ಗಂಭೀರ್ ಕೋಚ್.. ಯಾರೆಲ್ಲಾ ಔಟ್? – BCCI ಮುಂದೆ ಗೌತಿ 5 ಡಿಮ್ಯಾಂಡ್
ಜುಲೈನಿಂದ ಹೊಸ ಟೀಂ ಇಂಡಿಯಾ?

ಗಂಭೀರ್ ಕೋಚ್.. ಯಾರೆಲ್ಲಾ ಔಟ್? – BCCI ಮುಂದೆ ಗೌತಿ 5 ಡಿಮ್ಯಾಂಡ್ಜುಲೈನಿಂದ ಹೊಸ ಟೀಂ ಇಂಡಿಯಾ?

ಟೀಂ ಇಂಡಿಯಾದ ಹೆಡ್​ ಕೋಚ್​ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಬಳಿಕ ನಾನು ಕಂಟಿನ್ಯೂ ಮಾಡಲ್ಲ ಅಂತಾ ಈಗಾಗ್ಲೇ ದ್ರಾವಿಡ್​ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್​ ಪಯಣ ಮುಗಿದ ಬೆನ್ನಲ್ಲೇ ದಿ ವಾಲ್​​ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಬಳಿಕ ನೂತನ ಹೆಡ್​ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟಿಗ, ಐಪಿಎಲ್‌ನ ಕೆಕೆಆರ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಪದಗ್ರಹಣ ಕೂಡ ಫಿಕ್ಸ್​ ಆಗಿದೆ. ಇದ್ರ ನಡುವೆ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾರನ್ನ ಗಂಭೀರ್ ಭೇಟಿಯಾಗಿ ಮಾತುಕತೆ ನಡೆಸಿರೋದು ಬಾರೀ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಟೀಂ ಇಂಡಿಯಾದ ಹೆಡ್ ಕೋಚ್​ ಹುದ್ದೆಯ ಆಫರ್​ ಅನ್ನ ಗಂಭೀರ್​ ಸುಮ್ಮನೆ ಒಪ್ಪಿಕೊಂಡಿಲ್ಲ. ಬಿಗ್ ಬಾಸ್​ಗಳ ಮುಂದೆ ಭರ್ಜರಿ ಡಿಮ್ಯಾಂಡ್​ಗಳಲ್ಲೇ ಇಟ್ಟಿದ್ದಾರಂತೆ. ತಮ್ಮ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ, ಅಧಿಕಾರ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದಕ್ಕೆ ಬಿಸಿಸಿಐ ಕೂಡ ಗ್ರೀನ್​​​ ಸಿಗ್ನಲ್ ನೀಡಿದ್ದು, ಈ ಬಳಿಕವೇ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: GILLಗೆ ಗೇಟ್ ​ಪಾಸ್ ಕೊಟ್ಟ BCCI – ವಿಶ್ವಕಪ್ ಹೆಸ್ರಲ್ಲಿ ಬ್ಯುಸಿನೆಸ್ ಮಾಡಿದ್ರಾ?

ಗಂಭೀರ್ ಭರ್ಜರಿ ಡಿಮ್ಯಾಂಡ್

ಟೀಂ ಇಂಡಿಯಾದಲ್ಲಿ ಸಪೋರ್ಟಿಂಗ್ ಸ್ಟಾಫ್ ಬದಲಾವಣೆ ಮಾಡಿ ತನಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ ಮಾಡಿಕೊಳ್ಳೋದು. ಹಾಗೇ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, ನಾಯಕತ್ವ ಬದಲಾವಣೆಗೂ ಷರತ್ತು ಇಟ್ಟಿದ್ದಾರೆ ಎನ್ನಲಾಗಿದೆ. ಹಾಗೇ ತಾವು ಹೆಚ್ ಕೋಚ್ ಆಗಿರುವ ಮೂರೂವರೆ ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು. ಐಸಿಸಿ ಟೂರ್ನಿಗಳನ್ನ ಗೆಲ್ಲಲು ಪ್ಲಾನ್ ಜೊತೆಗೆ ನೆರವು ಕಲ್ಪಿಸಬೇಕು ಎಂದಿದ್ದಾರಂತೆ. ಅಲ್ದೇ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್​, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ.ದಿಲೀಪ್​ ಬದಲಾಗೋದು ಪಕ್ಕಾ ಆಗಿದೆ. ಗಂಭೀರ್ ಕೋಚ್ ಅದ್ಮೇಲೆ ಯಾರನ್ನ ಸಂಪೋರ್ಟಿಂಗ್ ಸ್ಟಾಫ್​ ಆಗಿ ಕರೆತರ್ತಾರೆ ಅನ್ನೋದು ಕುತೂಹಲ‌ ಕೆರಳಿಸಿದೆ. ಅಲ್ದೇ ಟೀಮ್ ಇಂಡಿಯಾ ಆಯ್ಕೆಗೆ ಮಾನದಂಡವಾಗಿರುವ ಯೋ ಯೋ ಟೆಸ್ಟ್​ ಬಗ್ಗೆಯೇ ಗಂಭೀರ್​ ಅಪಸ್ವರ ಎತ್ತಿದ್ದಾರೆ. ಆಟಗಾರರ ಪ್ರತಿಭೆ, ಹೋರಾಟದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದಿದ್ದಾರೆ. ಹೀಗಾಗಿ ಗಂಭೀರ್, ಕೋಚ್ ಹುದ್ದೆಗೇರಿದ ಬಳಿಕ ಟೀಮ್ ಇಂಡಿಯಾದ ಆಯ್ಕೆಯ ಮಾನದಂಡವೇ ಬದಲಾಗುತ್ತಾ ಎಂಬ ಪ್ರಶ್ನೆಯೂ ಹಲವರಲ್ಲಿ ಕಾಡತೊಡಗಿದೆ.

ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ಗಂಭಿರ್ ಅವರ ವಾದವಾಗಿದೆ. ಇನ್ನು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಿರಿಯ ಆಟಗಾರರಿಗೆ ಕೊನೆಯ ಅವಕಾಶ ಆಗಿರುತ್ತದೆ. ಅಲ್ಲಿ ಹಿರಿಯ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂಬುದು ಗಂಭೀರ್ ಅನಿಸಿಕೆ. ಒಟ್ನಲ್ಲಿ ಗೌತಮ್​ ಗಂಭೀರ್​​ ಈ ರೀತಿಯ ಷರತ್ತುಗಳೆ ಬದಲಾವಣೆಯ ಮನ್ಸೂಚನೆಯನ್ನ ನೀಡಿವೆ. ಗೌತಿ ಹೆಡ್​ ಕೋಚ್​ ಆದ ಬಳಿಕ ಕೆಲ ಆಟಗಾರರು ಹಾಗೂ ಸಂಪೋರ್ಟಿಂಗ್ ಸ್ಟಾಫ್​​ಗೆ​​​ ಗೇಟ್​​​ಪಾಸ್ ಗ್ಯಾರಂಟಿಯಾಗಿದೆ. ಗಂಭೀರ್ ಭಾರತ ತಂಡದ ಕೋಚ್ ಹುದ್ದೆಗೇರುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಹಾಗೇ ಕ್ರಿಕೆಟ್ ಲೋಕದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

Shwetha M