ಅಮೃತಧಾರೆ ಸೀರಿಯಲ್‌ ನಲ್ಲಿ ಬಂದೇ ಬಿಡ್ತು ಆ ಕ್ಷಣ..!- ಭೂಮಿಗೆ ಗೌತಮ್ ಹೂವು ಕೊಟ್ಟಾಯ್ತು..!

ಅಮೃತಧಾರೆ ಸೀರಿಯಲ್‌ ನಲ್ಲಿ ಬಂದೇ ಬಿಡ್ತು ಆ ಕ್ಷಣ..!- ಭೂಮಿಗೆ ಗೌತಮ್ ಹೂವು ಕೊಟ್ಟಾಯ್ತು..!

ಅಮೃತಧಾರೆ ಸೀರಿಯಲ್‌ನಲ್ಲಿ  ವೀಕ್ಷಕರು ಬಯಸಿದಂತೆ ಆಗುವ ಸಮಯ ಹತ್ತಿರ ಬಂದಾಯ್ತು.. ಪ್ರೀತಿಯ ಮಡದಿಯನ್ನು ಗೌತಮ್ ನೋಡಿದ್ದೂ ಆಯ್ತು. ಇನ್ನೇನು ಹೂವು ಕೊಟ್ಟಾಯ್ತು.. ಈ ಮಹಾ ಸಮ್ಮಿಲನಕ್ಕೆ ವೀಕ್ಷಕರು ಸಾಕ್ಷಿಯಾಗಬೇಕಷ್ಟೇ.

ಇದನ್ನೂ ಓದಿ:ಭೂಮಿಕಾ ಎಲ್ಲೋ.. ಗೌತಮ್ ಅಲ್ಲೇ.. – ಶಕುಂತಲಾ, ಜೈದೇವ್ ಬೀದಿಗೆ ಬೀಳಲು ಕೌಂಟ್‌ಡೌನ್ ಶುರು..

‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ ಮುಖಾಮುಖಿಯಾಗುವುದನ್ನೇ ವೀಕ್ಷಕರು ಕಾಯುತ್ತಾ ಇದ್ದರು. ಈ ಘಳಿಗೆ ಕೂಡಾ ಕೂಡಿ ಬಂದಾಗಿದೆ. ಕುಶಾಲನಗರದಲ್ಲಿ ಕೊನೆಗೂ ಭೂಮಿಕಾ ಆಟೋ ಹತ್ತಿ ಹೋಗುವುದನ್ನು ಗೌತಮ್‌ ನೋಡಿಯಾಗಿದೆ. ಗುಲಾಬಿ ಹೂ ಕೊಟ್ಟೂ ಆಗಿದೆ. ವಾಹಿನಿಯು ಈ ಪ್ರೋಮೋ ರಿಲೀಸ್‌ ಮಾಡಿದೆ.

ಕಳೆದ ಐದು ವರ್ಷಗಳಿಂದ ಗೌತಮ್‌ ದಿವಾನ್‌ ತನ್ನ ಮನದರಸಿ ಭೂಮಿಕಾಳನ್ನು ಹುಡುಕಿಕೊಂಡು ಕಾರ್‌ ಡ್ರೈವರ್‌ ಆಗಿ ಊರೂರು ಅಲೆಯುತ್ತಿದ್ದಾನೆ. ಕುಶಾಲನಗರದಲ್ಲಿ ಕೊನೆಗೂ ಮನದರಸಿ ಭೂಮಿ ಸಿಕ್ಕಿದ್ದಾಳೆ. ಮನದರಸಿ ಭೂಮಿ ಕಣ್ಣೆದುರು ಬಂದಾಯ್ತು, ರೋಚಕ ಘಟ್ಟದಲ್ಲಿ ಅಮೃತಧಾರೆ ಎಂಬ ಟೈಟಲ್‌ ಅಡಿಯಲ್ಲಿ ಹೊಸ ಪ್ರೋಮೋ ರಿಲೀಸ್‌ ಆಗಿದೆ. ಭೂಮಿಕಾಳನ್ನು ಗೌತಮ್‌ ಹುಡುಕಾಡದ ಜಾಗವಿರಲಿಲ್ಲ. ಗೌತಮ್ ನೋಡಲು ಆನಂದ್‌ ಕುಶಾಲನಗರಕ್ಕೆ ಆಗಮಿಸಿದ್ದ. ಆಗ ಶಾಲೆ ಬಳಿ ಗೌತಮ್‌ಗೆ ಭೂಮಿಕಾ ಕಂಡಿದ್ದಾಳೆ. ಆಗ ಅವನಿಗೆ ಇಲ್ಲಿಯೇ ಭೂಮಿಕಾ ಟೀಚರ್‌ ಆಗಿ ಕೆಲಸ ಮಾಡುತ್ತಿರೋದು ಗೊತ್ತಾಗಿದೆ. ಮರುದಿನ ಅವನು ಓರ್ವ ವಿದ್ಯಾರ್ಥಿನಿ ಬಳಿ ಹೂ ತಲುಪಿಸಿ, ನಿಮಗೆ ಹೂ ಕೊಡೋ ಧೈರ್ಯ ಯಾರಿಗಿದೆ? ನಾನು, ನಿಮ್ಮ ಗೌತಮ್ ಎಂದು ಪತ್ರದಲ್ಲಿ ಬರೆದಿದ್ದಾನೆ. ಗಂಡನ ಲವ್ ಲೆಟರ್‌ ನೋಡಿ ಭೂಮಿಕಾ ಹಕ್ಕಿಯಂತೆ ಹಾರಾಡಿದ್ದಾಳೆ.‌ ಅದಾದ ಬಳಿಕ ಗೌತಮ್‌ ಹಾಗೂ ಭೂಮಿಕಾ ಮುಖಾಮುಖಿಯಾಗಿದ್ದಾರೆ. ನಾವಿಬ್ಬರು ಒಟ್ಟಿಗೆ ಬದುಕೋಕೆ ನೂರಾರು ಕಾರಣಗಳಿತ್ತು. ಯಾಕೆ ನನ್ನನ್ನು ಒಂಟಿಯಾಗಿ ಮಾಡಿ ಬಿಟ್ಟು ಹೋದ್ರಿ..?, ಎಂದು ಗೌತಮ್‌ ಪ್ರಶ್ನೆ ಮಾಡಿದ್ದಾನೆ. ಗೌತಮ್‌ ಮಾತಿಗೆ ಭೂಮಿಕಾ ಏನು ಹೇಳಿದ್ದಾಳೆ ಎಂದು ತಿಳಿದುಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ.

Sulekha