ಗಂಭೀರ್ ಗಿಲ್ಲ ಗಂಡಾಂತರ – ಟೀಂ ಮುಳುಗಿಸಿದ್ರೂ ಚಿಂತೆ ಇಲ್ಲ!
BCCI ಮೊಂಡಾಟವೇಕೆ?

ಟೀಂ ಇಂಡಿಯಾದ ಇಷ್ಟು ವರ್ಷಗಳ ಕ್ರಿಕೆಟ್ ಜರ್ನಿಯಲ್ಲಿ ಗ್ರೆಗ್ ಚಾಪೆಲ್ರನ್ನ ಬಿಟ್ರೆ ಹೆಡ್ಕೋಚ್ ಆಗಿ ಗೌತಮ್ ಗಂಭೀರೇ ಒಬ್ರೇ ಇಷ್ಟೊಂದು ಟೀಕೆಗಳನ್ನ ಎದುರಿಸಿದ್ದು. ಹುದ್ದೆಯಿಂದಲೇ ಕೆಳಗಿಳಿಸಿ ಅನ್ನೋವಷ್ಟರ ಮಟ್ಟಿಗೆ ಟ್ರೆಂಡ್ ಕ್ರಿಯೇಟ್ ಆಗಿದ್ದು. ಈಗ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನೂ ಸೋತ್ರೆ ಗೇಟ್ಪಾಸ್ ಪಕ್ಕಾ ಅಂತಾನೇ ಕೆಲ ರಿಪೋರ್ಟ್ ಆಗಿತ್ತು. ಬಟ್ ರಿಯಾಲಿಟಿ ಏನಂದ್ರೆ ಟೀಂ ಇಂಡಿಯಾ ನೆಲ ಕಚ್ಚಿದ್ರೂ ಗಂಭೀರ್ನ ಮಾತ್ರ ಬಿಟ್ಟುಕೊಡೋಕೆ ಬಿಸಿಸಿಐ ರೆಡಿ ಇಲ್ಲ. 2027ರ ಏಕದಿನ ವಿಶ್ವಕಪ್ವರೆಗೂ ಗಂಭೀರ್ ಕುರ್ಚಿ ಸೇಫ್ ಅನ್ನೋದು ಫೈನಲ್ ಆಗಿದೆ.
ಇದನ್ನೂ ಓದಿ : IPL ಗಾಯ.. ಟೀಂ ಇಂಡಿಯಾಗೆ ಬರೆ – ನೋವಿದ್ರೂ ಇಂಜೆಕ್ಷನ್ ಪಡೆದು ಆಡ್ತಾರಾ?
15 ವರ್ಷಗಳ ಕಾಲ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನ ಸೋಲದ ಬಲಿಷ್ಠ ಭಾರತ ಗೌತಮ್ ಗಂಭೀರ್ ಅಂಡರ್ನಲ್ಲಿ ಬಲಹೀನವಾಗಿದೆ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಕ್ಲೀನ್ ಸ್ವೀಪ್ ಆಗಿ ಅವಮಾನ ಅನುಭವಿಸಿದೆ. 2027 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ಅರ್ಹತೆ ಪಡೆಯೋದು ಕಷ್ಟ ಆಗಿದೆ. ಇದೇ ಕಾರಣಕ್ಕೆ ಗಂಭೀರ್ ಗೆ ತಂಡದಿಂದ ಗೇಟ್ ಪಾಸ್ ಕೊಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿತ್ತು. ಹೀಗಿದ್ರೂ ಗಂಭೀರ್ ಸ್ಥಾನ ಸೇಫ್ ಆಗಿದೆ. ಹೀನಾಯ ಸೋಲುಗಳ ನಡುವೆಯೂ ಬಿಸಿಸಿಐ ಗಂಭೀರ್ ಬೆನ್ನಿಗೆ ನಿಂತಿದೆ.
ಗಂಭೀರ್ ಕುರ್ಚಿ ಉಳಿಸಲು ನೆಪ ಹುಡುಕುತ್ತಿದೆ ಬಿಸಿಸಿಐ!
ಕಳೆದ ವರ್ಷ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೇ ಆರ್.ಅಶ್ವಿನ್ರಂಥ ದಿಗ್ಗಜರು ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಈಗ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ಕೋರ್ ಟೀಂ ಸಿದ್ಧವಾಗಿದೆ. ಅಷ್ಟೇ ಅಲ್ಲ ಭಾರತದ ಪರ ಸಾಲು ಸಾಲು ಆಟಗಾರರು ಇಂಜುರಿಯಾಗಿದ್ದಾರೆ. ಇದೇ ಕಾರಣವನ್ನೇ ಮುಂದಿಟ್ಟುಕೊಂಡು ಬಿಸಿಸಿಐ ಕುಂಟು ನೆಪ ಹುಡುಕ್ತಿದೆ. ಅಂದ್ರೆ ಟೆಸ್ಟ್ ಪಂದ್ಯಗಳ ಸೋಲಿನಲ್ಲಿ ಗಂಭೀರ್ ಪಾತ್ರ ಇಲ್ಲ. ದಿಗ್ಗಜ ಪ್ಲೇಯರ್ಸ್ ನಿವೃತ್ತಿ ಹೊಂದಿದ್ದು ಹಾಗೇ ಇಂಜುರಿ ಸಮಸ್ಯೆಗಳೇ ಸೋಲಿಗೆ ಕಾರಣ ಅನ್ನೋ ಸಬೂಬು ಹುಡುಕಿದ್ದಾರೆ. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯ ಸಮಯದಲ್ಲಿ ಗಿಲ್ ಇಂಜುರಿ ಆಗದೇ ಇದ್ರೆ ಫಲಿತಾಂಶಗಳು ವಿಭಿನ್ನವಾಗಿರುತ್ತಿದ್ದವು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಪ್ರವಾಸಕ್ಕೂ ಮುನ್ನ ಭಾರತ ತಂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ನಂಬರ್ -3 ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರಂತಹ ಪ್ರಮುಖ ಆಟಗಾರರು ಪ್ರವಾಸಕ್ಕೆ ಲಭ್ಯವಿಲ್ಲ. ಶ್ರೀಲಂಕಾ ಪ್ರವಾಸದ ನಂತರ ಡಬ್ಲ್ಯೂಟಿಸಿ 2025-27 ಚಕ್ರದಲ್ಲಿ ಕೇವಲ ಎರಡು ಸರಣಿಗಳು ಉಳಿದಿರುವುದರಿಂದ, ಟೆಸ್ಟ್ ತಂಡಕ್ಕೆ ಮಧ್ಯಂತರ ಮುಖ್ಯ ಕೋಚ್ ಅನ್ನು ನೇಮಿಸುವ ನಿರ್ಧಾರವನ್ನ ಕೈಬಿಟ್ಟಿದ್ದಾರೆ. ಹೀಗಾಗೇ ವೈಟ್-ಬಾಲ್ ಕ್ರಿಕೆಟ್ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಗಂಭೀರ್, 2027 ರ ಏಕದಿನ ವಿಶ್ವಕಪ್ ವರೆಗೆ ಈ ಸ್ಥಾನದಲ್ಲಿ ಭದ್ರವಾಗಿ ಇರ್ತಾರೆ.
ಅದೂ ಅಲ್ದೇ 2024ರ ಜುಲೈನಲ್ಲಿ ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಮೇಲೆ ಗಂಭೀರ್ ಅವ್ರನ್ನ ಮೂರೂವರೆ ವರ್ಷಗಳ ಸುದೀರ್ಘ ಅವಧಿಗೆ ಆಯ್ಕೆ ಮಾಡಿದೆ. 2027ರ ಏಕದಿನ ವಿಶ್ವಕಪ್ವರೆಗೂ ಎಲ್ಲಾ ಮಾದರಿಯಲ್ಲೂ ಅವ್ರೇ ಕಂಟಿನ್ಯೂ ಆಗ್ತಾರೆ. ಹಾಗೇ ಒಪ್ಪಂದ ಕೂಡ ಅಲ್ಲಿಯವರೆಗೆ ಇರುವಂಥದ್ದು. ಹೀಗಾಘಿ ಸದ್ಯಕ್ಕೆ ಬಿಸಿಸಿಐ ಗಂಭೀರ್ರನ್ನ ಬದಲಾವಣೆ ಮಾಡೋ ಪ್ಲ್ಯಾನ್ನಲ್ಲಿಲ್ಲ. ಆದ್ರೆ ಗಂಭೀರ್ ಅಡಿಯಲ್ಲಿ ಭಾರತ ಮೂರೂ ಮಾದರಿಯಲ್ಲೂ ಸಫರ್ ಆಗಿದೆ. ಅದ್ರಲ್ಲೂ ಟೆಸ್ಟ್ ಟೀಂ ಕಂಪ್ಲೀಟ್ ಹಳ್ಳ ಹಿಡಿದಿದೆ. ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತ ತಂಡವು ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದೆ. 10 ಪಂದ್ಯಗಳನ್ನ ಸೋತಿದೆ. ಹಾಗೇ 2 ಪಂದ್ಯಗಳು ಡ್ರಾ ಆಗಿವೆ. ಇನ್ನು ತಂಡದ ಕಳಪೆ ಪ್ರದರ್ಶನಕ್ಕೆ ಗಂಭೀರ್ ಅವ್ರ ನಿರ್ಧಾರಗಳೇ ಕಾರಣ ಅನ್ನೋದು ಎಲ್ರಿಗೂ ಗೊತ್ತಿರೋದೇ. ಯಾಕಂದ್ರೆ ಕೋಚ್ ಆಗಿದ್ದಾಗ ರವಿಶಾಸ್ತ್ರಿಗಿದ್ದ ಮೋಟಿವೇಷನಲ್ ಮೈಂಡ್ಸೆಟ್ ಆಗ್ಲಿ ರಾಹುಲ್ ದ್ರಾವಿಡ್ಗಿದ್ದ ವಿನ್ನಿಂಗ್ ಟ್ರಿಕ್ಸ್ ಆಗ್ಲಿ ಗಂಭೀರ್ರಲ್ಲಿಲ್ಲ. ಡಿಕ್ಟೇಟರ್ಶಿಪ್ ರೀತಿಯಲ್ಲಿ ನಿರ್ಧಾರಗಳನ್ನ ಕೈಗೊಳ್ತಿರೋದೇ ತಂಡದ ಫಲಿತಾಂಶದಲ್ಲೂ ಪರಿಣಾಮ ಬೀರ್ತಿದೆ. ಹೀಗಿದ್ರೂ ಗಂಭೀರ್ ವಿಚಾರದಲ್ಲಿ ಬಿಸಿಸಿಐ ಕಠಿಣ ನಿರ್ಧಾರ ತಗೊಳ್ಳೋಕೂ ರೆಡಿ. ಕೋಚ್ ಹುದ್ದೆಯಲ್ಲಿ ಅವ್ರನ್ನ ಸೇಫ್ ಮಾಡೋಕೆ ಏನೆಲ್ಲಾ ರೀಸನ್ಸ್ ಬೇಕೋ ಅದನ್ನೆಲ್ಲಾ ಹುಡುಕುತ್ತಿದ್ದಾರೆ ಅಷ್ಟೇ.

ನೋಡಿರಿ

