ಗೌತಮ್ ಮಗಳು ಸಿಕ್ಕೇಬಿಟ್ಟಳು – ಭೂಮಿಕಾ ಇನ್ನಾದರೂ ಗೌತಮ್ ಹತ್ತಿರ ಬರುತ್ತಾಳಾ?

ಅಮೃತಧಾರೆ ಧಾರಾವಾಹಿಯಲ್ಲಿ ಈಗ ರೋಚಕ ಕಥೆ ಸಾಗುತ್ತಿದೆ. ಗೌತಮ್ನ ಕಳೆದುಹೋದ ಮಗಳು ಮತ್ತೆ ಸಿಗುವ ಸೂಚನೆ ಸಿಕ್ಕಿದೆ. ಹೊಸ ಪ್ರೋಮೋದಲ್ಲಿ ತೋರಿಸಿದ ಮಗು ಗೌತಮ್ ಮತ್ತು ಭೂಮಿಕಾದ್ದು ಎಂದು ಹೇಳಲಾಗಿದೆ.
ಇದನ್ನೂ ಓದಿ: ನಿಧಿ ಜೊತೆ ಕರ್ಣನ ಮದುವೆ ನಡೆಯಲ್ವಾ? – ವಾರ ಪೂರ್ತಿ ಪ್ರಸಾರವಾಗಲಿದೆ ಮದುವೆ ಸಂಭ್ರಮ
‘ಅಮೃತಧಾರೆ’ ಧಾರಾವಾಹಿ ಸಾಕಷ್ಟು ತಿರುವುಗಳನ್ನು ಪಡೆದು ಸಾಗುತ್ತಾ ಇದೆ. ಕಳೆದು ಹೋಗಿದ್ದ ಗೌತಮ್ ಮಗಳು ಸಿಗುವ ಸೂಚನೆ ಸಿಕ್ಕಿದೆ. ಗೌತಮ್ ದೀವಾನ್ಗೆ ಇಬ್ಬರು ಮಕ್ಕಳು ಜನಿಸಿದ್ದರು. ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು. ಗಂಡು ಮಗು ಉಳಿದುಕೊಂಡರೆ, ಹೆಣ್ಣು ಮಗು ಕಳೆದು ಹೋಗಿದೆ. ಕೊನೆಗೂ ಕಳೆದುಹೋದ ಮಗಳು ಸಿಗುವ ಸೂಚನೆ ಸಿಕ್ಕಿದೆ.
ಗೌತಮ್ ದೀವಾನ್ ತನ್ನ ಕಳೆದುಹೋದ ಮಗುವನ್ನು ಹುಡಕಿಕೊಂಡು ಸಾಕಷ್ಟು ಕಡೆಗಳಲ್ಲಿ ಸುತ್ತಾಡಿದ್ದಾನೆ. ಆದರೆ, ಈವರೆಗೆ ಮಗು ಸಿಕ್ಕಿರಲೇ ಇಲ್ಲ. ಈ ಕಾರಣದಿಂದಲೇ ಭೂಮಿಕಾ ಕೂಡ ಗೌತಮ್ನ ಬಿಟ್ಟು ಹೋಗಿದ್ದಳು. ಈ ವಿಚಾರ ಆತನಿಗೆ ಸಾಕಷ್ಟು ಬೇಸರ ಇದೆ. ಈಗ ಹೊಸ ಪ್ರೋಮೋದಲ್ಲಿ ರೋಚಕ ತಿರುವು ಎಂಬ ಪ್ರೋಮೋ ಹಂಚಿಕೊಳ್ಳಲಾಗಿದೆ. ದಂಪತಿಯೊಬ್ಬರು ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕಿರುತ್ತಾರೆ. ಆದರೆ, ಮಗು ನಮಗೆ ಬೇಡ ಎಂದು ಅವರು ದೂರ ಹೋಗುತ್ತಾರೆ. ಈಗ ಮತ್ತೊಮ್ಮೆ ಒಂಟಿಯಾದ ಮಗು ಗೌತಮ್ ಮತ್ತು ಭೂಮಿಕಾಗೆ ಹುಟ್ಟಿದ ಹೆಣ್ಣು ಮಗಳೇ ಎಂದು ಹೇಳಲಾಗುತ್ತಾ ಇದೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಮತ್ತೆ ಒಂದಾಗಬೇಕು ಎಂಬುದು ಅನೇಕರ ಕೋರಿಕೆ. ಅದಕ್ಕೂ ಮೊದಲೇ ಅವನ ಮಗಳು ಸಿಗುವ ಸೂಚನೆ ಸಿಕ್ಕಿದೆ. ಮಗಳು ಸಿಕ್ಕಿದ ಮೇಲೆ ಗೌತಮ್ ಮತ್ತು ಭೂಮಿಕಾ ಒಂದಾಗುತ್ತಾರಾ ಅನ್ನೋ ಕುತೂಹಲ ವೀಕ್ಷಕರದ್ದು.

ನೋಡಿರಿ

