ಗ್ಯಾಸ್ ಸಿಲಿಂಡರ್ ಸಿಗದೇ ಹೊಟೇಲ್ ಬಂದ್! – ಸಾಲಗಾರರ ಕಾಟಕ್ಕೆ ಬೇಸತ್ತು ಹೊಟೇಲ್ ಮಾಲೀಕ ಆ*ತ್ಮಹ*ತ್ಯೆ

ಗ್ಯಾಸ್ ಸಿಲಿಂಡರ್ ಸಿಗದೇ ಹೊಟೇಲ್ ಬಂದ್! – ಸಾಲಗಾರರ ಕಾಟಕ್ಕೆ ಬೇಸತ್ತು ಹೊಟೇಲ್ ಮಾಲೀಕ ಆ*ತ್ಮಹ*ತ್ಯೆ

ಇರಾನ್‌ – ಇಸ್ರೇಲ್‌ ನಡುವಿನ ಯುದ್ದದ ಎಫೆಕ್ಟ್‌ ಭಾರತದ ಮೇಲೆ ತಟ್ಟಿದೆ. ಯುದ್ದದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಎಲ್‌ಪಿಜಿ ಗ್ಯಾಸ್‌ ಕೊರತೆಯಿಂದಾಗಿ ಅದೆಷ್ಟೋ ಹೋಟೆಲ್‌ಗಳು ಬಂದ್‌ ಆಗಿವೆ. ಇದೀಗ ಇಲ್ಲೊಂದು ಘಟನೆ ಗ್ಯಾಸ್‌ ಕೊರತೆಯಿಂದ ಹೋಟೆಲ್‌ ಬಂದ್‌ ಆಗಿದ್ದು, ಸಾಲದ ಸುಳಿಯಲ್ಲಿದ್ದ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್‌ ಶಾಕ್!‌ –  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ!

ಬೆಳಗಾವಿ ಹುಕ್ಕೇರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹುಕ್ಕೇರಿಯ ಹೊಟೇಲ್ ಮಾಲೀಕ ರಾಮ ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಘಟನೆ ಸಂಬಂಧ ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಹುಕ್ಕೇರಿ ಹಳೇ ಬಸ್ ನಿಲ್ದಾಣದ ಸಮೀಪ ರಾಮ ಹುಳ್ಳೂರಿ ಅವರು ಹನುಮಾನ್ ಎಂಬ ಹೊಟೇಲ್ ನಡೆಸುತ್ತಿದ್ದರು. ಕಳೆದ ಹಲವು ದಿನಗಳಿಂದಲೂ ರಾಮ ಹಳ್ಳೂರಿ ಅವರ ಹೊಟೇಲ್‌ಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸಿಗುತ್ತಿರಲಿಲ್ಲ. ಸಿಲಿಂಡರ್ ಇಲ್ಲದ ಕಾರಣ ಹೊಟೇಲ್‌ನ್ನು ಬಂದ್ ಮಾಡಬೇಕಾಯಿತು. ಹೊಟೇಲ್ ಬಂದ್ ಆದ ನಂತರ ಆದಾಯ ಕಡಿಮೆಯಾಗಿ, ಬಡ್ಡಿ ಮತ್ತು ಸಾಲದ ಕಂತುಗಳು ತೀರಿಸಲು ಸಾಧ್ಯವಾಗಲಿಲ್ಲ. ಸಾಲದ ಬಡ್ಡಿ ಕಾಟ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದೀಗ ಈ ಪ್ರಕರಣದ ಸಂಬಂಧ ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಸಾಲದ ಒತ್ತಡ ಮುಖ್ಯ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪರಿವಾರದವರಿಗೆ ಸಾಂತ್ವನ ಹೇಳಲಾಗುತ್ತಿದೆ.

ಈ ಘಟನೆಯು ಸಣ್ಣ ವ್ಯಾಪಾರಿಗಳು ಮತ್ತು ಹೊಟೇಲ್ ಉದ್ಯಮಿಗಳು ಎದುರಿಸುತ್ತಿರುವ ಸಾಲ, ಬಡ್ಡಿ ಮತ್ತು ಮೂಲ ಸೌಲಭ್ಯಗಳ ಕೊರತೆಯನ್ನು ಮತ್ತೊಮ್ಮೆ ಬಯಲು ಮಾಡಿದೆ. ವಾಣಿಜ್ಯ ಸಿಲಿಂಡರ್ ಸರಬರಾಜಿನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು ಸಣ್ಣ ಉದ್ಯಮಿಗಳನ್ನು ಕಂಗೆಟ್ಟಿಸುತ್ತಿವೆ ಎಂದು ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸುತ್ತಾ, ಸಣ್ಣ ಉದ್ಯಮಿಗಳಿಗೆ ಸಾಲದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Shwetha M