KLಗೆ ಚಾನ್ಸ್ ಕೊಡಿಸಿದ್ದೇ ಗಂಭೀರ್ – ಪಂತ್ ಗಾಗಿ ಹಠಕ್ಕೆ ಬಿದ್ರಾ ರೋಹಿತ್?
ನಂಬಿಕೆ ಉಳಿಸಿಕೊಳ್ತಾರಾ ರಾಹುಲ್?

KLಗೆ ಚಾನ್ಸ್ ಕೊಡಿಸಿದ್ದೇ ಗಂಭೀರ್ – ಪಂತ್ ಗಾಗಿ ಹಠಕ್ಕೆ ಬಿದ್ರಾ ರೋಹಿತ್?ನಂಬಿಕೆ ಉಳಿಸಿಕೊಳ್ತಾರಾ ರಾಹುಲ್?

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಸರಣಿ ಆರಂಭಕ್ಕೂ ಮುನ್ನ ಪ್ಲೇಯಿಂಗ್ 11 ಬಗ್ಗೆ ಸಾಕಷ್ಟು ಡಿಸ್ಕಷನ್ಸ್ ಆಗ್ತಿತ್ತು. ಅಂತಿಮವಾಗಿ ಯಾರನ್ನೆಲ್ಲಾ ಕಣಕ್ಕಿಳಿಸಬೇಕು ಅಂತಾ ಬಿಸಿಸಿಐನಲ್ಲಿ ಚರ್ಚೆ ನಡೀತಿತ್ತು. ಅದ್ರಲ್ಲೂ ವಿಕೆಟ್ ಕೀಪರ್ ಕೋಟಾದಲ್ಲಿ ತಂಡಕ್ಕೆ ಸೆಲೆಕ್ಟ್ ಆಗಿರೋ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ನಡುವೆಯೇ ಹೆಚ್ಚಿನ ರೇಸ್ ಇತ್ತು. ಬಟ್ ಫೈನಲ್ಲಾಗಿ ಕೆಎಲ್ ರಾಹುಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದ್ರು. ಆದ್ರೆ ಕೆಎಲ್ ಗೆ ಅಷ್ಟು ಸುಲಭಕ್ಕೆ ಚಾನ್ಸ್ ಸಿಕ್ಕಿಲ್ಲ. ಕೆಎಲ್ ಪರ ಗಟ್ಟಿಯಾಗಿ ನಿಂತು ಗೌತಮ್ ಗಂಭೀರ್ ಚಾನ್ಸ್ ಕೊಡಿಸಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ರಿಷಭ್ ಪಂತ್​ಗಾಗಿ ಹಠಕ್ಕೆ ಬಿದ್ರೂ ಅದನ್ನೆಲ್ಲಾ ಕೇರೇ ಮಾಡದೇ ರಾಹುಲ್​ರನ್ನ ಕಣಕ್ಕಿಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಆದ್ರೆ ಕೋಚ್ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ರಾಹುಲ್ ಎಡವಿದ್ರಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ : ಡಿಸಿಎಂ ಡಿಕೆಶಿ ನಿವಾಸಕ್ಕೆ ಕಿಚ್ಚ ಸುದೀಪ್‌ ಧಿಡೀರ್‌ ಭೇಟಿ – ಕಾರಣ ಏನು?  

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದಾಗಿನಿಂದ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಅವ್ರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಪದೇಪದೆ ಸಾಬೀತಾಗ್ತಾನೇ ಇದೆ. ಅದ್ರಲ್ಲೂ ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಸೋತ ಮೇಲೆ ಮತ್ತಷ್ಟು ಜಾಸ್ತಿಯಾಗಿದೆ. ಇದೀಗ ಇಂಡೋ-ಇಂಗ್ಲೆಂಡ್​ ಸರಣಿಯಲ್ಲೂ ಕಂಟಿನ್ಯೂ ಆಗ್ತಿದೆ. ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ರಿಷಭ್​​ ಪಂತ್ ವರ್ಸಸ್ ಕೆ.ಎಲ್.ರಾಹುಲ್ ಶುರುವಾಗಿತ್ತು.​. ಇಬ್ಬರಲ್ಲಿ ಯಾರನ್ನ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಬೇಕು ಅನ್ನೋ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ಗಂಭೀರ್​ ನಡುವೆ ಜಟಾಪಟಿಯೇ ನಡೆದಿತ್ತು. ಈ ಸೆಲೆಕ್ಷನ್​​​ ಜಟಾಪಟಿಯಲ್ಲಿ ಕೊನೆಗೆ ಗೆದ್ದಿದ್ದು ಗೌತಮ್ ಗಂಭೀರ್​.

ನಾಗ್ಪುರದಲ್ಲಿ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ರಿಷಭ್​ ಪಂತ್​ ಟೀಮ್​ ಇಂಡಿಯಾ ಫಸ್ಟ್​ ಚಾಯ್ಸ್​ ವಿಕೆಟ್​ ಕೀಪರ್​ ಅನಿಸಿದ್ರು. ಕೆ.ಎಲ್​ ರಾಹುಲ್​​ ತಂಡದಲ್ಲಿ ಇದ್ರೂ ಕೀಪರ್​ ಜವಾಬ್ದಾರಿ ಪಂತ್​ಗೆ ನೀಡಲಾಗುತ್ತೆ ಎನ್ನೋ ನಿರೀಕ್ಷೆ ಇತ್ತು. ಆದ್ರೆ ಅಂತಿಮವಾಗಿ ಪಂತ್​ ಪ್ಲೇಯಿಂಗ್​​ ಇಲೆವೆನ್​ನಿಂದಲೇ ಹೊರಬಿದ್ರು. ರಾಹುಲ್​ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸ್ಲಾಟ್​ನಲ್ಲಿ ಕಣಕ್ಕಿಳಿದ್ರು. ಈ ನಿರ್ಧಾರದ ಹಿಂದಿನ ಸೂತ್ರಧಾರಿ ಹೆಡ್ ಕೋಚ್ ಗೌತಮ್ ಗಂಭೀರ್​​​​​​​​​​​.. ಹೆಡ್ ಕೋಚ್ ಗೌತಮ್ ಗಂಭೀರ್, ಕೆ.ಎಲ್.ರಾಹುಲ್​ ಪರವಾಗಿ ನಿಂತರೆ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಪರವಾಗಿ ವಾದ ಮಾಡಿದ್ರು. ಟಿ20 ಮತ್ತು ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಂತ್​ರನ್ನೇ ಏಕದಿನದಲ್ಲೂ ಆಡಿಸ್ಬೇಕು ಅನ್ನೋದು ರೋಹಿತ್ ಲೆಕ್ಕಾಚಾರವಾಗಿತ್ತು.  ಆದರೆ ಕಳೆದ ಏಕದಿನ ವಿಶ್ವಕಪ್​ ವೇಳೆ ಪಂತ್​ ಅಲಭ್ಯತೆಯಲ್ಲಿ ಮಿಂಚಿದ್ದ ರಾಹುಲ್​ರೇ ಇಲ್ಲೂ ಆಡ್ಬೇಕು ಅನ್ನೋದು ಗಂಭೀರ್ ಅವ್ರ ಹಠವಾಗಿತ್ತು. ಕೊನೆಗೆ ಸೆಲೆಕ್ಷನ್​ ಫೈಟ್​​ನಲ್ಲಿ ಗಂಭಿರ್ ಅವ್ರೇ ಗೆದ್ದಿದ್ದಾರೆ.

ಟೀಂ ಇಂಡಿಯಾದಲ್ಲಿ ಮೊದ್ಲಿಂದಲೂ ಕೆಎಲ್ ರಾಹುಲ್ ಕೆರಿಯರ್ ಹಾವು ಏಣಿಯಂತೆಯೇ ಇದೆ. ಸ್ಲಾಟ್​ಗಳಲ್ಲೂ ಕೂಡ ವೇರಿಯೇಷನ್ಸ್ ಆಗ್ತಿರುತ್ತೆ. ಆದ್ರೂ ಏಕದಿನ ಫಾರ್ಮೆಟ್ ಅಂತಾ ಬಂದಾಗ ರಾಹುಲ್ ಬಿಸಿಸಿಐನ ಫಸ್ಟ್ ಚಾನ್ಸ್ ಆಗಿದ್ದಾರೆ. ಈ ಹಿಂದಿನ ಶ್ರೀಲಂಕಾ ಎದುರಿನ ಸರಣಿ ವೇಳೆಯೂ ಪಂತ್​ನ ಬೆಂಚ್​ಗೆ ಸೀಮಿತ ಮಾಡಿ ಮೊದಲ 2 ಪಂದ್ಯಗಳಲ್ಲಿ ರಾಹುಲ್​ ಹೆಗಲಿಗೆ ಕೀಪಿಂಗ್​ ಜವಾಬ್ದಾರಿ ನೀಡಲಾಗಿತ್ತು. ಆದ್ರೆ ಎರಡು ಪಂದ್ಯಗಳಲ್ಲಿ ಆಡ್ಲಿಲ್ಲ ಅಂತಾ ಕೊನೇ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ರು. ಪಂತ್​ ಆಬ್ಸೆನ್ಸ್​ನಲ್ಲಿ ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್​ಗೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ವಿಕೆಟ್ ಕೀಪರ್ ಹೊಣೆಗಾರಿಕೆಯನ್ನ ನೀಡಬಹುದು. ಆದ್ರೆ ಆ ನಂಬಿಕೆಯನ್ನ ಕೆಎಲ್ ರಾಹುಲ್ ಉಳಿಸಿಕೊಳ್ಬೇಕು. ಅವಕಾಶ ಸಿಕ್ಕಾಗ ಆಡ್ಬೇಕಿದೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಅದನ್ನ ಉಳಿಸಿಕೊಂಡಿಲ್ಲ. ಜಸ್ಟ್ 2 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಹಾಗಂತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಥರ ಆಡಿಲ್ಲ ಅಂದ್ರೂ ಬಿಸಿಸಿಐ ರಾಹುಲ್​ರನ್ನ ಸೆಲೆಕ್ಟ್ ಮಾಡ್ತಾನೇ ಕೂರಲ್ಲ. ಬೆಂಚ್ ಕಾಯಿಸೋಕೆ ಕಳಿಸ್ತಾರೆ. ಸೋ ಸಿಕ್ಕಿರೋ ಅವಕಾಶ ಮತ್ತು ಕೋಚ್ ತನ್ನ ಮೇಲಿಟ್ಟಿರೋ ನಂಬಿಕೆಯನ್ನ ರಾಹುಲ್ ಉಳಿಸಿಕೊಳ್ಳಲೇಬೇಕು. ಇಲ್ಲದಿದ್ರೆ ಮುಂಬೈಕರ್​ಗಳ ಲಾಬಿ ನಡುವೆ ತಂಡದಿಂದ ಮೆಲ್ಲನೆ ತೆರೆಮರೆಗೆ ಸರಿದ್ರೂ ಅಚ್ಚರಿ ಪಡ್ಬೇಕಿಲ್ಲ.

Shantha Kumari

Leave a Reply

Your email address will not be published. Required fields are marked *