ಜೈಲಿಗೆ ಶಿಫ್ಟ್ ವೇಳೆ ಎನ್ ಕೌಂಟರ್! ಯಾರು ಈ ಅಮನ್ ಸಾಹು?
150 ಕೇಸ್ ಗಳ ಗ್ಯಾಂಗ್ ಸ್ಟರ್

ಜೈಲಿಗೆ ಶಿಫ್ಟ್ ವೇಳೆ ಎನ್ ಕೌಂಟರ್!  ಯಾರು ಈ ಅಮನ್ ಸಾಹು?150 ಕೇಸ್ ಗಳ ಗ್ಯಾಂಗ್ ಸ್ಟರ್

ಅಮನ್ ಸಾಹು.. ಗ್ಯಾಂಗ್‌ಸ್ಟಾರ್‌.. ಇವನ್ ಅಂತಿಂತ ಕ್ರಿಮಿನಲ್ ಅಲ್ಲವೇ ಅಲ್ಲ, ನಟೋರಿಯಸ್ ಕ್ರಿಮಿನಲ್‌.. ಮೊದ್ಲು ಇವನ್ ಹೆಣ ಹೇಗ್ ಬಿತ್ತು ಅಂತ ಹೇಳ್ತಿನಿ.. ಆಮೇಲೆ ಇವನ್ ಯಾರು ಅನ್ನೋದನ್ನ ಹೇಳ್ತಿನಿ.. ಮಂಗಳವಾರ ಬೆಳಗ್ಗೆ ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈತನ ಹೆಣ ಬಿದ್ದಿದೆ. ಗ್ಯಾಂಗ್‌ಸ್ಟರ್ ಅಮನ್ ಸಾಹುನನ್ನ ಛತ್ತೀಸ್‌ಗಢದ ರಾಯ್‌ಪುರ ಜೈಲಿನಿಂದ ರಾಂಚಿಗೆ ಶಿಫ್ಟ್ ಮಾಡಲಾಗುತಿತ್ತು. ಈ ವೇಳೆ ಈ ಅಮನ್ ಸಾಹು ಕಡೆಯ ಗ್ಯಾಂಗ್‌ ಪೊಲೀಸ್ ಗಾಡಿಯನ್ನ ರಾಮಗಢ ಪೊಲೀಸ್ ಠಾಣೆ ಪ್ರದೇಶದ ಅಂಧೇರಿಟೋಲಾ ಬಳಿ ಅಡ್ಡಗಟ್ಟಿದೆ..  ಅಮನ್‌ನನ್ನ ಪೊಲೀಸರಿಂದ ಬಿಡಿಸೋಕೆ  ಪೊಲೀಸ್ ಗಾಡಿ ಮೇಲೆ ಮಾಡಿದ್ದಾರೆ.. ಅಷ್ಟೇ ಈ ಸಾಹು ಗ್ಯಾಂಗ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಎರಡು ಕಡೆಯಿಂದ ದಾಳಿಗೆ ಪ್ರತಿದಾಳಿ ನಡೆದಿದೆ. ಈ ವೇಳೆ  ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಅಮನ್ ಮೇಲೆ ಪೊಲೀಸರು ಗುಂಡಿನ ದಾಳಿಯನ್ನ ನಡೆಸಿದ್ದು, ಅಮನ್ ಸಾಹು ಸಾವನ್ನಪ್ಪಿದ್ದಾನೆ.  ದಾಳಿಯಲ್ಲಿ ಒಬ್ಬ ಎಟಿಎಸ್ ಅಧಿಕಾರಿ ಕೂಡ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 ಅಮನ್ ಸಾಹು ಯಾರು?

ಈ ಅಮನ್ ಸಾಹು ಕೊಲೆ ಮತ್ತು ಸುಲಿಗೆ ಸೇರಿದಂತೆ 150 ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಅನ್ನೋ ಶಂಕೆ ಕೂಡ ಇದೆ.   ಸಾಹುಗೆ ಈ ಹಿಂದೆ ರಾಮಗಢದಲ್ಲಿ ನಡೆದ ಕ್ರಿಮಿನಲ್ ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರು ವರ್ಷ ಮತ್ತು ಲಾತೇಹಾರ್‌ನಲ್ಲಿ ನಡೆದ ಪ್ರಕರಣವೊಂದರಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿತ್ತು.. ನೋಡೋಕೆ ನಾಯಿಗೆ ಹೊಡೆಯೋ ಕೋಲಿನ ತರ ಇದ್ದರು ಇವನ ಕ್ರಿಮಿನಲ್ ಚಟುವಟಿಕೆ ಮಾತ್ರ ಇಡೀ ಜಾರ್ಖಂಡ್‌ನ್ನೇ ಬೆಚ್ಚಿ ಬೀಳಿಸಿತ್ತು.. ಅಲ್ಲದೇ ಜೈಲಿನಲ್ಲೇ ಇದ್ದುಕೊಂಡು ಕೂಡು ಸಾಕಷ್ಟು ಅಪರಾಧಗಳನ್ನ ನಡೆಸಿದ್ದಾನೆ.. ಜೈಲಿನಿಂದಲೇ ತನ್ನ ಹುಡುಗರ ಮೂಲಕ ಸಾಕಷ್ಟು ಕ್ರಿಮಿನಲ್ ಕೆಲಸಗಳನ್ನ ಮಾಡಿಸಿದ್ದಾನೆ.. ಜೈಲಿಂದ ಜೈಲಿಗೆ ಶಿಫ್ಟ್ ಮಾಡೋದನ್ನ ಕಾಯುತ್ತಿದ್ದ ಈತನ ಹುಡುಗರು.. ಅಮಿನ್ ಸಾಹುವನ್ನ ಬಿಡಿಸೋಕೆ ಅಟ್ಯಾಕ್ ಮಾಡಿದ್ದಾರೆ. ಆದ್ರೆ ಇದ್ರಿಂದ ಅಮಿನ್ ಜೀವವೇ ಹೋಗಿದೆ.. ಪೊಲೀಸರು ಇಲ್ಲಿ ಸ್ವಲ್ಪೇ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ, ಅಮನ್ ಇಷ್ಟೋತ್ತಿಗೆ ಎಸ್ಕೇಪ್ ಆಗಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ..

ಜಾರ್ಖಂಡ್ ಎಲೆಕ್ಷನ್ ನಿಲ್ಲೋಕೆ ಕೂಡ ಟ್ರೈ ಮಾಡಿದ್ದ ಅಮನ್  

ಇನ್ನು ಈ ಅಮನ್ ಸಾಹು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೆ. ಹಜಾರಿಬಾಗ್ ಜಿಲ್ಲೆಯ ಬರ್ಕಗಾಂವ್ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಸಾಹು ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.   ಜಾರ್ಖಂಡ್‌ಗೆ ಹಿಂತಿರುಗಿ ವರ್ಗಾಯಿಸುವಂತೆ ಕೋರಿ ಸಾಹು ಛತ್ತೀಸ್‌ಗಢ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಿದ್ದ.. ಆದ್ರೆ   ಎರಡೂ ಅರ್ಜಿಗಳನ್ನು ಆಯಾ ಹೈಕೋರ್ಟ್‌ಗಳು ತಿರಸ್ಕರಿಸಿದ್ವು.. ಜೈಲಿನಲ್ಲೇ ಕೊಳೆಯುತ್ತಿದ್ದ ಅಮನ್, ಹೊರಗೆ ಬರೋಕೆ ಟ್ರೈ ಮಾಡಿದ್ದ.. ಬಟ್ ತಾನೊಂದು ಬಗೆದ್ರೆ ದೈವವೊಂದು ಬಗೆಯುಂತೆ ಅನ್ನುವಂತೆ.. ಎನ್ಕೌಂಟರ್‌ನಲ್ಲಿ ಅಮನ್ ಸಾಹು ಹೆಣ ಬಿದ್ದಿದೆ.. ಇದ್ರಿಂದ ಅದೆಷ್ಟೋ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..

 

Kishor KV

Leave a Reply

Your email address will not be published. Required fields are marked *