ಗಂಭೀರ್ ಕ್ಲೀನ್ ಸ್ವೀಪ್ ಸ್ಪೆಷಲಿಸ್ಟ್ – ಪ್ರಯೋಗವೋ? ಹುಚ್ಚಾಟವೋ?
ಗೌತಿಗೆ ಮೂಗುದಾರ ಹಾಕೋದ್ಯಾರು?

ಒಂದ್ಕಡೆ ಟೆಂಬಾ ಬವುಮಾ ಪಡೆ ಚರಿತ್ರೆ.. ಮತ್ತೊಂದ್ಕಡೆ ಟೀಂ ಇಂಡಿಯಾ ಹೀನಾಯ ಸೋಲು.. ಎರಡನೇ ಟೆಸ್ಟ್ ಪಂದ್ಯವನ್ನೂ ಸೌತ್ ಆಫ್ರಿಕಾ ಗೆದ್ದು ಭಾರತವನ್ನ ಕ್ಲೀನ್ ಸ್ವೀಪ್ ಮಾಡಿದೆ. ಅದೂ ಕೂಡ ಭಾರತದಲ್ಲೇ. 1999ರ ಬಳಿಕ ಸೌತ್ ಆಫ್ರಿಕಾ ಒಮ್ಮೆಯೂ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದೇ ಇರಲಿಲ್ಲ. ಈ ಬಾರಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಇತಿಹಾಸ ನಿರ್ಮಿಸಿದ್ದಾರೆ. ಈ ಸೋಲಿಗೆ ಭಾರತದ ಆಟಗಾರರು ಹೇಗೆ ಕಾರಣವೋ ಹೆಡ್ಕೋಚ್ ಗೌತಮ್ ಗಂಭೀರ್ ಕೂಡ ನೇರ ಹೊಣೆ. ಇಲ್ಲದೇ ಇರೋ ಎಕ್ಸ್ಪೆರಿಮೆಂಟ್ ಮಾಡಿ ಮಾಡಿ ಟೀಂ ಇಂಡಿಯಾಗೆ ಒಂದು ಗತಿ ಕಾಣಿಸಿಬಿಟ್ರು.
ಇದನ್ನೂ ಓದಿ : ಫೆ.15ಕ್ಕೆ ಇಂಡೋ-ಪಾಕ್ ವಾರ್ – T-20 ವಿಶ್ವಕಪ್ ಫೈಟ್ ಗೆ ಮುಹೂರ್ತ
ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೆಂಬಾ ಬವುಮಾ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ 30 ರನ್ಗಳ ಜಯ ಸಾಧಿಸಿತ್ತು. ಇದೀಗ ಗುವಾಹಟಿಯಲ್ಲಿ 408 ರನ್ಗಳಿಂದ ಮ್ಯಾಚ್ ಗೆದ್ದಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ನೀಡಿದ್ದ 549 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಭಾರತ 140 ರನ್ಗಳಿಗೆ ಆಲೌಟ್ ಆಯ್ತು. 93 ವರ್ಷಗಳ ಬಳಿಕ ಭಾರತ ತವರಿನಲ್ಲಿ ಅತೀ ದೊಡ್ಡ ಟಾರ್ಗೆಟ್ ಪಡೆದಿದ್ದು ಈಗ ಕೆಟ್ಟ ದಾಖಲೆಯಾಗಿದೆ. ಇದನ್ನೆಲ್ಲಾ ನೋಡ್ತಿದ್ರೆ ಕಳೆದೊಂದು ವರ್ಷದಿಂದ ಗಂಭೀರ್ ಟೆಸ್ಟ್ ಕ್ರಿಕೆಟ್ನಲ್ಲಿ ಸಾಧಿಸಿದ್ದಕ್ಕಿಂತ ಕಳೆದಿದ್ದೇ ಜಾಸ್ತಿ ಇದೆ. ಇದಕ್ಕೆಲ್ಲಾ ಕಾರಣ ಅವ್ರು ಅಪ್ಲೈ ಮಾಡ್ತಿರೋ ಬೇಕಾಬಿಟ್ಟಿ ಪ್ರಯೋಗಗಳು. ಅದ್ರಲ್ಲೂ ನೈಟ್ವಾಚ್ ಮನ್ ಎಕ್ಸ್ಪೆರಿಮೆಂಟ್ ಅಗತ್ಯನೇ ಇರ್ಲಿಲ್ಲ.
ನೈಟ್ ವಾಚ್ ಮನ್ ಪದ್ಧತಿ ಮತ್ತೆ ತಂದ ಗಂಭೀರ್!
ಗೌತಮ್ ಗಂಭೀರ್ಗೆ ಮೇನ್ ಸಮಸ್ಯೆ ಆಗ್ತಿರೋದೇ ಅವ್ರು ಮಾರ್ಡ್ರೆನ್ ಕ್ರಿಕೆಟ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರೋದು. ತಾವು ಆಟಗಾರನಾಗಿ ಆಡ್ತಿದ್ದ ಕಾಲದ ಪ್ರಯೋಗಗಳನ್ನೇ ಈಗ್ಲೂ ಅಪ್ಲೈ ಮಾಡ್ತಿದ್ದಾರೆ. ಸೌಥ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಕುಲ್ದೀಪ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರ್ತಾರೆ. ಇದ್ರ ಉದ್ದೇಶ ಕುಲ್ದೀಪ್ ಬಿಗ್ ಸ್ಕೋರ್ ಮಾಡ್ಲಿ ಅಂತಲ್ಲ. ಟಾಪ್ ಆರ್ಡರ್ ಬ್ಯಾಟರ್ ವಿಕೆಟ್ ಬೀಳಬಾರದು ಅನ್ನೋಕಾರಣಕ್ಕೆ. ಅಂದ್ರೆ ದಿನದ ಮುಕ್ತಾಯದ ವೇಳೆಗೆ ಕುಲ್ದೀಪ್ ವಿಕೆಟ್ ಉಳಿಸ್ಕೊಂಡು ಮರುದಿನ ಬೆಳಗ್ಗೆ ಬ್ಯಾಟಿಂಗ್ ಮಾಡ್ಬೇಕು. ರನ್ಸ್ ಬಂದಿಲ್ಲ ಅಂದ್ರೂ ಆರಂಭದಲ್ಲೇ ಮೇನ್ ವಿಕೆಟ್ ಬೀಳದಂತೆ ತಡೆಯೋದು ನೈಟ್ ವಾಚ್‌ಮ್ಯಾನ್ ಉದ್ದೇಶ. ಲಾಸ್ಟ್ ಇಂಗ್ಲೆಂಡ್ ಸಿರೀಸ್ನಲ್ಲೂ ಕೊನೇ ಮ್ಯಾಚಲ್ಲಿ ಇದೇ ಪ್ರಯೋಗ ನಡೆದಿತ್ತಯ. ಆಕಾಶ್ ದೀಪ್ ನೈಟ್ ವಾಚ್‌ಮ್ಯಾನ್ ಆಗಿ ನಾಲ್ಕನೇ ಸ್ಲಾಟ್ನಲ್ಲಿ ಕಣಕ್ಕಿಳಿದಿದ್ರು. ಹಾಗೇ 66 ರನ್ ಕೂಡ ಬಾರಿಸಿದ್ರು.
ಮಾರ್ಡ್ರೆನ್ ಕ್ರಿಕೆಟ್ ನಲ್ಲಿ ಹಳೇ ಪ್ರಯೋಗ ಬೇಕಿಲ್ಲ!
1990 ಕಾಲಘಟ್ಟದ ಕ್ರಿಕೆಟ್ನಲ್ಲಿ ಇದ್ದ ಈ ನೈಟ್ವಾಚ್ಮ್ಯಾನ್ ಕಾನ್ಸೆಪ್ಟ್ಗೂ ಈಗ್ಗೂ ಅಜಗಜಾಂತರ ವ್ಯತ್ಯಾಸ ಇದೆ. ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ಟನ್ ಆಗಿದ್ದಾಗ ಈ ಯಾವ ಕಾನ್ಸೆಪ್ಟೂ ಇರ್ಲೇ ಇಲ್ಲ. ಒನ್ ಮ್ಯಾನ್ ಶೋ ಥರ ನಿಂತು ಪಂದ್ಯಗಳನ್ನ ಗೆಲ್ಲಿಸೋ ತಾಕತ್ತು ಅವ್ರಲ್ಲಿತ್ತು. ಅಲ್ದೇ ಈಗಿನ ಕ್ರಿಕೆಟ್ಗೆ ಈ ನೈಟ್ವಾಚ್ಮ್ಯಾನ್ ಅಗತ್ಯ ಇಲ್ಲ. ಸೋ ಮೊದ್ಲಿಗೆ ಏನಿದು ಕಾನ್ಸೆಪ್ಟ್ ಅನ್ನೋದನ್ನ ಹೇಳಿಬಿಡ್ತೇನೆ. ನೈಟ್-ವಾಚ್‌ಮ್ಯಾನ್ ಅಂದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ ದಿನದ ಆಟ ಮುಗಿಯುವ ಕೊನೆಯಲ್ಲಿ ಬೌಲರ್ ಅಥವಾ ಲೋ ಆರ್ಡರ್ ಬ್ಯಾಟ್ಸ್‌ಮನ್‌ನ ಬ್ಯಾಟಿಂಗ್ಗೆ ಕಳಿಸೋದು. ಇದ್ರ ಮುಖ್ಯ ಉದ್ದೇಶ ಅಂದ್ರೆ ಉತ್ತಮ ಬ್ಯಾಟ್ಸ್‌ಮನ್‌ನ ವಿಕೆಟ್ ರಕ್ಷಿಸುವುದು ಮತ್ತು ದಿನದ ಕೊನೆಯ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳುವುದು. ಹೀಗೆ ಮಾಡೋದ್ರಿಂದ ಮರುದಿನ ಆಟದ ಆರಂಭದಲ್ಲಿ ಅಗ್ರೆಸ್ಸಿವ್ ಮೋಡ್ನಲ್ಲಿರೋ ಬೌಲರ್ಗಳಿಂದ ಟಾಪ್ ಆರ್ಡರ್ ಬ್ಯಾಟರ್ನ ರಕ್ಷಿಸೋದು.
ನೈಟ್ ವಾಚ್‌ಮ್ಯಾನ್ ಜವಾಬ್ದಾರಿ!
ದಿನದ ಕೊನೆಯಲ್ಲಿ ಬೆಳಕು ಕಡಿಮೆ, ಬೌಲರ್ ಗಳು ಸ್ಟ್ರಾಂಗ್
ವಿಕೆಟ್ ಬೀಳೋದನ್ನ ತಪ್ಪಿಸಲು ಕ್ರೀಸ್ ನಲ್ಲಿ ಡಿಫೆನ್ಸಿವ್ ಬ್ಯಾಟಿಂಗ್
ಮರುದಿನ ಬೆಳಗ್ಗೆ ಉತ್ತಮ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ಸ್ ಗೆ ಅವಕಾಶ
ನೈಟ್-ವಾಚ್‌ಮ್ಯಾನ್‌ನ ಮುಖ್ಯ ಕೆಲಸ ವಿಕೆಟ್ ಕಳೆದುಕೊಳ್ಳದೆ ಇರುವುದು
ಸಮ್ ಟೈಮ್ಸ್ ಈ ಫಾರ್ಮುಲಾ ವರ್ಕೌಟ್ ಆಗುತ್ತೆ. ನೈಟ್ವಾಚ್ಮನ್ ಆಗಿ ಬಂದವ್ರೇ ಶತಕ ಸಿಡಿಸಿದ ನಿದರ್ಶನಗಳೂ ಇವೆ. ಆದ್ರೆ ಈಗ ಈ ಟೆಕ್ನಿಕ್ ವರ್ಕ್ ಆಗ್ತಿಲ್ಲ. ಯಾಕಂದ್ರೆ ಮೊದ್ಲೆಲ್ಲಾ ಪಂದ್ಯಗಳು ತೀರಾ ಸ್ಲೋ ಆಗಿ ಆಡ್ತಿದ್ರು. ಐದು ದಿನ ಕಳೆದ್ರೂ ರಿಸಲ್ಟ್ ಬರ್ತಾ ಇರ್ಲಿಲ್ಲ. ಌಂಡ್ ಬಹುತೇಕ ಪಂದ್ಯಗಳು ಡ್ರಾನಲ್ಲಿ ಕೊನೆಯಾಗ್ತಿದ್ವು. ಆದ್ರೆ ಇತ್ತೀಚಿನ ದಿನಗಳಲ್ಲಿ ಬಾಜ್ ಬಾಲ್ ಕ್ರಿಕೆಟ್ಗೆ ಆಟಗಾರರು ಅಡಿಕ್ಟ್ ಆಗ್ತಿದ್ದು ಎರಡು ದಿನಗಳಲ್ಲೇ ಪಂದ್ಯ ಮುಗೀತಿವೆ. ಇತ್ತೀಚೆಗೆ ಌಷಸ್ ಸರಣಿಯ ಮೊದಲ ಪಂದ್ಯ ಒಂದೂಮುಕ್ಕಾಲು ದಿನದಲ್ಲೇ ಮುಗ್ದಿತ್ತು. ಌಂಡ್ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಪಂದ್ಯ ಎರಡೂವರೆ ದಿನದಲ್ಲೇ ಮುಗ್ದಿತ್ತು. ಹಾಗೇ ಡ್ರಾ ಸಾಧ್ಯತೆ ತೀರಾ ಕಡಿಮೆ ಆಗ್ತಿದೆ. ಈ ವರ್ಷ ಭಾರತ 10 ಟೆಸ್ಟ್ ಪಂದ್ಯಗಳನ್ನ ಆಡಿದೆ. ಇದ್ರಲ್ಲಿ ಒಂದು ಮ್ಯಾಚ್ ಅಷ್ಟೇ ಡ್ರಾ ಆಗಿದೆ. ಉಳಿದ 9 ಪಂದ್ಯಗಳ ರಿಸಲ್ಟ್ ಬಂದಿದೆ. ಸೋ ಅಲ್ಲಿಗೆ ಇತ್ತೀಚಿನ ವರ್ಷಗಳಲ್ಲಿ ಪಂದ್ಯಗಳು ಡ್ರಾ ಆಗೋದು ಅಪರೂಪ ಆಗಿದೆ. ರಿಸಲ್ಟ್ ಬಂದೇ ಬರುತ್ತೆ. ಹೀಗಾಗಿ ತಂಡದಲ್ಲಿ ನೈಟ್ ವಾಚ್ಮನ್ ಅವಶ್ಯಕತೆ ಬರೋದಿಲ್ಲ. ಆದ್ರೆ ಗಂಭೀರ್ ಮಾತ್ರ ಓಬಿರಾಯನ ಕಾಲದ ಮನಸ್ಥಿತಿಯಿಂದ ಹೊರ ಬರ್ತಿಲ್ಲ. ಇದೇ ಈಗ ತಂಡಕ್ಕೆ ಎಫೆಕ್ಟ್ ಆಗ್ತಿದೆ. ಇದನ್ನೆಲ್ಲಾ ನೋಡಿದ್ರೆ ಗೌತಮ್ ಗಂಭೀರ್ ಮಾಡ್ತಿರೋದು ಪ್ರಯೋಗನಾ ಅಥವಾ ಹುಚ್ಚಾಟನಾ ಅನ್ನೋ ಪ್ರಶ್ನೆ ಮೂಡುತ್ತೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಈಗ ಸೌತ್ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್. ಇನ್ನಾದ್ರೂ ಎಚ್ಚೆತ್ತುಕೊಳ್ಬೇಕಿದೆ. ಆದ್ರೆ ಗೌತಮ್ ಗಂಭೀರ್ಗೆ ಮೂಗುದಾರ ಹಾಕೋರು ಯಾರು ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ.

ನೋಡಿರಿ

