ವಿಧಾನಸೌಧ ಕೊಠಡಿಯಿಂದ ಮಾಜಿ ಸಿಎಂಗಳ ಫೋಟೋಗಳಿಗೆ ಗೇಟ್‌ ಪಾಸ್‌! – ʼಅಕ್ಷಮ್ಯ ಅಪರಾಧʼ ಎಂದ ಬಿಜೆಪಿ

ವಿಧಾನಸೌಧ ಕೊಠಡಿಯಿಂದ ಮಾಜಿ ಸಿಎಂಗಳ ಫೋಟೋಗಳಿಗೆ ಗೇಟ್‌ ಪಾಸ್‌! – ʼಅಕ್ಷಮ್ಯ ಅಪರಾಧʼ ಎಂದ ಬಿಜೆಪಿ

ಬೆಂಗಳೂರು: ವಿಧಾನಸೌಧದ 3 ನೇ ಮಹಡಿಯ ಸಚಿವ ಕೆ.ಹೆಚ್‌ ಮುನಿಯಪ್ಪ ಹಾಗೂ ಕೆ.ಎನ್.ರಾಜಣ್ಣ ಅವರ ಕಚೇರಿಗಳಲ್ಲಿದ್ದ ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಫೋಟೋಗಳ ಜೊತೆಗೆ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಫೋಟೋವನ್ನು ತೆರವುಗೊಳಿಸಿ, ಪಡಸಾಲೆಯಲ್ಲಿ ರಾಶಿ ಹಾಕಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಐದು ಗ್ಯಾರಂಟಿಗಳತ್ತ ಎಲ್ಲರ ಚಿತ್ತ – ಬಸ್ ಪಾಸ್ ಖರೀದಿಯಿಂದ ಹಿಂದೆ ಸರಿದ ಮಹಿಳೆಯರು

ಈ ಬಗ್ಗೆ ಟ್ವೀಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿರುವ ಬಿಜೆಪಿ,  ‘ಇದು ಅಹಂಕಾರದ ಪರಮಾವಧಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ‘ಆಡಳಿತ ಪಕ್ಷ ಕಾಂಗ್ರೆಸ್​ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ ಮತ್ತು ಶತ್ರುಭಾವ. ಇಂದು ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧದಾಸೋಹಿ ಪರಮ ಪೂಜ್ಯನೀಯ ಡಾ। ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಿ ಪಡಸಾಲೆಯಲ್ಲಿ ಉರುಳಾಡುವಂತೆ ಮಾಡಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧʼ ಎಂದು ಕಿಡಿಕಾರಿದೆ.

ʼಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು. ಜತೆಗೆ ಡಾ। ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ಸಕಲ ಗೌರವಗಳೊಂದಿಗೆ ಪುನಃ ಕೊಠಡಿಯೊಳಗೆ ಲಗತ್ತಿಸಬೇಕುʼ ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

suddiyaana