ಕಾನ್ಫಿಡೆನ್ಸ್ ಕಿಲ್ಲ*ರ್ ಗಂಭೀರ್ – ಮೂರೇ ಪಂದ್ಯಕ್ಕೆ ವೈಭವ್ ಬೇಡವಾದ್ರಾ?
ಟ್ರೋಲ್ ಗಳಿಗೆ ಹೆದರಿ ಚಾನ್ಸ್ ಕೊಟ್ರಾ?

ಕಾನ್ಫಿಡೆನ್ಸ್ ಕಿಲ್ಲ*ರ್ ಗಂಭೀರ್ – ಮೂರೇ ಪಂದ್ಯಕ್ಕೆ ವೈಭವ್ ಬೇಡವಾದ್ರಾ?ಟ್ರೋಲ್ ಗಳಿಗೆ ಹೆದರಿ ಚಾನ್ಸ್ ಕೊಟ್ರಾ?

ಅವ್ರನ್ನ ಬಿಟ್ಟು ಇವ್ರನ್ನ ಬಿಟ್ಟು ಅವರ್ಯಾರು ಅಂತಾ ಹಳ್ಳಿಗಳ ಕಡೆಗೆ ಮಕ್ಕಳೆಲ್ಲಾ ಕಣ್ಣಾಮುಚ್ಚಾಲೆ ಆಡ್ತಾರೆ. ಆದ್ರೆ ಈಗ ಟೀಂ ಇಂಡಿಯಾದಲ್ಲಿ ಈ ಆಟವನ್ನ ಹೆಡ್ ಕೋಚ್ ಗೌತಮ್ ಗಂಭೀರ್ ಆಡ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಕಣ್ಣು ಮುಚ್ಕೊಂಡು ಪ್ಲೇಯರ್​ಗಳನ್ನ ಪಿಕ್ ಮಾಡ್ತಿದ್ದಾರೆ. ಪ್ಲೇಯಿಂಗ್ 11ನಲ್ಲಿ ಇವತ್ತು ಆಡಿದವ್ರು ನೆಕ್ಸ್​ಟ್ ಆಡ್ತಾರೆ ಅಂತಾ ಯಾವ ಗ್ಯಾರಂಟಿನೂ ಇರಲ್ಲ. ಇದೇ ಕಾರಣಕ್ಕೆ ಗಂಭೀರ್​ಗೆ ಕಾನ್ಫಿಡೆನ್ಸ್ ಕಿಲ್ಲರ್ ಅನ್ನೋ ಹೊಸ ಟ್ಯಾಗ್​ಲೈನ್ ಸಿಕ್ಕಿದೆ. ಸೋಶಿಯಲ್ ಮೀಡಿಯಾ ನೋಡ್ಕೊಂಡು ಟೀಂ ಫೈನಲ್ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ : ರೋಹಿತ್ ಓಪನರ್.. KL ಕೀಪರ್ – ಬೌಲಿಂಗ್ ಯುನಿಟ್ ಗೆ ಬುಮ್ರಾ ಬ್ರಹ್ಮಾಸ್ತ್ರ

ಭಾರತ ಟಿ-20ಐ ತಂಡ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಹಾಗೇ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿದೆ. ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಂ ಈ ಎರಡೂ ತಂಡಗಳ ವಿರುದ್ಧ ಟಿ-20ಐ ಸರಣಿ ಸೋತಿರೋದು. ಈ ಸೋಲಿಗೆ ಒನ್ ಆಫ್ ದಿ ಮೇನ್ ರೀಸನ್ ಗಂಭೀರ್ ಅವ್ರ ನಿರ್ಧಾರಗಳು. ಲಾಜಿಕ್ ಇಲ್ಲದ ಎಕ್ಸ್​ಪೆರಿಮೆಂಟ್​ಗಳು.

ಆಟಗಾರರ ಕಾನ್ಫಿಡೆನ್ಸ್ ಕೊಲ್ಲುತ್ತಿದ್ದಾರಾ ಗಂಭೀರ್?

ಭಾರತ ಸತತ ಎರಡು ಟಿ-20ಐ ಸರಣಿಗಳನ್ನ ಸೋತಿದೆ. ಈ ಸೋಲುಗಳಿಗೆ ಆಟಗಾರರ ಕಳಪೆ ಪ್ರದರ್ಶನವೇ ಮುಖ್ಯ ಕಾರಣ ಅದ್ರಲ್ಲಿ ಡೌಟ್ ಇಲ್ಲ. ಆದ್ರೆ ಗೌತಮ್ ಗಂಭೀರ್ ಌಂಡ್ ಟೀಂ ಕೆಲ ಪ್ಲೇಯರ್​ಗಳನ್ನೇ ಟಾರ್ಗೆಟ್ ಮಾಡ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಕಡೆಯಿಂದ ರನ್ಸ್ ಇರಲಿಲ್ಲ. ಫಸ್ಟ್ ಮ್ಯಾಚಲ್ಲಿ 5 ರನ್ಸ್, ಎರಡನೇ ಮ್ಯಾಚಲ್ಲಿ ಗೋಲ್ಡನ್ ಡಕ್ ಆಗಿದ್ರು. ಆಮೇಲೆ ಇಂಗ್ಲೆಂಡ್ ವಿರುದ್ಧದ ಮೊದಲ ಮ್ಯಾಚಲ್ಲೂ ರನ್ಸ್ ಇರಲಿಲ್ಲ. ಸೋ ಅಲ್ಲಿಗೆ ಮೂರು ಪಂದ್ಯಗಳಲ್ಲಿ ಪರ್ಫಾಮೆನ್ಸ್ ಇಲ್ಲ ಅಂತಾ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೆ ಸಂಜುಗೆ ಬೆಂಚ್ ಕಾಯಿಸಿ ವೈಭವ್ ಸೂರ್ಯವಂಶಿಯನ್ನ ತಂದ್ರು. ವೈಭವ್ ತಮ್ಮ ಡೆಬ್ಯೂ ಮ್ಯಾಚಲ್ಲಿ 14, ಆಮೇಲೆ 13, ಮತ್ತೊಮ್ಮೆ 15 ರನ್ ಗಳಿಸಿ ಔಟ್ ಆದ್ರು. ಮೂರು ಪಂದ್ಯಗಳಲ್ಲಿ 42 ರನ್ಸ್ ಬರ್ತಿದ್ದಂತೆ ಕೊನೇ ಮ್ಯಾಚ್​ನಲ್ಲಿ ವೈಭವ್​ಗೆ ಅವಕಾಸವನ್ನೇ ಕೊಡ್ಲಿಲ್ಲ. ಪ್ಲೇಯಿಂಗ್ 11ನಿಂದ ಹೊರಗಿಟ್ಟು ಸಂಜುರನ್ನ ಮತ್ತೆ ಓಪನರ್ ಆಗಿ ಕರೆತಂದ್ರು. ಬೌಲಿಂಗ್ ನಲ್ಲೂ ಕೂಡ ಪಂದ್ಯದಿಂದ ಪಂದ್ಯಕ್ಕೆ ಈ ಬದಲಾವಣೆಗಳು ನಡೆದ್ವು. ಆದ್ರೆ ರನ್ಸ್ ಇಲ್ಲದ ಇಶಾನ್ ಕಿಶನ್ ಆಗ್ಲಿ ಅಥವಾ ತಿಲಕ್ ವರ್ಮಾನಾಗ್ಲಿ ಹೊರಗೆ ಇಡ್ಲಿಲ್ಲ. ಸೋ ಇಲ್ಲೇ ಗೊತ್ತಾಗುತ್ತೆ ಗಂಭೀರ್ ಕೆಲವರನ್ನ ಮಾತ್ರ ಟಾರ್ಗೆಟ್ ಮಾಡೋದು ಅನ್ನೋದು. ಗಂಭೀರ್ ರ ಇದೇ ನಿರ್ಧಾರಗಳೇ ಕೆಲ ಆಟಗಾರರ ಕಾನ್ಫಿಡೆನ್ಸ್​ನೇ ಕಿಲ್ ಮಾಡ್ತಿದ್ದಾರೆ ಅಂತಾ ಮಾಜಿ ಕ್ರಿಕೆಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಕ್ರಿಕೆಟ್ ನಲ್ಲಿ ಇಷ್ಟೊಂದು ಗೊಂದಲ ನೋಡಿಲ್ಲವೆಂದ ಕೈಫ್!

ಪ್ರಸ್ತುತ ಟೀಂ ಇಂಡಿಯಾದಲ್ಲಿ ನಡೆಯುತ್ತಿರೋ ಮ್ಯೂಸಿಕಲ್ ಚೇರ್ ಬಗ್ಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಮ್ಮ ಸಿಟ್ಟನ್ನ ಹೊರ ಹಾಕಿದ್ದಾರೆ. ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನೂ ಪ್ರಶ್ನಿಸಿದ್ದಾರೆ. ಇಷ್ಟು ಕನ್ಫ್ಯೂಸಿಂಗ್ ಇರೋ ಟೀಂ ಮ್ಯಾನೇಜ್​ಮೆಂಟ್​ನ ಈ ಹಿಂದೆ ನೋಡೇ ಇಲ್ಲ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಸೋಲುಗಳಿಂದ ಟೀಂ ಇಂಡಿಯಾ ಟಿ-20ಐ ರ್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನವನ್ನೇ ಕಳ್ಕೊಂಡಿದ್ದಾರೆ. 1,605 ದಿನಗಳ ಬಳಿಕ ನಂಬರ್ 1 ಪಟ್ಟದಿಂದ ಕುಸಿದಿದೆ. ಇದಕ್ಕೆಲ್ಲಾ ಕಾರಣ ಗಂಭೀರ್ ನಿರ್ಧಾರಗಳು. ಅದ್ರಲ್ಲೂ ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಅವರನ್ನ ಟ್ರೀಟ್ ಮಾಡ್ತಿರೋದು ಪ್ರೊಫೆಷನಲ್ ಆಗಿಲ್ಲ. ಒಬ್ಬರು ಪೀಳಿಗೆಯ ಪ್ರತಿಭೆ, ಇನ್ನೊಬ್ಬರು ವಿಶ್ವಕಪ್ ವಿಜೇತರು. ಪದೇಪದೆ ಅವ್ರನ್ನ ತಂಡದಿಂದ ಹೊರಗಿಟ್ರೆ ಅವ್ರ ಮನಸ್ಸಲ್ಲಿ ಅವ್ರ ಸ್ಥಾನದ ಬಗ್ಗೆ ಅನುಮಾನುಗಳು ಮೂಡುತ್ತೆ. ಆದ್ರೆ ಆತ್ಮವಿಶ್ವಾಸವನ್ನು ನೀಡಬೇಕಾಗಿದೆ ಎಂದು ಕೈಫ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ. ಈ ಮೂಲಕ ಗಂಭೀರ್ ಌಂಡ್ ಮ್ಯಾನೇಜ್​ಮೆಂಟ್ ನಿರ್ಧಾರಗಳನ್ನ ಪ್ರಶ್ನಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪ್ರೆಶರ್ ನೋಡಿ ಆಯ್ಕೆ ಮಾಡುತ್ತಿದ್ದಾರಾ?

ಇನ್ನು ಟೀಂ ಸೆಲೆಕ್ಷನ್ ಬಗ್ಗೆ ಆರ್.ಅಶ್ವಿನ್ ಕೂಡ ಪ್ರಶ್ನೆ ಮಾಡಿದ್ದು ಸೋಶಿಯಲ್ ಮೀಡಿಯಾ ಟ್ರೆಂಡ್ ಪ್ರೆಶರ್ ನೋಡಿ ಅವಕಾಶಗಳನ್ನ ನೀಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಗಳು ಹಾಗೂ ಹಾಗೇ ಒಂದಷ್ಟು ಮಾಜಿ ಕ್ರಿಕೆಟರ್ಸ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ 11ನಲ್ಲಿ ಆಡ್ಸಿ ಅಂತಾ ಡಿಮ್ಯಾಂಡ್ ಮಾಡಿದ್ರು. ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಬೇಗನೇ ಅವಕಾಶ ನೀಡಿದೆಯೇ ಎಂದಿದ್ದಾರೆ. ಹಾಗೇ ಟೀಂ ಇಂಡಿಯಾ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಮಾಡಬೇಕು. ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಮಾಡುವುದು ಸಾಧ್ಯವಿಲ್ಲ. ಆದರೆ ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಬೇಕು ಎಂದು ಆರ್ ಅಶ್ವಿನ್ ಹೇಳಿದ್ದಾರೆ.

Shantha Kumari

Leave a Reply

Your email address will not be published. Required fields are marked *