ಕೇಡಿ ಶಕುಂತಲಾಗೆ ಆಸ್ತಿ ಬರೆದುಕೊಟ್ಟ ಗೌತಮ್ – ಮನೆ ಬಿಟ್ಟು ಹೊರಟೇ ಬಿಟ್ಟ ಗೌತಮ್

ಅಮೃತಧಾರೆ ಧಾರಾವಾಹಿಯಲ್ಲಿ ಕಥೆ ರೋಚಕ ತಿರುವಿನಲ್ಲಿ ಸಾಗುತ್ತಿದೆ. ಮಲತಾಯಿಯ ಮೋಸ ಗೌತಮ್ ಮನಸನ್ನು ಕದಡಿದೆ. ಪತ್ನಿ ಭೂಮಿಕಾ ಇಲ್ಲದೇ ಗೌತಮ್ ಕಂಗಾಲಾಗಿದ್ದಾನೆ. ಇದರ ಜೊತೆಗೆ ಗೌತಮ್ ಮನೆ ಬಿಟ್ಟು ಹೋಗುವ ಸಮಯ ಕೂಡಾ ಬಂದಿದೆ.
ಇದನ್ನೂ ಓದಿ: ಮಲ್ಲಿಗೆ ಮುಡಿದ ಕನ್ನಡದ ನಟಿಗೆ 1.14 ಲಕ್ಷ ದಂಡ! – ಹೊಸ ರೂಲ್ಸ್ ಗೆ ಬೆಚ್ಚಿಬಿದ್ದ ಬ್ಯೂಟಿ!
‘ಅಮೃತಧಾರೆ’ ಧಾರಾವಾಹಿ ಈಗ ಕುತೂಹಲ ಘಟ್ಟ ತಲುಪಿದೆ. ಗೌತಮ್ಗೆ ಮಲತಾಯಿಯಿಂದ ಇಷ್ಟು ದಿನ ವಂಚನೆಯಾಗುತ್ತಿದ್ದರೂ ತಿಳಿಯುತ್ತಲೇ ಇರಲಿಲ್ಲ. ಕೊನೆಗೂ ಈ ಮೋಸದ ಬಗ್ಗೆ ಗೌತಮ್ಗೆ ಗೊತ್ತಾಗುವ ಸಮಯ ಬಂದೇ ಬಿಟ್ಟಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಮಲತಾಯಿ ಶಕುಂತಲಾ ಗೌತಮ್ಗೆ ಮೋಸ ಮಾಡಿರುವುದು, ಮಲತಾಯಿ ಧೋರಣೆ ತೋರಿದ್ದು ಎಲ್ಲಾ ಗೌತಮ್ ಎದುರೇ ಬಯಲಾಗಿದೆ. ಭೂಮಿಕಾ ಹಾಗೂ ಗೌತಮ್ನ ಸಂಪೂರ್ಣವಾಗಿ ದೂರ ಮಾಡಿದ್ದಾಳೆ. ಆ ಬಳಿಕ ಮತ್ತೊಂದು ಮಗುವಿನ ಬಗ್ಗೆ ನಿಜ ಹೇಳದ ಕಾರಣ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಭೂಮಿಕಾ ಹೆಸರಲ್ಲಿ ಶಕುಂತುಲಾಳೇ ಪತ್ರ ಬರೆದಿದ್ದಾಳೆ. ಈ ಸತ್ಯವನ್ನು ಗೌತಮ್ ಅಮ್ಮ ತಿಳಿಸಿದ್ದಾರೆ. ಈ ವಿಚಾರ ತಿಳಿಯತ್ತಿದ್ದಂತೆ ಗೌತಮ್ ಓಡೋಡಿ ಮನೆಗೆ ಬಂದಿದ್ದಾನೆ. ಅಲ್ಲಿ ಶಕುಂತಲಾ ಹಾಗೂ ಅವಳ ಮಗ ಜಯದೇವ್ ಈ ಬಗ್ಗೆ ಚರ್ಚೆ ಮಾಡುತ್ತಾ ಕೂತಿರುತ್ತಾರೆ. ಇದನ್ನು ಕೇಳಿ ಗೌತಮ್ಗೆ ಸಾಕಷ್ಟು ಬೇಸರ ಆಗುತ್ತದೆ. ‘ಯಾಕೆ ಹೀಗೆ ಮಾಡಿದಿರಿ’ ಎಂದು ನೊಂದುಕೊಂಡು ಮನೆ ಬಿಟ್ಟು ಹೊರಡುತ್ತಾನೆ. ‘ನನಗೆ ಶಾಂತಿ-ನೆಮ್ಮದಿ ಬೇಕಿದೆ. ಈ ಆಸ್ತಿಯೆಲ್ಲವೂ ನಿಮ್ಮದು’ ಎಂದು ತಾಯಿ ಹೆಸರಿಗೆ ಆಸ್ತಿ ಬರೆದಿಟ್ಟು ಗೌತಮ್ ಹೊರಟೇ ಬಿಡುತ್ತಾನೆ. ಈ ಮೊದಲೇ ಬಿಡುಗಡೆ ಮಾಡಿರೋ ಪ್ರೋಮೋದಲ್ಲಿ ತೋರಿಸಿರುವಂತೆ ಧಾರಾವಾಹಿಯಲ್ಲಿ 5 ವರ್ಷಗಳ ನಂತರದ ಕಥೆ ಬರಲಿದೆ. ಅದು ಯಾವಾಗಿನಿಂದ ಆರಂಭ ಆಗುತ್ತದೆ ಎಂಬ ಕುತೂಹಲ ಮೂಡಿದೆ.
ಐದು ವರ್ಷದ ಬಳಿಕ ಗೌತಮ್ ಕಾರು ಡ್ರೈವರ್ ಆಗಿದ್ದಾನೆ. ಭೂಮಿಕಾಳ ಹುಡುಕುತ್ತಾ ಐದು ವರ್ಷಗಳೇ ಕಳೆದು ಹೋಗಿವೆ. ಈ ವೇಳೆ ಒಮ್ಮೆ ಅವನಿಗೆ ಮಗ ಸಿಗುತ್ತಾನೆ. ಇದನ್ನು ನೋಡಿ ಆತ ಖುಷಿ ಪಡುತ್ತಾನೆ. ಮತ್ತೆ ಇವರು ಒಂದಾಗುತ್ತಾರಾ ಎಂಬುದು ಸದ್ಯದ ಕುತೂಹಲ.
ಇದರ ಮಧ್ಯೆ ಭೂಮಿಕಾ ಮಂತ್ರಾಲಯದಲ್ಲಿ ಇರೋದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರು ಕೂಡಾ ಗೌತಮ್ ಸಹಾಯಕ್ಕೆ ನಿಂತಿದ್ದಾರೆ. ಒಟ್ನಲ್ಲಿ, ಅಮೃತಧಾರೆ ಧಾರಾವಾಹಿ ಮತ್ತೊಮ್ಮೆ ವೀಕ್ಷಕರನ್ನ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನೋಡಿರಿ

