ಏಷ್ಯಾಕಪ್ ಟೂರ್ನಿಯಿಂದ ಸಂಜು ಸ್ಯಾಮ್ಸನ್‌ಗೆ ಗೇಟಪಾಸ್? – ವಿಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಎಡವಿದ್ದೇ ಮುಳುವಾಯ್ತಾ?

ಕೊಟ್ಟ ಅವಕಾಶ ಕೈಚಿಲ್ಲಿದ್ದಕ್ಕೆ ಟೀಮ್ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್ ಏಷ್ಯಾಕಪ್ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ಎಡವಿದ್ದರು. ಇದೀಗ ಏಕದಿನ ಏಷ್ಯಾಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯೂ ಹೆಚ್ಚಾಗಿದೆ.
ಇದನ್ನೂ ಓದಿ: ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆ – ಸೂರ್ಯಕುಮಾರ್ ಯಾದವ್‌ಗೆ ಅಗ್ರಸ್ಥಾನ, ಗಿಲ್‌ಗೆ 25ನೇ ಶ್ರೇಯಾಂಕ
ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಏಕದಿನ ಮತ್ತು ಟಿ 20 ಸರಣಿಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಸಂಜು ಸ್ಯಾಮ್ಸನ್ ವಿಫಲವಾಗಿದ್ದರು. ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಆಗಸ್ಟ್ 20ರಂದು ಭಾನುವಾರ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಅಲ್ಲದೆ ಕೆರಿಬಿಯನ್ ದ್ವೀಪದಲ್ಲಿ ಕಳಪೆ ಪ್ರದರ್ಶನ ನೀಡಿದ ಸಂಜುಗೆ ಈ ಪಂದ್ಯಾವಳಿಯಿಂದ ಕೋಕ್ ನೀಡಲಿದೆ ಎನ್ನಲಾಗ್ತಿದೆ. ಸಂಜು, ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 9 ಮತ್ತು 51 ರನ್ ಬಾರಿಸಿದ್ದರು. ಇದರ ಜೊತೆಗೆ ಮೂರು ಟಿ20 ಪಂದ್ಯಗಳಲ್ಲಿ ಕ್ರಮವಾಗಿ 12, 7 ಮತ್ತು 13 ರನ್ ಕಲೆಹಾಕುವುದರೊಂದಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಮುಂಬರುವ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಲಿರುವ 15 ಸದಸ್ಯರ ಪಟ್ಟಿಯಲ್ಲಿ ಸಂಜು ಹೆಸರಿರುವುದು ಅನುಮಾನವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ KL ರಾಹುಲ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಫಿಟ್ ಆಗಿದ್ದರೆ, ರಾಹುಲ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿರುತ್ತಾರೆ. ಅವರ ನಂತರದ ಅವಕಾಶ ಇಶಾನ್‌ಗೆ ಸಿಗಲಿದೆ. ಹೀಗಾಗಿ 13 ಏಕದಿನ ಪಂದ್ಯಗಳಲ್ಲಿ 55.71 ಬ್ಯಾಟಿಂಗ್ ಸರಾಸರಿ ಹೊಂದಿರುವ ಸ್ಯಾಮ್ಸನ್‌ಗೆ ಏಷ್ಯಾಕಪ್ ಬಾಗಿಲು ಮುಚ್ಚಲಿದೆ
ಏಷ್ಯಾಕಪ್‌ನಲ್ಲಿ ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನ ಪ್ರಾರಂಭಿಸಲಿದೆ. ಈ ವರ್ಷ ಪಂದ್ಯಾವಳಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. ಇದೀಗ, ಆಯ್ಕೆಗಾರರು ಏಷ್ಯಾಕಪ್ ತಂಡವನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ಆ ನಂತರ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ.