೆ ಸಾಗುವ ವೇಗ ನೋಡಿದರೆ ಸದ್ಯದ್ಲಲೇ  ಕ್ಲೈಮ್ಯಾಕ್ಸ್‌ ಸಿಗಲಿದೆ.

Sulekha