ಚೀನಾ, ಟರ್ಕಿ ಸೇರಿದಂತೆ ಇತರ ದೇಶಗಳಲ್ಲೂ ಬೆಳ್ಳುಳ್ಳಿ ಬೆಲೆ ಭಾರಿ ಏರಿಕೆ! – ದರ ಇಳಿಕೆ ಯಾವಾಗ?
ಟೊಮ್ಯಾಟೋ, ಈರುಳ್ಳಿ ಬಳಿಕ ಈಗ ಬೆಳ್ಳುಳ್ಳಿಗೆ ಬಂಗಾರದ ಬೆಲೆ ಬಂದಿದೆ. ದಿನದಿಂದ ದಿನಕ್ಕೆ ಬೆಳ್ಳುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿಗೆ 600 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಬೆಳ್ಳುಳ್ಳಿ ಬೆಳೆಯುವ ರಾಜ್ಯಗಳಿಂದ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ. ಬೆಂಗಳೂರು ಮಾರುಕಟ್ಟೆಗೂ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಯಶವಂತಪುರ ಎಪಿಎಂಸಿಯಲ್ಲಿ ಶುಕ್ರವಾರ ಬೆಳ್ಳುಳ್ಳಿಯ ಸಗಟು ಮಾರಾಟ ದರ ಪ್ರತಿ ಕೆ.ಜಿಗೆ 300 ರೂ. ಇತ್ತು. ಆದರೆ, ಚಿಲ್ಲರೆ ಮಾರಾಟದ ಮಳಿಗೆಗಳಲ್ಲಿಈಗಾಗಲೇ ಬೆಳ್ಳುಳ್ಳಿ ದರ ಕೆ.ಜಿಗೆ 500 ರೂ.ಗಳಿಗೆ ಮುಟ್ಟಿತ್ತು. ಅದಾಗಿ, ನಾಲ್ಕು ದಿನಗಳಲ್ಲಿಅಂದರೆ ಫೆ.14 ರ ಹೊತ್ತಿಗೆ ಪ್ರತಿ ಕಿಲೋಗೆ 550- 560 ರೂ.ಗಳಲ್ಲಿ ಬೆಳ್ಳುಳ್ಳಿ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ – ಗುಂಡಿನ ದಾಳಿಯಲ್ಲಿ ಓರ್ವ ಸಾವು
ದೇಶದ ಬಹುತೇಕ ರಾಜ್ಯಗಳಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಭಾರತ ಮಾತ್ರವಲ್ಲದೇ ಭಾರತ ಮಾತ್ರವಲ್ಲದೆ ಚೀನಾ, ಟರ್ಕಿ ಸೇರಿದಂತೆ ಇತರ ದೇಶಗಳಲ್ಲೂ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ಮಾರ್ಚ್ 10 ರೊಳಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆಯಲ್ಲಿಇಳಿಕೆಯಾಗುವ ಸಾಧ್ಯತೆ ಇದೆ. ಬೆಳ್ಳುಳ್ಳಿಯನ್ನು ಸಗಟು ಮಾರುಕಟ್ಟೆಯಲ್ಲೇ ಕೆ.ಜಿ.ಗೆ 400ರಿಂದ 450 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 600 ರೂ.ವರೆಗೆ ಮಾರಾಟವಾಗುತ್ತಿದೆ.