ಚಿತ್ರಮಂದಿರಗಳಿಂದ ‘ಆದಿಪುರುಷ್’ ಸಿನಿಮಾಗೆ ಗೇಟ್ ಪಾಸ್ – ಬಾಕ್ಸ್ ಆಫೀಸ್ ನಲ್ಲೂ ಮಕಾಡೆ ಮಲಗಿದ ಚಿತ್ರ

ಚಿತ್ರಮಂದಿರಗಳಿಂದ ‘ಆದಿಪುರುಷ್’ ಸಿನಿಮಾಗೆ ಗೇಟ್ ಪಾಸ್ – ಬಾಕ್ಸ್ ಆಫೀಸ್ ನಲ್ಲೂ ಮಕಾಡೆ ಮಲಗಿದ ಚಿತ್ರ

ಸುಂಟರಗಾಳಿಯಂತೆ ಚಿತ್ರಮಂದಿರಗಳಿಗೆ ಅಪ್ಪಳಿಸಿದ ಆದಿಪುರುಷ್ ಸಿನಿಮಾ ಈಗ ತಂಗಾಳಿಯಂತಾಗಿದೆ. ಆರಂಭದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಚಿತ್ರ ಈಗ ಮಕಾಡೆ ಮಲಗಿದೆ. ಸಿನಿಮಾದ ಕಲೆಕ್ಷನ್ ದಿನೇ ದಿನೆ ತಗ್ಗುತ್ತಿದ್ದು ಕೆಲ ಚಿತ್ರಮಂದಿಗಳಿಂದ ಆದಿಪುರುಷ್ ಸಿನಿಮಾಗೆ ಗೇಟ್ ಪಾಸ್ ನೀಡಲಾಗ್ತಿದೆ.

ಶುಕ್ರವಾರ ಸಿನಿಮಾ ಕ್ಷೇತ್ರದವರಿಗೆ ವಿಶೇಷ ದಿನ. ಆದರೆ ಆ ದಿನವೂ ‘ಆದಿಪುರುಷ್’ ಸಿನಿಮಾ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. 150 ರೂಪಾಯಿ ಟಿಕೆಟ್ ಆಫರ್​​ ಮಾಡಿದ್ರೂ ಕೂಡ ಅಭಿಮಾನಿಗಳನ್ನ ಸೆಳೆಯುವಲ್ಲಿ ವಿಫಲವಾಗಿದೆ. ಮತ್ತೊಂದು ಕಡೆ ಚಿತ್ರಮಂದಿರದಿಂದ ‘ಆದಿಪುರುಷ್’ ಶೋನ ಕಡಿತ ಮಾಡುವ ಕೆಲಸ ಆಗುತ್ತಿದೆ. ಅನೇಕ ಕಡೆಗಳಲ್ಲಿ ಶೋನ ಕಿತ್ತೆಸೆಯಲಾಗಿದೆ. ಹೀಗಾಗಿ, ವೀಕೆಂಡ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರತಂಡಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ.

ಇದನ್ನೂ ಓದಿ : ಕಿಚ್ಚ ಸುದೀಪ್ ಅಭಿನಯದ ʼK46ʼ ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್!

‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಿದ್ದಾರೆ. ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಓಂ ರಾವತ್ ಈ ಚಿತ್ರ ನಿರ್ದೇಶನ ಮಾಡಿದ್ದು, ಈ ಸಿನಿಮಾ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ರಾಮಾಯಣವನ್ನು ಅಣಕಿಸಿದ ರೀತಿಯಲ್ಲಿ ‘ಆದಿಪುರುಷ್’ ಚಿತ್ರ ಇದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾಗೆ ಹಿನ್ನಡೆ ಉಂಟಾಗಿದೆ. ‘ಆದಿಪುರುಷ್’ ಚಿತ್ರವನ್ನು ಟೀಕಿಸಲು ಭರಪೂರ ವಿಚಾರಗಳು ಸಿಗುತ್ತಿವೆ. ಸೈಫ್ ಅಲಿ ಖಾನ್ ಮಾಡಿರುವ ರಾವಣನ ಪಾತ್ರದಿಂದ ಹಿಡಿದು, ಚಿತ್ರದ ಸಂಭಾಷಣೆವರೆಗೆ ಅನೇಕ ರೀತಿಯ ಟೀಕೆಗಳು ವ್ಯಕ್ತವಾಗಿದೆ. ರಾಮನ ಪಾತ್ರಕ್ಕೆ ಪ್ರಭಾಸ್ ಹೊಂದುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯ. ಸಿನಿಮಾ ರಿಲೀಸ್​ಗೂ ಮೊದಲು ಇದು ಸಂಪೂರ್ಣವಾಗಿ ರಾಮಾಯಣ ಆಧರಿತ ಚಿತ್ರ ಎನ್ನುತ್ತಿದ್ದ ತಂಡದವರು, ಸಿನಿಮಾ ರಿಲೀಸ್ ಆದ ಬಳಿಕ ‘ನಾವು ರಾಮಾಯಣವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡಿ ಸಿನಿಮಾ ಮಾಡಿದ್ದೇವೆ ಅಷ್ಟೇ’ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಚಿತ್ರತಂಡಕ್ಕೆ ಹಿನ್ನಡೆ ಆಯಿತು.

ದೇಶದ ಹಲವು ಕಡೆಗಳಲ್ಲಿ ‘ಆದಿಪುರುಷ್’ ಸಿನಿಮಾ ಶೋ ಕಡಿಮೆ ಮಾಡಲಾಗುತ್ತಿದೆ. ಸೋಮವಾರ (ಜೂನ್ 19) 10 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದ ಈ ಚಿತ್ರ ಶುಕ್ರವಾರ (ಜೂನ್​ 23) ಕೇವಲ 3 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ವೀಕೆಂಡ್ ನಲ್ಲೂ ಸಿನಿಮಾ ವೀಕ್ಷಣೆಗೆ ಜನ ಬರೋದು ಅನುಮಾನ ಎನ್ನಲಾಗಿದೆ.

suddiyaana