ರೌಡಿಶೀಟರ್ ನಡುವೆ ಕಾರ್ ಕಿರಿಕ್ – ಫಾರ್ಮ್ಹೌಸ್ನಲ್ಲೇ ನೆ*ತ್ತರು ಹರಿಸಿದ ಕ್ರೂರಿಗಳು

ಬೆಂಗಳೂರಿನ ರೌಡಿಶೀಟರ್ ಒಬ್ಬನನ್ನು 10 ರಿಂದ 12 ಜನರ ಸಶಸ್ತ್ರ ಗ್ಯಾಂಗ್ ಬೆನ್ನಟ್ಟಿ, ಫಾರ್ಮ್ಹೌಸ್ನಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಎಸ್ಯುವಿ ಕಾರು ವಿಚಾರವಾದ ಕೊಲೆಯಲ್ಲಿ ಅಂತ್ಯವಾಗಿದೆ. ಕನಕಪುರ ತಾಲೂಕಿನ ಉಯ್ಯಾಂಬಳ್ಳಿ ಬಳಿ ಈ ಭೀಕರ ಘಟನೆ ನಡೆದಿದೆ. ಹುಲಿಮಾವು ಪೊಲೀಸ್ ಠಾಣೆಯ ರೌಡಿಶೀಟರ್, ಅರೆಕೆರೆ ನಿವಾಸಿ ವೆಂಕಟೇಶ್ ಮೂರ್ತಿ ಕೊಲೆಯಾದ ದುರ್ದೈವಿ.
ಮುಖ್ಯ ಆರೋಪಿ ಅಂಬರೀಶ್ ಅಲಿಯಾಸ್ ರೆಬೆಲ್ ಎಂಬಾತನ ಸ್ನೇಹಿತನಿಗೆ ಸೇರಿದ ಎಸ್ಯುವಿ ಕಾರನ್ನು ವೆಂಕಟೇಶ್ ಮೂರ್ತಿಯ ಆಪ್ತನೊಬ್ಬ ಬಲವಂತವಾಗಿ ಕಿತ್ತುಕೊಂಡಿದ್ದ ಎನ್ನಲಾಗಿದೆ. ಈ ಕಾರಿನ ವಿಚಾರವಾಗಿ ಕಳೆದ 15-20 ದಿನಗಳಿಂದ ಇರಡೂ ಟೀಂಗಳ ನಡುವೆ ತೀವ್ರ ದೊಡ್ಡ ಮಟ್ಟದಲ್ಲಿ ಕಿರಿಕ್ ಆಗುತಿತ್ತು.
ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿ ಹೋದ ಅಸ್ಸಾಂ ಜನರ ಬದುಕು – 69 ಸಾ*ವು, ಬೀದಿಗೆ ಬಿದ್ದ 4.45 ಲಕ್ಷ ಜನ
ಜುಲೈ 26ರ ಭಾನುವಾರ ಮಧ್ಯಾಹ್ನ ವೆಂಕಟೇಶ್ ಮೂರ್ತಿ ಉಯ್ಯಾಂಬಳ್ಳಿಯ ಶಿವಾಲದಪ್ಪನ ಬೆಟ್ಟ ರಸ್ತೆಯಲ್ಲಿರುವ ತನ್ನ ಫಾರ್ಮ್ಹೌಸ್ನಲ್ಲಿ ಸ್ನೇಹಿತರೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ 10-12 ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ. ಪ್ರಾಣ ಉಳಿಸಿಕೊಳ್ಳಲು ವೆಂಕಟೇಶ್ ಮೂರ್ತಿ ಫಾರ್ಮ್ಹೌಸ್ ಬೇಲಿ ಜಿಗಿದು ಓಡಲು ಯತ್ನಿಸಿದರಾದರೂ, ಬೆನ್ನಟ್ಟಿದ ಗ್ಯಾಂಗ್ ಆತನನ್ನು ರಾಜಕಾಲುವೆ ಬಳಿ ಹಿಡಿದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣೆಯಲ್ಲಿ BNS ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿ ಅಂಬರೀಶ್ ಮತ್ತು ಆತನ ಸಹಚರ ಬಸವ ಸದ್ಯ ತಲೆಮರೆಸಿಕೊಂಡಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನೋಡಿರಿ

