ಸೋತ ಪಾಕಿಸ್ತಾನದ ತಲೆ ಗಿರ ಗಿರ – ಪಾಕ್ ಕ್ರಿಕೆಟ್ ತಂಡದ ನಿರ್ದೇಶಕನಿಗೆ ಗೇಟ್‌ಪಾಸ್

ಸೋತ ಪಾಕಿಸ್ತಾನದ ತಲೆ ಗಿರ ಗಿರ – ಪಾಕ್ ಕ್ರಿಕೆಟ್ ತಂಡದ ನಿರ್ದೇಶಕನಿಗೆ ಗೇಟ್‌ಪಾಸ್

ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಜೊತೆಗೆ ಸಾಕಷ್ಟು ಅವಮಾನ ಎದುರಿಸಿದೆ. ಇದನ್ನು ಅರಗಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಕಿಸ್ತಾನ ತಂಡದ ನಿರ್ದೇಶಕರಿಗೆ ಗೇಟ್‌ಪಾಸ್ ಕೊಟ್ಟಿದೆ.

ಇದನ್ನೂ ಓದಿ: ಕೈ ಕುಲುಕಲಿಲ್ಲ.. ಬಾಗಿಲು ಬಂದ್ – ಪೆಹಲ್ಗಾಮ್ ಅಟ್ಯಾಕ್ ಗೆ ಪಾಕಿಸ್ತಾನಕ್ಕೆ ಭಾರತದ ರಿಟರ್ನ್ ಗಿಫ್ಟ್!

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯವಾಗಿ ಪಾಕಿಸ್ತಾನ ಸೋತಿದೆ. ಇದರಿಂದ ಪಾಕ್ ಕ್ರಿಕೆಟ್ ಮಂಡಳಿಯ ತಲೆ ಕೆಟ್ಟುಹೋಗಿದೆ. ಇದರ ಪರಿಣಾಮ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಕೋಲಾಹಲ ಉಂಟಾಗಿದೆ. ಜೊತೆಗೆ ಪಂದ್ಯ ಮುಗಿದ ನಂತರ ಟೀಂ ಇಂಡಿಯಾದ ಆಟಗಾರರು, ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡದೆ ಡ್ರೆಸಿಂಗ್ ರೂಮ್​ಗೆ ತೆರಳಿದರು. ಈ ಘಟನೆಯ ನಂತರ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪಾಕ್ ತಂಡದ ನಿರ್ದೇಶಕರನ್ನು ಹುದ್ದೆಯಿಂದ ಅಮಾನತುಗೊಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಂಡದ ನಿರ್ದೇಶಕ ಉಸ್ಮಾನ್ ವಹಾಲಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಹುದ್ದೆಯಿಂದ ಅಮಾನತುಗೊಳಿಸಿದೆ. ಪಂದ್ಯದ ನಂತರ ಕೈಕುಲುಕದ ಘಟನೆಯನ್ನು ನಿರ್ವಹಿಸುವಲ್ಲಿನ ಲೋಪಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ, ಇದು ಪಾಕಿಸ್ತಾನ ತಂಡವನ್ನು ಕ್ರೀಡಾ ಮನೋಭಾವದ ವಿಷಯದಲ್ಲಿ ದುರ್ಬಲ ಸ್ಥಾನಕ್ಕೆ ತಳ್ಳಿದೆ ಎಂಬುದು ಮಂಡಳಿಯ ಅಭಿಪ್ರಾಯವಾಗಿದೆ. ಹೀಗಾಗಿ ಉಸ್ಮಾನ್ ವಹಾಲಾ ಅವರ ತಲೆದಂಡವಾಗಿದೆ. ಉಸ್ಮಾನ್ ವಹಾಲಾ ಅವರನ್ನು ಕಳೆದ ಎರಡು ವರ್ಷಗಳಿಂದ ಈ ಹುದ್ದೆಗೆ ನೇಮಿಸಲಾಗಿತ್ತು. ಇದು ಮಾತ್ರವಲ್ಲದೆ ಅವರು ಪಾಕಿಸ್ತಾನ ಸೂಪರ್ ಲೀಗ್‌ನ ಅಧ್ಯಕ್ಷರೂ ಆಗಿದ್ದಾರೆ. ಈ ಸೂಕ್ಷ್ಮ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪರಿಹರಿಸಲು ಅವರು ವಿಫಲರಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಅಲ್ಲದೆ ಪಂದ್ಯ ಪೂರ್ವ ಸಿದ್ಧತೆಗಳಲ್ಲಿ ಪಾಕಿಸ್ತಾನದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಹಾಲಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ. ಪಂದ್ಯ ಪ್ರಾರಂಭವಾಗುವ ಮೊದಲೇ ಅವರು ಈ ಸಮಸ್ಯೆಯನ್ನು ಪ್ರಸ್ತಾಪಿಸಿ ಪರಿಹರಿಸಬೇಕಿತ್ತು ಎಂಬುದು ಮಂಡಳಿಯ ಅಭಿಪ್ರಾಯ. ರೆಫರಿ ವಿರುದ್ಧವೂ ಕ್ರಮಕ್ಕೆ ಆಗ್ರಹ ನಿರ್ದೇಶಕರನ್ನು ಹುದ್ದೆಯಿಂದ ತೆಗೆದು ಹಾಕುವುದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಪಂದ್ಯದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದೆ. ಟಾಸ್ ಸಮಯದಲ್ಲಿ ಕೈಕುಲುಕದಂತೆ ಇಬ್ಬರೂ ನಾಯಕರಿಗೆ ಮ್ಯಾಚ್ ರೆಫರಿ ಹೇಳಿದ್ದಾರೆ. ಇದು ಐಸಿಸಿಯ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಸಿಬಿ ಆರೋಪಿಸಿದೆ. ಈ ಕಾರಣಕ್ಕಾಗಿ ಮ್ಯಾಚ್ ರೆಫರಿ ಪೈಕ್ರಾಫ್ಟ್ ಅವರನ್ನು ಏಷ್ಯಾಕಪ್ ಪಂದ್ಯಾವಳಿಯಿಂದ ತೆಗೆದುಹಾಕುವಂತೆ ಪಿಸಿಬಿ ಒತ್ತಾಯಿಸಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ, ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಐಸಿಸಿಗೆ ಮನವಿ ಮಾಡಿದ್ದಾರೆ.

Sulekha