ಗ್ರಾಹಕರ ಜೇಬು ಸುಡುತ್ತಿದೆ ಬೆಳ್ಳುಳ್ಳಿ ಬೆಲೆ! – ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ.!

ಗ್ರಾಹಕರ ಜೇಬು ಸುಡುತ್ತಿದೆ ಬೆಳ್ಳುಳ್ಳಿ ಬೆಲೆ! – ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ.!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರ ಜೇಬು ಸುಡುವಂತೆ ಆಗಿದೆ. ಟೊಮ್ಯಾಟೋ, ಈರುಳ್ಳಿ ಬೆಲೆ ಏರಿಕೆ ಬಳಿಕ ಈಗ ಬೆಳ್ಳುಳ್ಳಿ ಸರದಿ. ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.

ಇದನ್ನೂ ಓದಿ: ಹಿಂದುತ್ವ ಹೋರಾಟದ ಮೂಲಕ ರಣಕಹಳೆ ಮೊಳಗಿಸಿದ ಮಾಜಿ ಸಿಎಂ -ಚುನಾವಣೆಗೆ ಸಿದ್ಧರಾದ ಕುಮಾರಣ್ಣ!

ಕರ್ನಾಟಕದಲ್ಲಿ ಬೆಳ್ಳುಳ್ಳಿ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ಹಿಂದೆ ಕೆಜಿಗೆ 280-300 ರೂ.ಗೆ ಸಿಗುತ್ತಿದ್ದ ಬೆಳ್ಳುಳ್ಳಿ ಈ ವಾರ ಮತ್ತೆ ಏರಿಕೆ ಕಂಡಿದೆ. ಹೋಲ್ ಸೇಲ್​ನಲ್ಲಿ ಪ್ರತಿ ಕ್ವಿಂಟಾಲ್​ಗೆ 32 ರಿಂದ 33 ಸಾವಿರ ದರ ನಿಗದಿಯಾಗಿದೆ. ಸದ್ಯ ಜನ 400-500ರೂಗೆ ಕೆಜಿ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಬೆಳ್ಳುಳ್ಳಿ ದರ ಏರಿಕೆಗೆ ಕಾರಣವೇನು?

ದಾವಣಗೆರೆ ಎಪಿಎಂಸಿ‌ ‌ಹರಾಜಿನಲ್ಲಿ ಅತ್ಯಂತ ಹೆಚ್ಚು ದರಕ್ಕೆ ಬೆಳ್ಳುಳ್ಳಿ ಸೇಲ್ ಆಗಿದೆ. ಬೆಳ್ಳುಳ್ಳಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಇರದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬೆಳ್ಳುಳ್ಳಿ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ. ಇದರಿಂದ ರೈತರು ಫುಲ್ ಖುಷ್ ಆಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಫೆಬ್ರವರಿಯಲ್ಲಿ ಬರುವ ನಿರೀಕ್ಷೆಯಿದ್ದು, ಆನಂತರ ದರ ಇಳಿಕೆಯಾಗಬಹುದು ಎಂದು ಕೆಲವರು ಊಹಿಸಿದ್ದಾರೆ.

Shwetha M