ಪಾಕಿಸ್ತಾನದಲ್ಲಿ ಗ್ಯಾಸ್ ಲೋಡ್ ಶೆಡ್ಡಿಂಗ್ – ಆರ್ಥಿಕವಾಗಿ ದಿವಾಳಿಯಾಗಿರುವ ಜನತೆಗೆ ಮತ್ತೊಂದು ಬರೆ

ಪಾಕಿಸ್ತಾನದಲ್ಲಿ ಗ್ಯಾಸ್ ಲೋಡ್ ಶೆಡ್ಡಿಂಗ್ – ಆರ್ಥಿಕವಾಗಿ ದಿವಾಳಿಯಾಗಿರುವ ಜನತೆಗೆ ಮತ್ತೊಂದು ಬರೆ

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ರಂಜಾನ್ ಮಾಸ ಆಚರಿಸುವುದು ಕೂಡಾ ಅಲ್ಲಿನ ಜನರಿಗೆ ತೀರಾ ಕಷ್ಟವಾಗಿದೆ. ಹೀಗಿರುವಾಗಲೇ ಪಾಕ್ ಸರ್ಕಾರ ದೇಶದ ಜನರಿಗೆ 24×7 ಅನಿಲ ಪೂರೈಕೆಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಪಾಕಿಸ್ತಾನದ ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ದಿನವೂ ಲೋಡ್-ಶೆಡ್ಡಿಂಗ್ ಇರುತ್ತದೆ. ನಮ್ಮ ನಿಕ್ಷೇಪಗಳು ಕುಸಿದಿರುವುದರಿಂದ ನಾವು 24 ಗಂಟೆಗಳ ಕಾಲ ಅನಿಲವನ್ನು ಒದಗಿಸಲು ಸಾಧ್ಯವಿಲ್ಲ. ಆದರೆ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಗ್ಯಾಸ್ ಲೋಡ್-ಶೆಡ್ಡಿಂಗ್ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:  ತಂದೆ ಪಾಕಿಸ್ತಾನ, ತಾಯಿ ಬೆಂಗಳೂರು – ಭಾರತ ಪೌರತ್ವಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದೇಕೆ?

ಜನರು ಎದುರಿಸುತ್ತಿರುವ ಗ್ಯಾಸ್ ಪೂರೈಕೆ ಸಮಸ್ಯೆ ಪರಿಹರಿಸಲು ಕರಾಚಿಗೆ ಭೇಟಿ ನೀಡುವುದಾಗಿ ಪಾಕಿಸ್ತಾನದ ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ ಹೇಳಿದ್ದಾರೆ. ಶ್ರೀಮಂತರು ಮತ್ತು ಬಡವರ ಗ್ಯಾಸ್ ಬಿಲ್ ಅನ್ನು ಪ್ರತ್ಯೇಕಿಸಲಾಗಿದೆ. ಶ್ರೀಮಂತರು ಈಗ ಹೆಚ್ಚು ಗ್ಯಾಸ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

suddiyaana