ಮಲಿನವಾದಳಾ ಪವಿತ್ರ ಗಂಗೆ?- ಭಯಾನಕ ಬ್ಯಾಕ್ಟೀರಿಯಾ!!
ಸ್ನಾನಕ್ಕೆ ಯೋಗ್ಯ ಅಲ್ವಾ?

ಮಲಿನವಾದಳಾ ಪವಿತ್ರ ಗಂಗೆ?- ಭಯಾನಕ ಬ್ಯಾಕ್ಟೀರಿಯಾ!!ಸ್ನಾನಕ್ಕೆ ಯೋಗ್ಯ ಅಲ್ವಾ?

ಮಹಾ ಕುಂಭಮೇಳ. ಇಡೀ ವಿಶ್ವವೇ ಭಾರತದಂತ ತಿರುಗಿ ನೋಡುವಂತೆ ಮಾಡಿದ ಅತೀ ದೊಡ್ಡ ಧಾರ್ಮಿಕ ಹಬ್ಬ.. ಕೋಟಿ ಕೋಟಿ ಜನ ಒಂದ್ಕಡೆ ಸೇರಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಪವಿತ್ರಾ ಗಂಗೆಯಲ್ಲಿ ಮಿಂದೆಳುತ್ತಿದ್ದಾರೆ.  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾಕುಂಭಮೇಳದಲ್ಲಿ ಇದುವರೆಗೂ 54 ಕೋಟಿ ಜನರು ತೀರ್ಥಸ್ನಾನ ಮಾಡಿದ್ದಾರೆ. ಪ್ರತಿನಿತ್ಯ ಸರಾಸರಿ 80 ಲಕ್ಷದಿಂದ 1 ಕೋಟಿ ಜನರು ತ್ರಿವೇಣಿ ಸಂಗಮಕ್ಕೆ ಭೇಟಿ ಕೊಟ್ಟು ಪುಣ್ಯಸ್ನಾನದಲ್ಲಿ ಮಿಂದೇಳುತ್ತಿದ್ದಾರೆ. ಪವಿತ್ರ ಮಹಾಕುಂಭಮೇಳ ನಡೆಯುತ್ತಿರುವ ಮಧ್ಯೆ ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ. ಗಂಗೆ ಅಪವಿತ್ರ ಆಗಿದ್ದಾಳೆ ಎಂದು ವರದಿಗಳು ಹೇಳುತ್ತಿವೆ.

ದೇಶ ವಿದೇಶದಿಂದ ಕೋಟಿಗಟ್ಟಲೆ ಜನರು ಗಂಗಾ ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದಾರೆ.. ನಾವು ಮಾಡಿದ ಪಾಪವನ್ನ ಗಂಗೆ ಮಾತೆ ತೊಳೆಯುತ್ತಾಳೆ ಅಂತ ಪವಿತ್ರ ನದಿಯಲ್ಲಿ ಮಳುಗಿ ಎಳುತ್ತಿದ್ದಾರೆ. ಆದ್ರೆ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ ಅನ್ನೋ ಮಾಹಿತಿ ಹೊರ ಬಂದಿದೆ. ಈ ಮಾತನ್ನು ಹೇಳಿದ್ದು ವಿರೋಧ ಪಕ್ಷದ ನಾಯಕರಲ್ಲ. ಯಾವುದೇ ಮೀಡಿಯಾಗಳು ಅಲ್ಲ.. ಗಂಗಾ ಸ್ನಾನ ಮಾಡಿದ ಭಕ್ತರು ಅಲ್ಲ.. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಗಂಗಾ ನದಿ ನೀರಿನ ಸ್ಯಾಂಪಲ್ ಪರೀಕ್ಷೆ ಮಾಡಿದ್ದು, ಅದರಲ್ಲಿ ಪ್ರಯಾಗ್‌ ರಾಜ್‌ನ ಗಂಗಾ ನದಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಬ್ಯಾಕ್ಟಿರಿಯಾಗಳಿವೆ ಎಂದು ವರದಿಯಾಗಿದೆ.

ಕಳೆದ ಜನವರಿ 13ರಂದು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಿದೆ. ಫೆಬ್ರವರಿ 26ರ ಶಿವರಾತ್ರಿ ಅಂದು ವಿದ್ಯುಕ್ತ ತೆರೆ ಬೀಳಲಿದೆ. 50 ಕೋಟಿಗೂ ಹೆಚ್ಚು ಜನ ಗಂಗೆಯಲ್ಲಿ ಪುಣ್ಯ ಸ್ನಾನವನ್ನ ಮಾಡಿದ್ದಾರೆ.. ಆದ್ರೆ ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಜನವರಿ 12, 13ರಂದೇ ಗಂಗಾ ನದಿಯ ನೀರಿನ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಷೆ ನಡೆಸಿತ್ತು. ಇದೀಗ ನೀರಿನ ಸ್ಯಾಂಪಲ್ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಸಲ್ಲಿಕೆ ಮಾಡಿದೆ.

ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ರೆ ಈಗಾಗಲೇ  ಕೋಟಿ ಕೋಟಿ ಜನ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಈ ಟೈಂನಲ್ಲಿ ಬಂದಿರೋ ವರದಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಿದೆ.

ಕೋಟಿ ಕೋಟಿ ಸಂಖ್ಯೆಯ ಜನರು ನದಿಯಲ್ಲಿ ಸ್ನಾನ ಮಾಡಿರುವುದು ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟಿರಿಯಾಗಳ ಸಂಖ್ಯೆಯಲ್ಲಿ ಏರಿಕೆಯಾಗಲು ಕಾರಣವಾಗಿದೆ ಎಂದು ವರದಿ ಹೇಳಿದೆ. ಈ ಹಿಂದೆ ನಿರ್ದೇಶಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತ ವಿಸ್ತ್ರತ ವರದಿ ಸಲ್ಲಿಸಲು ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿರುವ ಕುರಿತು ಸಮಿತಿ ಗಮನಿಸಿದೆ. ಅಲ್ಲದೇ   ಚರಂಡಿ ನೀರು ಕೂಡ ಗಂಗೆ ಮಡಲು ಸೇರಿ ಕಲುಷಿತ ಗೊಂಡಿದೆ. ಹಾಗೇ ನೀವು ಊಹಿಸಿ ಕೋಟಿ ಕೋಟಿ ಜನ ಒಂದೇ ಕಡೆ ಸ್ನಾನ ಮಾಡಿದ್ರೆ ಹೇಗೆ ಇರುತ್ತೆ ಅನ್ನೋದನ್ನ.. ದೊಡ್ಡ ಮಟ್ಟದಲ್ಲಿ ಹರಿವು ಇದ್ದರೇ, ಅಷ್ಟು ಕಲುಷಿತ ಆಗಲ್ಲ. ಆದ್ರೆ ಈಗ ನೀರಿನ ಹರಿವು ದೊಡ್ಡ ಮಟ್ಟದಲ್ಲಿ ಇಲ್ಲ. ಹೀಗಾಗಿ  ಗಂಗಾ ನದಿಯ ನೀರು ಕಲುಷಿತಗೊಂಡಿದೆ.

ಇನ್ನು ಗಂಗಾ, ಯಮುನಾ ನದಿ ನೀರಿನ ಗುಣಮಟ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೋತಿಶ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಸರಸ್ವತಿ, ಕುಂಭಮೇಳ ಆರಂಭವಾಗುವುದಕ್ಕಿಂತ ಮುನ್ನವೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಗಂಗಾ ಹಾಗೂ ಯಮುನಾ ನದಿಯ ನೀರಿನ ಗುಣಮಟ್ಟದ ಬಗ್ಗೆ ಗಮನ ಸೆಳೆದಿತ್ತು. ಅದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು. ಮುಖ್ಯವಾಗಿ ಚರಂಡಿ ನೀರು ನದಿಗೆ ಹರಿಯುವುದನ್ನು ತಡೆಗಟ್ಟುವಂತೆ ಸೂಚನೆ ನೀಡಿತ್ತು. ಅಲ್ಲಿ 40ರಿಂದ 50 ಕೋಟಿ ಜನರು ಸ್ನಾನ ಮಾಡಿದ್ದಾರೆ. ಅಲ್ಲದೆ, ಇದು ಜಗತ್ತಿನಾದ್ಯಂತ ಪ್ರಚಾರವಾಗುತ್ತಿದೆ. ಆದರೆ, ಸ್ನಾನ ಮಾಡುವುದಕ್ಕೆ ಮೂಲಭೂತ ಸೌಲಭ್ಯವಾದ ಸ್ವಚ್ಛ ನೀರು ಪೂರೈಸಿಲ್ಲ ಎಂದಿದ್ದಾರೆ.

 

 

Kishor KV

Leave a Reply

Your email address will not be published. Required fields are marked *