ಗಾಂಧಿನಗರ ಗಾಸಿಪ್ – ಡಾಲಿ, ರಮ್ಯಾ ಜೊತೆ ಕೈ ಜೋಡಿಸಲಿದ್ದಾರಾ ಸಪ್ತಮಿ ಗೌಡ?

ಗಾಂಧಿನಗರ ಗಾಸಿಪ್ – ಡಾಲಿ, ರಮ್ಯಾ ಜೊತೆ ಕೈ ಜೋಡಿಸಲಿದ್ದಾರಾ ಸಪ್ತಮಿ ಗೌಡ?

ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಇದೀಗ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಮಾತ್ರವಲ್ಲ, ಪರಭಾಷೆಯಿಂದಲೂ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾದಲ್ಲಿ ನಟಿಸಲು ಸಪ್ತಮಿ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಯಾಗುತ್ತಿರುವ ಬೆನ್ನಲ್ಲೆ ಮತ್ತೊಂದು ಖುಷಿ ವಿಚಾರ  ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:  ಸಿನಿಮಾದಲ್ಲಿ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ?

ಮೊನ್ನೆಯಷ್ಟೇ ಡಾಲಿ ಧನಂಜಯ್ ಮತ್ತು ರಮ್ಯಾ ಕಾಂಬಿನೇಷನ್ ನ ‘ಉತ್ತರಕಾಂಡ’ ಸಿನಿಮಾದ ಮುಹೂರ್ತವಾಗಿದೆ. ಈ ಸಿನಿಮಾದ ಮೂಲಕ ರಮ್ಯಾ ಮತ್ತೆ ಸಿನಿಮಾ ರಂಗವನ್ನು ಪ್ರವೇಶ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಈ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಚಿತ್ರದಲ್ಲಿ ನಟ ಡಾಲಿ ಧನಂಜಯ್ ಜೊತೆ ಸಪ್ತಮಿ ಗೌಡ ರಗಡ್ ರೀತಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಮ್ಯಾ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ಈ ಸಿನಿಮಾದ ಬಗ್ಗೆ ಶೂಟಿಂಗ್ ಗೂ ಮೊದಲೇ ಕುತೂಹಲ ಮೂಡಿಸಿತ್ತು. ಈಗ ಕಾಂತಾರದ ಬೆಡಗಿ ಸಪ್ತಮಿ ಗೌಡ ಕೂಡ ಜೊತೆಯಾಗಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಲಿದೆ. ಅಧಿಕೃತವಾಗಿ ಈ ಸುದ್ದಿಯನ್ನು ಸಿನಿಮಾ ಟೀಮ್ ಆಗಲಿ, ಸಪ್ತಮಿ ಗೌಡ ಆಗಲಿ ಹಂಚಿಕೊಳ್ಳದೇ ಇದ್ದರೂ, ಗಾಂಧಿನಗರದಲ್ಲಿ ಹರಡಿರುವ ಈ ಸುದ್ದಿ ಸುಳ್ಳಾಗದು. ಯಾಕೆಂದರೆ, ಸಪ್ತಮಿ ಗೌಡ ಈಗಾಗಲೇ ಡಾಲಿ ಮತ್ತು ರಮ್ಯಾ ಜೊತೆ ಹಲವು ಸಿನಿಮಾಗಳ ಪ್ರಮೋಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಣ್ಣದೊಂದು ಸುಳಿವು ಕೂಡ ನೀಡಿದ್ದಾರೆ.

suddiyaana