‘ಪಾರು’ ಪ್ರೀತು ಜೊತೆ  ಅದಿತಿ ‘ಗಟ್ಟಿಮೇಳ’- ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?

‘ಪಾರು’ ಪ್ರೀತು ಜೊತೆ  ಅದಿತಿ ‘ಗಟ್ಟಿಮೇಳ’- ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ರು ಗೊತ್ತಾ?

ಕನ್ನಡ ಕಿರುತೆರೆ ಮೂಲಕ ಫೇಮಸ್ ಆದ ನಟಿ  ಪ್ರಿಯಾ ಜೆ ಆಚಾರ್ ಹಾಗೂ ನಟ ಸಿದ್ದು ಮೂಲಿಮನಿ ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಮಗನ ಮುಂದೆಯೇ ಹಾರ್ದಿಕ್ ಪಾಂಡ್ಯ ಮರುಮದುವೆ – ‘ಸೆಕೆಂಡ್ ಇನ್ನಿಂಗ್ಸ್’ ಸೀಕ್ರೆಟ್ ಏನು..!?

ಕಳೆದ ಎರಡ್ಮೂರು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಕಳೆದ ನವೆಂಬರ್‌ನಲ್ಲಿ ಮನೆಯವರ ಒಪ್ಪಿಗೆ ಪಡೆದುಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಫೆ.12ರಂದು ಮದುವೆ ಆಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

ಗುರುಹಿರಿಯರು, ಆಪ್ತರು, ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ, ವಿನಯಾ ಪ್ರಸಾದ್, ನಿಶಾ ಮುಂತಾದ ಕಿರುತೆರೆಯ ಸೆಲೆಬ್ರಿಟಿಗಳು ಪ್ರಿಯಾ ಮತ್ತು ಸಿದ್ದು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಫೆ.14ರಂದು ದಾವಣಗೆರೆಯಲ್ಲಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪಾರು ಸೀರಿಯಲ್ ನಲ್ಲಿ ಸಿದ್ದು ಮೂಲಿಮನೆ ಪ್ರೀತು ಪಾತ್ರ ಮಾಡುತ್ತಿದ್ದಾರೆ. ಪ್ರೀತಿ ಆಚಾರ್ ಗಟ್ಟಿಮೇಳ ಸೀರಿಯಲ್ ನಲ್ಲಿ ಅದಿತಿ ರೋಲ್ ಮೂಲಕ ಜನಮನ ಗೆದ್ದಿದ್ದಾರೆ.

suddiyaana