ವಿಶ್ವಕಪ್ ಗೂ ಮೊದಲೇ ಗೌತಮ್ ಗಂಭೀರ್ ಔಟ್? – BCCIಗೆ ಹಿರಿಯ ಆಟಗಾರರ ದೂರು!
ಹೊಸ ಕೋಚ್ ಗಾಗಿ ಪಟ್ಟು ಹಿಡಿದ್ರಾ?

ಗೌತಮ್ ಗಂಭೀರ್ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಅವ್ರ ವಿಚಾರದಲ್ಲಿ ಒಂದಲ್ಲ ಒಂದು ಕಾಂಟ್ರವರ್ಸಿಯಲ್ ಡವಲಪ್ಮೆಂಟ್ ಆಗ್ತಾನೇ ಇರುತ್ತೆ. ಈಗ ಅವ್ರ ಹೆಡ್ಕೋಚ್ ಹುದ್ದೆಗೇ ಕುತ್ತು ಬರೋ ಬೆಳವಣಿಗೆ ಆಗ್ತಿದೆ. ಇಷ್ಟು ದಿನ ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್ ಗಂಭೀರ್ ವಿರುದ್ಧ ಮಾತ್ನಾಡ್ತಿದ್ರು. ಆದ್ರೀಗ ಹಿರಿಯ ಆಟಗಾರರೇ ಗಂಭೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಸಿಸಿಐಗೂ ದೂರು ಕೊಟ್ಟಿದ್ದಾರೆ. ಌಂಡ್ ಹೊಸ ಕೋಚ್ಗಾಗಿ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?
ಗೌತಮ್ ಗಂಭೀರ್ ಅಂಡರ್ನಲ್ಲಿ ಟೀಂ ಇಂಡಿಯಾ ಸಾಕಷ್ಟು ಅವಮಾನಕರ ಸೋಲುಗಳನ್ನ ಕಂಡಿದೆ. ಮೂರೂ ಮಾದರಿಯಲ್ಲೂ ಫಾರ್ಮ್ ಕಳ್ಕೊಂಡಿದೆ. ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗ್ತಿರೋ ಹೊತ್ತಲ್ಲೇ ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಪ್ಲೇಯರ್ಸ್ ತಿರುಗಿ ಬಿದ್ದಿದ್ದಾರೆ ಅನ್ನೋ ಸತ್ಯ ರಿವೀಲ್ ಆಗಿದೆ. ಹಾಗೆ ಹೊಸ ಕೋಚ್ ಕೂಗು ಹಲ್ ಚಲ್ ಎಬ್ಬಿಸಿದೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ಗೆ ಗೆ ಹಿರಿಯ ಆಟಗಾರರಿಂದ ದೂರು!
ಹೈಎಕ್ಸ್ಪೆಕ್ಟೇಷನ್ಸ್ ಇಟ್ಕೊಂಡು ಟೀಂ ಇಂಡಿಯಾ ಹೆಡ್ಕೋಚ್ ಹುದ್ದೆಗೇರಿದ್ದ ಗೌತಮ್ ಗಂಭೀರ್ ಗೆ ತಾವು ಅಂದುಕೊಂಡ ಲೆವೆಲ್ಗೆ ಸಕ್ಸಸ್ ಸಿಕ್ಕಿಲ್ಲ. ಸಾಲು ಸಾಲು ಸೋಲುಗಳು, ಸೆಲೆಕ್ಷನ್ ವಿಚಾರದಲ್ಲಿನ ಕನ್ಫ್ಯೂಷನ್ಸ್, ಡ್ರೆಸ್ಸಿಂಗ್ ರೂಂ ಅಸಮಾಧಾನ ಹೀಗೆ ಒಂದಿಲ್ಲೊಂದು ವಿವಾದಗಳು ಇದ್ದದ್ದೇ. ಈಗ ಟಿ-20ಐ ಹಾಗೇ ಏಕದಿನ ಸರಣಿಗಳನ್ನ ಸೋತಿದ್ದ ಗಂಭೀರ್ಗೆ ಹೊಸ ಸವಾಲು ಎದುರಾಗಿದೆ. ಗಂಭೀರ್ ಅವ್ರ ಕೋಚಿಂಗ್ ಸ್ಟೈಲ್ ಮತ್ತು ಟಫ್ ಡಿಸಿಷನ್ಸ್ ವಿರುದ್ಧ ಹಿರಿಯ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ಗೆ ರಹಸ್ಯವಾಗಿ ದೂರು ನೀಡಿರುವ ವಿಚಾರ ಗೊತ್ತಾಗಿದೆ. ಹಾಗೇ ಮಾಜಿ ಕ್ರಿಕೆಟಿಗರ ಬಳಿಯೂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಭಾರತೀಯ ಕ್ರಿಕೆಟ್ ವಲಯದಲ್ಲಿ ಸುನಾಮಿ ಎಬ್ಬಿಸಿದೆ.
ಹೆಡ್ ಕೋಚ್ ಸ್ಥಾನದಲ್ಲಿ ಡಿಕ್ಟೇಟರ್ ಆದ್ರಾ ಗಂಭೀರ್?
ಗೌತಮ್ ಗಂಭೀರ್ ಹೇಳಿ ಕೇಳಿ ಡೈರೆಕ್ಟ್ ಹಿಟ್ ಕ್ಯಾರೆಕ್ಟರ್. ಸೋತ್ರೂ ಗೆದ್ರೂ ಸೀರಿಯಸ್ ಆಗೇ ಕಾಣೋ ಗಂಭೀರ್ ರೂಡ್ ಆಗಿ ಡಿಸಿಷನ್ಸ್ ತಗೊಳ್ಳೋದೂ ಇದೆ. ಌಂಡ್ ಯಾರೇ ಆಗಿದ್ರೂ ಡೋಂಟ್ಕೇರ್ ಌಟಿಟ್ಯೂಡ್ ತೋರಿಸ್ತಾರೆ. ಬಟ್ ಈ ಹಿಂದೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗ ಈ ಥರ ಇರ್ಲಿಲ್ಲ. ಆಟಗಾರರೆಲ್ಲಾ ಫ್ರೆಂಡ್ಲಿಯಾಗಿ ಮೂವ್ ಆಗ್ತಿದ್ರು. ಅಲ್ಲಿ ಕೋಚ್, ಪ್ಲೇಯರ್ಸ್ ಅನ್ನೋ ಮೈಂಡ್ಸೆಟ್ ಕಾಣ್ತಾನೇ ಇರ್ಲಿಲ್ಲ. ಬಟ್ ಈಗ ಕಮ್ಯೂನಿಕೇಷನ್ ಮಿಸ್ ಆಗ್ತಿದೆ ಅನ್ನೋ ಕಂಪ್ಲೇಂಟ್ಸ್ ಇದೆ. ಅದೂ ಅಲ್ದೇ ಗೌತಮ್ ಗಂಭೀರ್ ಸರಣಿ ಸೋಲುಗಳ ರೆಸ್ಪಾನ್ಸಿಬಿಲಿಟಿ ತಗೊಳ್ಳೋಕೂ ರೆಡಿ ಇಲ್ವಂತೆ. ಫೇಲ್ಯೂರ್ಗಳನ್ನ ಆಟಗಾರರ ಮೇಲೆ ಹೊರಿಸ್ತಿದ್ದಾರೆ ಎಂಬ ಆರೋಪವೂ ಇದೆ. ಹಾಗೇ ಗಂಭೀರ್ ಕೋಚ್ ಆದ್ಮೇಲೆ ತಂಡದ ಪ್ರದರ್ಶನ ಕೂಡ ತೀರಾ ಕಳಪೆ ಆಗಿರೋದ್ರಿಂದ ಬದಲಾವಣೆ ಮಾಡಿದ್ರೆ ಒಳ್ಳೇದು ಅನ್ನೋ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2027ರ ಏಕದಿನ ವಿಶ್ವಕಪ್ ಬಳಿಕ ಗೌತಮ್ ಗಂಭೀರ್ ಅವ್ರ ಹೆಡ್ ಕೋಚ್ ಅವಧಿಯೂ ಮುಕ್ತಾಯವಾಗಲಿದೆ. ಆದ್ರೆ ಅದಕ್ಕೂ ಮುನ್ನವೇ ಹೊಸ ಹೆಡ್ಕೋಚ್ ನೇಮಕಕ್ಕೂ ಕೆಲವ್ರು ಪಟ್ಟು ಹಿಡಿದಿದ್ದಾರೆ. ಗಂಭೀರ್ ಅವರ ಕೋಚಿಂಗ್ ನಿರ್ಧಾರಗಳ ಬಗ್ಗೆ ಬಿಸಿಸಿಐ ಕೂಡ ತೀವ್ರ ಅಸಮಾಧಾನ ಹೊಂದಿದ್ದು, ಶೀಘ್ರದಲ್ಲೇ ಸಭೆ ಸೇರೋ ಸಾಧ್ಯತೆಗಳೂ ಇದೆ.

ನೋಡಿರಿ

