ಪಾಕಿಸ್ತಾನ್ ತಂಡದಿಂದ ಬಾಬರ್ ಗೆ ಗೇಟ್ ಪಾಸ್ – ಹೀರೋ ಬಾಬರ್ ಝೀರೋ ಆಗಿದ್ದು ಹೇಗೆ?

ಪಾಕಿಸ್ತಾನ್ ತಂಡದಿಂದ ಬಾಬರ್ ಗೆ ಗೇಟ್ ಪಾಸ್ – ಹೀರೋ ಬಾಬರ್ ಝೀರೋ ಆಗಿದ್ದು ಹೇಗೆ?

ಪಾಕಿಸ್ತಾನದಲ್ಲಿ ಹೀರೋ ಆಗಿ ಮೆರೆದ, ಕೊಹ್ಲಿ ಅಂತಾನೇ ಫೇಮಸ್ ಆಗಿರುವ ಬಾಬರ್ ಆಝಂ ಸೂಪರ್ ಸ್ಟಾರ್ ಯುಗ ಅಂತ್ಯವಾಗಿದೆಯಾ?. ಹೀಗೊಂದು ಪ್ರಶ್ನೆ ಬಾಬರ್ ವಿಚಾರವಾಗಿ ಎದ್ದಿದೆ. ಯಾಕೆಂದರೆ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ಟಿ20 ಸರಣಿಗೆ ಪಾಕ್ ತಂಡವನ್ನು ಘೋಷಿಸಲಾಗಿದೆ. ಇದರಲ್ಲಿ ಪಾಪ.. ಬಾಬರ್ ಹೆಸರೇ ಇಲ್ಲ.

ಇದನ್ನೂ ಓದಿ: ಜೋ ರೂಟ್ ಬೌಲ್ಡ್ ಆಗಿದ್ದ ಬಾಲ್ ನೋ ಬಾಲ್ ಆಗಿತ್ತಾ? – ಎಂಸಿಸಿ ಕೊಟ್ಟ ಕ್ಲಾರಿಫಿಕೇಷನ್‌ಗೆ ಆಂಗ್ಲರು ಥಂಡಾ

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವೆ ಟಿ20 ಸರಣಿ ಜುಲೈ 20 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ 15 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್, ಶಾಹೀನ್ ಅಫ್ರಿದಿ ಕಾಣಿಸಿಕೊಂಡಿಲ್ಲ. ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂಗೆ ಸ್ಥಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿನ ಕಳಪೆ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ರಮುಖ ಆಟಗಾರರನ್ನು ಮುಂಬರುವ ಟೂರ್ನಿಗೆ ಆಯ್ಕೆ ಮಾಡಿಲ್ಲ ಎಂದು ತಿಳಿದು ಬಂದಿದೆ. ಈ ಮೂಲಕ ಬಾಂಗ್ಲಾದೇಶ್ ವಿರುದ್ಧದ ಸರಣಿಗೆ ಯುವ ಪಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಈ ಯುವ ಪಡೆಯನ್ನು ಮುನ್ನಡೆಸಲಿರುವುದು ಸಲ್ಮಾನ್ ಅಲಿ ಅಘಾ. ಹಾಗೆಯೇ ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳಾಗಿ ಫಖರ್ ಝಮಾನ್, ಸೈಮ್ ಅಯ್ಯೂಬ್, ಖುಷ್ದಿಲ್ ಶಾ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ವಿಕೆಟ್ ಕೀಪರ್​ಗಳಾಗಿ ಮೊಹಮ್ಮದ್ ಹ್ಯಾರಿಸ್ ಹಾಗೂ ಸಾಹಿಬ್​ಝಾದ ಫರ್ಹಾನ್ ಆಯ್ಕೆಯಾಗಿದ್ದಾರೆ. ಅದೇ ರೀತಿ ವೇಗಿಗಳಾಗಿ ಆಯ್ಕೆಯಾಗಿರುವುದು ಅಬ್ಬಾಸ್ ಅಫ್ರಿದಿ, ಫಹೀಮ್ ಅಶ್ರಫ್ ಹಾಗೂ ಮೊಹಮ್ಮದ್ ಹ್ಯಾರಿಸ್. ಇವರೊಂದಿಗೆ ಯುವ ಸ್ಪಿನ್ನರ್ ಸುಫಿಯಾನ್ ಮುಖೀಮ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕ್‌ ನ ಕ್ರಿಕೆಟ್ ಹೀರೋ ಬಾಬರ್ ಆಝಂ ಜೊತೆ ಮೊಹಮ್ಮದ್ ರಿಝ್ವಾನ್, ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಶಾಹೀನ್ ಅಫ್ರಿದಿ ಕೂಡ ಟಿ20 ತಂಡದಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ನಿರಾಶೆಯಾಗಿದೆ.

Sulekha