ಗಂಭೀರ್ ಅಹಂಕಾರಕ್ಕೆ ತಂಡ ಬಲಿ? – ಆಡದಿದ್ರೂ ಬೇಕಾದವ್ರಿಗೆ ಮಾತ್ರ ಚಾನ್ಸ್!
DO Or DIEನಲ್ಲಿ ಟೀಂ ಇಂಡಿಯಾ

ಗಂಭೀರ್ ಅಹಂಕಾರಕ್ಕೆ ತಂಡ ಬಲಿ? – ಆಡದಿದ್ರೂ ಬೇಕಾದವ್ರಿಗೆ ಮಾತ್ರ ಚಾನ್ಸ್!DO Or DIEನಲ್ಲಿ ಟೀಂ ಇಂಡಿಯಾ

ಆಂಗ್ಲರ ನಾಡಿನಲ್ಲಿ ಐತಿಹಾಸಿಕ ಸೋಲು ಕಂಡಿರೋ ಭಾರತ ಈಗ ಸರಣಿ ಗೆಲ್ಲೋದು ಕನಸಿನ ಮಾತು. ಅಟ್​ಲೀಸ್ಟ್ ಸಮಬಲ ಮಾಡಿಕೊಂಡು ಮರ್ಯಾದೆ ಉಳಿಸಿಕೊಳ್ಬೇಕು ಅಂದ್ರೆ ನಾಳಿನ ಮ್ಯಾಚ್ ಮಸ್ಟ್ &  ಶುಡ್ ಗೆಲ್ಲಲೇಬೇಕು.

ಇದನ್ನೂ ಓದಿ : ಇವರೇನಾ ವಿಶ್ವ ಚಾಂಪಿಯನ್ಸ್? – ಟೀಂ ಇಂಡಿಯಾಗೆ ಕಪ್ಪು ಚುಕ್ಕೆ

ಭಾರತ- ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯ ಫಸ್ಟ್ ಮ್ಯಾಚ್ ವಾಶ್ ಔಟ್ ಆಗಿತ್ತು. ನಂತ್ರ ಎರಡು ಮತ್ತು ಮೂರನೇ ಮ್ಯಾಚಲ್ಲಿ ಇಂಗ್ಲೆಂಡ್ ಗೆದ್ದಿದೆ. ಉಳಿದಿದ್ದೇ 2 ಪಂದ್ಯ. ಈ ಪೈಕಿ ಇಂಗ್ಲೆಂಡ್​ಗೆ ಇನ್ನೊಂದು ವಿನ್ ಸಿಕ್ರೂ ಸರಣಿ ಅವ್ರ ಪಾಲಾಗುತ್ತೆ. ಬಟ್ ಭಾರತಕ್ಕೆ ಗೆಲ್ಲೋ ಚಾನ್ಸ್ ಅಂತೂ ಇಲ್ಲ. ಮುಂದಿನ ಎರಡೂ ಪಂದ್ಯ ಗೆದ್ರಷ್ಟೇ ಸರಣಿ ಸಮಬಲ ಮಾಡಿಕೊಳ್ಬೋದು. ಆದ್ರೆ ತಂಡದಲ್ಲಿ ಆಗ್ತಿರೋ ಬೆಳವಣಿಗೆಗಳನ್ನ ನೋಡಿದ್ರೆ ಬಲಿಷ್ಠ ಭಾರತ ಡಮ್ಮಿ ಆಗುತ್ತೇನೋ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಅವ್ರ ಏಕಪಕ್ಷೀಯ ನಿರ್ಧಾರಗಳು.

ಟೆಸ್ಟ್, ಏಕದಿನ ಬಳಿಕ ಟಿ-20ಐನೂ ಹಳ್ಳ ಹಿಡಿಸ್ತಾರಾ ಗೌತಮ್ ಗಂಭೀರ್?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಟೈಮಲ್ಲಿ ಭಾರತ ಮೂರೂ ಫಾರ್ಮೆಟ್​ನಲ್ಲೂ ಪೀಕ್​ನಲ್ಲಿತ್ತು. ಟೆಸ್ಟ್ ರ್ಯಾಂಕಿಂಗ್​ನಲ್ಲಿ ಟಾಪ್-2ನಲ್ಲಿದ್ದು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​ನ ಟಫ್ ಫೈಟರ್ ಆಗಿದ್ರು. ಆದ್ರೆ ಗಂಭೀರ್ ಕೋಚ್ ಆಗಿ ಬಂದ್ಮೇಲೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು, ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲೇ ಕ್ಲೀನ್ ಸ್ವೀಪ್​ನಿಂದ ಫೈನಲ್ ರೇಸ್ ಟಿಕೆಟ್ ಕೂಡ ಮಿಸ್ ಆಗಿತ್ತು. ಆ ನಂತ್ರದಲ್ಲಂತೂ ಟೆಸ್ಟ್ ಮಾದರಿಯಲ್ಲಿ ಭಾರತ ಚೇತರಿಸಿಕೊಳ್ಳೋಕೂ ಆಗಿಲ್ಲ. ಹಾಗೇ ಏಕದಿನ ಮಾದರಿಯಲ್ಲೂ ಶ್ರೀಲಂಕಾ, ನ್ಯೂಜಿಲೆಂಡ್ ಹೀಗೆ ಹಲವು ಐತಿಹಾಸಿಕ ಸೋಲುಗಳನ್ನ ಕಂಡಿದೆ. ಆದ್ರೆ ಟಿ-20ಐ ಮಾತ್ರ ಯಾವತ್ತೂ ದಿ ಬೆಸ್ಟ್ ಅನ್ನೋ ಥರನೇ ಇತ್ತು. ಆದ್ರೆ 2026ರ ಟಿ-20 ವಿಶ್ವಕಪ್ ಮುಗುದ್ಮೇಲೆ ಈ ತಂಡವೂ ಹಳ್ಳ ಹಿಡಿಯೋಕೆ ಸ್ಟಾರ್ಟ್ ಆಗಿದೆ. ಐದು ಪಂದ್ಯಗಳು ಮುಗಿದ್ರೂ ಒಂದ್ರಲ್ಲೂ ಗೆಲ್ಲೋಕೆ ಆಗಿಲ್ಲ.

ಗಂಭೀರ್ ಆಡಿದ್ದೇ ಆಟ!

ತಂಡದ ಆಯ್ಕೆಯಲ್ಲಿ ದೊಡ್ಡ ಎಡವಟ್ಟು ಮಾಡುತ್ತಿರೋ ಗಂಭೀರ್

ಪ್ರತಿಭಾವಂತರಿಗೆ ಅವಕಾಶ ನೀಡದೇ ಬೇಕಾದವ್ರಿಗೆ ಪದೇಪದೆ ಚಾನ್ಸ್

ಲೆಫ್ಟ್, ರೈಟ್ ಹ್ಯಾಂಡ್ ಬ್ಯಾಟಿಂಗ್ ಕಾಂಬಿನೇಷನ್ ತೆಗೆದಿರುವ ಕೋಚ್

ತಿಲಕ್ ರನ್ನು ಆಡಿಸಲೇಬೇಕು ಅಂತಾ ಅಕ್ಷರ್ ಬದಲು ವೈಸ್ ಕ್ಯಾಪ್ಟನ್ಸಿ

ವಿಶ್ವಕಪ್ ಹೀರೋ ಸಂಜು ಡ್ರಾಪ್ ಮಾಡಿ ತಿಲಕ್ ಗೆ ಬ್ಯಾಟಿಂಗ್ ಸ್ಲಾಟ್

2026ರಲ್ಲಿ ಕಂಪ್ಲೀಟ್ ಆಗಿ ಫೇಲ್ಯೂರ್ ಆಗಿರುವ ತಿಲಕ್ ರ್ಮಾ

ಇಲ್ಲಿ ತಂಡದ ಸೋಲು ಅಂತಾ ಬಂದಾಗ ಗೌತಮ್ ಗಂಭೀರ್ ಅವ್ರ ಪಾತ್ರ ಕೂಡ ಇದೆ. ಹಾಗಂತ ಭಾರತದ ಸೋಲಿಗೆ ಯಾರು ಕಾರಣ ಆಗ್ತಿದ್ದಾರೆ.. ಯಾವ ನಿರ್ಧಾರಗಳು ಕೈಕೊಡ್ತಿವೆ, ಎಲ್ಲಿ ಮಿಸ್ಟೇಕ್ಸ್ ಆಗ್ತಿದೆ ಅನ್ನೋದನ್ನ ಹೇಳೋಕೆ ರಾಕೆಟ್ ಸೈನ್ಸ್ ಏನೂ ಬೇಕಾಗಿಲ್ಲ. ಮ್ಯಾಚಸ್ ನೋಡ್ತಾ ರೆಗ್ಯುಲರ್ ಡವಲಪ್​ಮೆಂಟ್ಸ್ ಅಬ್ಸರ್ವ್ ಮಾಡುವ ನಮ್ಮಂತ ನಿಮ್ಮಂಥ ಅಭಿಮಾನಿಗಳಿಗೂ ಕೂಡ ಎಲ್ಲೆಲ್ಲಿ ಮಿಸ್ಟೇಕ್ಸ್ ಆಗ್ತಿದೆ ಅನ್ನೋದು ಗೊತ್ತಾಗಿ ಬಿಡುತ್ತೆ. ಹೀಗಿದ್ರೂ ತಂಡದಲ್ಲಿ ಯಾವ ಬದಲಾವಣೆಗಳನ್ನೂ ಮಾಡ್ತಿಲ್ಲ. ಬ್ಯಾಟಿಂಗ್ ಆರ್ಡರ್ ಬದಲಾಗೋದು ಕೂಡ ತಪ್ಪಿಲ್ಲ. ಒಟ್ನಲ್ಲಿ ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಭಾರತ ಸಾಕಷ್ಟು ಹೀನಾಯ ಸೋಲುಗಳನ್ನ ಕಂಡಿದೆ. ಈಗಲೂ ಸೋಲುತ್ತಿದೆ ಅಷ್ಟೇ. ಮುಂದೆ ಐಸಿಯು ಸೇರಿದ್ರೂ ಅಚ್ಚರಿ ಪಡ್ಬೇಕಿಲ್ಲ.

Shantha Kumari

Leave a Reply

Your email address will not be published. Required fields are marked *