ಮನೆಯಲ್ಲಿ ಕೂಡಿ ಹಾಕಿ ಇಡೀ ದಿನ ಸಾಮೂಹಿಕ ಅತ್ಯಾಚಾರ – ಐವರು ನೀಚರು ಅರೆಸ್ಟ್, ಓರ್ವ ಕಾಮುಕ ಪರಾರಿ

ಮನೆಯಲ್ಲಿ ಕೂಡಿ ಹಾಕಿ ಇಡೀ ದಿನ ಸಾಮೂಹಿಕ ಅತ್ಯಾಚಾರ – ಐವರು ನೀಚರು ಅರೆಸ್ಟ್, ಓರ್ವ ಕಾಮುಕ ಪರಾರಿ

ಹಳ್ಳಿಯಿಂದ ಪಟ್ಟಣಕ್ಕೆ ಕೆಲಸದ ನಿಮಿತ್ತ ಮುಗ್ಧ ಮಹಿಳೆಯೊಬ್ಬರು ಬಂದಿದ್ದರು. ಅವರ ಜೊತೆ ಊರಿನಿಂದ ಬಂದ ವ್ಯಕ್ತಿ ಕೂಡಾ ಇದ್ದರು. ಆಗ ಒಬ್ಬ ಪರಿಚಯದ ವ್ಯಕ್ತಿ ಮನೆಗೆ ಬಂದು ಟೀ ಕುಡಿದು ಹೋಗಿ ಎಂದು ಒತ್ತಾಯಿಸಿದ್ದಾನೆ. ಮಹಿಳೆ ಮತ್ತು ವ್ಯಕ್ತಿ ಅವರ ಮನೆಗೆ ಟೀ ಕುಡಿಯಲು ಹೋಗಿದ್ದಾರೆ. ಅಲ್ಲಿಂದ ಆ ಮಹಿಳೆ ನೋಡಿದ್ದು ಅಕ್ಷರಶಃ ನರಕ. ಮತ್ತು ನೀಚಕ್ರಿಮಿಗಳನ್ನು.

ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ಕಾರು – ತಾಯಿ ಇಬ್ಬರು ಮಕ್ಕಳು ಸಜೀವ ದಹನ, ತಂದೆಯ ಸ್ಥಿತಿಯೂ ಗಂಭೀರ

ಸೆಪ್ಟೆಂಬರ್ 5 ರಂದು ಮಹಿಳೆ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಮಹಿಳೆ ಜೊತೆ ವ್ಯಕ್ತಿಯೋರ್ವ ಸಹ ಜೊತೆಗಿದ್ದನು. ಮಹಿಳೆಗೆ ಬಸವರಾಜ್ ಖಲಾರಿಯ ಎಂಬವನ ಮುಖ ಪರಿಚಯವಿತ್ತು. ಮಹಿಳೆಯನ್ನು ಭೇಟಿಯಾಗಿ ಬಸವರಾಜ್ ಖಿಲಾರಿ ಮನೆಗೆ ಬಂದು ಟೀ ಕುಡಿದು ಹೋಗುವಂತೆ ಒತ್ತಾಯಿಸಿದ್ದಾನೆ. ಒತ್ತಡಕ್ಕೆ ಮಣಿದ ಮಹಿಳೆ ತನ್ನ ಜೊತೆಯಲ್ಲಿದ್ದ ವ್ಯಕ್ತಿ ಜೊತೆ ಬಸವರಾಜ್ ಖಿಲಾರಿ ಮನೆಗೆ ಹೋಗಿದ್ದಾರೆ. ಒಳಗೆ ಬರುತ್ತಿದ್ದಂತೆ ಉಪಾಯವಾಗಿ ಇಬ್ಬರನ್ನು ಬಸವರಾಜ್ ಕೂಡಿ ಹಾಕಿದ್ದಾನೆ. ಮಹಿಳೆ ಬರುತ್ತಿದ್ದಂತೆ ಇನ್ನುಳಿದ ಐವರು ಆರೋಪಿಗಳು ಬಸವರಾಜ್ ಮನೆಗೆ ಬಂದಿದ್ದಾರೆ. ಇಡೀ ದಿನ ಆರು ಜನರು ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಇಬ್ಬರ ಬಳಿಯಲ್ಲಿದ್ದ 2 ಸಾವಿರ ರೂಪಾಯಿ, ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ನಂತರ ಸಂತ್ರಸ್ತರ ಬಳಿಯಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಕೊನೆಗೆ ವ್ಯಕ್ತಿ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿ ಬೆದರಿಕೆ ಹಾಕಿದ್ದಾರೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ನಿಮ್ಮ ಮರ್ಯಾದೆ ಹಾಳು ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ಹೆದರಿದ ಮಹಿಳೆ ಈ ವಿಚಾರವನ್ನೂ ಎಲ್ಲೂ ಬಾಯಿಬಿಟ್ಟಿರಲಿಲ್ಲ.

ಆದರೆ ಮಾಡಿದ ಪಾಪಕ್ಕೆ ಆ ಆರೋಪಿಗಳು ಬೇರೆ ಪ್ರಕರಣವೊಂದರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದೇ ವೇಳೆ ಸಾಮೂಹಿಕ ಅತ್ಯಾಚಾರದ ವಿಚಾರವೂ ಪೊಲೀಸರೆದುರು ನೀಚರು ಬಾಯಿಬಿಟ್ಟಿದ್ದಾರೆ. ಮಹಿಳೆಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಇಡೀ ದಿನ ಅತ್ಯಾಚಾರ ನಡೆಸಿದ್ದಾಗಿ ಕಾಮುಕರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಐವರು ಆರೋಪಿಗಳಲ್ಲಿ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆನಚಿನಮರಡಿ ಗ್ರಾಮದ ರಮೇಶ್ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮಲಿಂಗ ವಡ್ಡರ್, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣ ಪ್ರಕಾಶ್ ಪೂಜೇರಿ, ರಾಮಸಿದ್ದಪ್ಪ ತಪ್ಪಸಿ ಬಂಧಿತರು. ಮತ್ತೋರ್ವ ಆರೋಪಿ ಬಸವರಾಜ್ ಖಲಾರಿ ಪರಾರಿಯಾಗಿದ್ದಾನೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಸೆಪ್ಟೆಂಬರ್ 5ರಂದು ಗೋಕಾಕ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಭೀಮಾಶಂಕರ್ ಗುಳೇದ್ ನೇತೃತ್ವದಲ್ಲಿ ಗೋಕಾಕ್ ಪೊಲೀಸರು ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸಿ ಪ್ರಕರಣ ಪತ್ತೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಸೆಪ್ಟೆಂಬರ್ 14ರಂದು ಮಹಿಳೆಯನ್ನು ಹೆದರಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು 9 ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ಹಿನ್ನೆಲೆ ತಡಕಾಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಂಧಿತರು ಗೋಕಾಕ್ ಭಾಗದ ಖಿಲಾರಿ ಗ್ಯಾಂಗ್ ಮತ್ತು ಎಸ್ಪಿ ಸರ್ಕಾರ್ ಗ್ಯಾಂಗ್ ಸದಸ್ಯರು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಪ್ರತಿಯೊಬ್ಬ ಆರೋಪಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರರಿಂದ ಏಳು ಪ್ರಕರಣಗಳು ದಾಖಲಾಗಿದೆ. ಆರೋಪಿಗಳನ್ನು  ಗುರುತಿಸಿದ ಸಂತ್ರಸ್ತೆ ಆರೋಪಿಗಳ ವಿಚಾರಣೆ ತೀವ್ರಗೊಳಿಸಿದಾಗ ಸೆಪ್ಟೆಂಬರ್ 5ರಂದು ನಡೆಸಿದ ಸಾಮೂಹಿಕ ಅತ್ಯಾಚಾರವನ್ನು ಬಾಯಿ ಬಿಟ್ಟಿದ್ದಾರೆ. ಸಂತ್ರಸ್ತ ಮಹಿಳೆ ಭಯದಿಂದ ಯಾವುದೇ ದೂರು ದಾಖಲು ಮಾಡಿರಲಿಲ್ಲ. ಪೊಲೀಸರು ಮನವೊಲಿಸಿದ ಬಳಿಕೆ ಸೆಪ್ಟೆಂಬರ್ 29ರಂದು ಮಹಿಳೆ ದೂರು ದಾಖಲಿಸಿ, ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಭೀಮಾಶಂಕರ್ ಮಾಹಿತಿ ನೀಡಿದ್ದಾರೆ.

Sulekha