ರಾಹುಲ್ ಕರಿಯರ್ಗೆ ಗಂಭೀರ್ ಕಲ್ಲು? – IPL, T-20ಯಂತೆ ODIಗೂ ಬೇಕಿತ್ತಾ?
ಬ್ಯಾಟಿಂಗ್ ಆರ್ಡರ್ ಬದಲಿಸಿದ್ದೇ ಮುಳುವು?

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ್ಫಾಮೆನ್ಸ್ ನೋಡಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ವಿಶ್ವಶ್ರೇಷ್ಠ ಆಟಗಾರರರೇ ತುಂಬಿರೋ ಬಲಿಷ್ಠ ಭಾರತ ತಂಡ ಅದೆಷ್ಟು ಸುಲಭವಾಗಿ ಸಿಂಹಳೀಯರಿಗೆ ಮಂಡಿಯೂರಿತು ಅನ್ನೋದೇ ಆಶ್ಚರ್ಯವಾಗಿದೆ. ಅದ್ರಲ್ಲೂ ಏಳೆಂಟು ಬ್ಯಾಟರ್ಸ್ ಲೈನ್ ಅಪ್ ಇದ್ರೂ ಕೂಡ ಒಂದು ಸುಲಭ ಟಾರ್ಗೆಟ್ ರೀಚ್ ಮಾಡೋಕೆ ಯಾಕೆ ಆಗ್ಲಿಲ್ಲ ಅನ್ನೋದೇ ಈಗಿರುವ ಯಕ್ಷ ಪ್ರಶ್ನೆ. ಇಲ್ಲಿ ಬ್ಯಾಟರ್ಸ್ ಫೇಲ್ ಆದ್ರೂ ಅನ್ನೋದ್ರ ಜೊತೆಗೆ ಕೋಚ್ ಗೌತಮ್ ಗಂಭೀರ್ ವಿರುದ್ಧವೂ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಪ್ಲೇಯಿಂಗ್ 11 ಆರ್ಡರ್. ಏಕದಿನ ಪಂದ್ಯದಲ್ಲೂ ಗಂಭೀರ್ ಪ್ರಯೋಗ ಮಾಡಿದ್ದೇ ಸೋಲಿಗೆ ಕಾರಣ ಅಂತಾ ಕೆಲ ಕ್ರಿಕೆಟ್ ವಿಶ್ಲೇಷಕರೂ ಕಿಡಿ ಕಾರಿದ್ದಾರೆ. ಅಷ್ಟಕ್ಕೂ ಗಂಭೀರ್ ಮಾಡಿದ್ದಂಥ ಪ್ರಯೋಗ ಏನು? ಅದೇ ಬದಲಾವಣೆಯೇ ಸೋಲಿಗೆ ಕಾರಣ ಆಯ್ತು? ಇದ್ರಿಂದ ಆಟಗಾರರ ಮೇಲೆ ಎಂಥಾ ಪರಿಣಾಮ ಬೀರುತ್ತೆ..? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಿಶ್ರ ಡಬಲ್ಸ್‌ನಲ್ಲಿ Love.. ಒಲಿಂಪಿಕ್ಸ್‌ನಲ್ಲಿ ಪ್ರಪೋಸ್ – ಚಿನ್ನ ಕೊರಳಿಗೆ.. ಉಂಗುರ ಬೆರಳಿಗೆ..!
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಿಣುಕಾಡಿ ಡ್ರಾ ಮಾಡಿಕೊಂಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಕಂಪ್ಲೀಟ್ ಮಕಾಡೆ ಮಲಗಿತ್ತು. ಟಾರ್ಗೆಟ್ ಬಿಗ್ ಸ್ಕೋರ್ ಅಲ್ಲದಿದ್ರೂ ಬೀಟ್ ಮಾಡೋಕೆ ಆಗ್ದೇ ಸೋಲೊಪ್ಪಿಕೊಂಡ್ರು. ಹಿಟ್ಮ್ಯಾನ್ ರೋಹಿತ್ ಶರ್ಮಾರನ್ನ ಹೊರತುಪಡಿಸಿದ್ರೆ ಉಳಿದ ಎಲ್ಲಾ ಬ್ಯಾಟರ್ಸ್ ಕೂಡ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆಯೇ ಆಡಿದ್ರು. ಕೊಲಂಬೋದ ಸ್ಲೋ & ಲೋ ಪಿಚ್ನಲ್ಲಿ ಇಂಡಿಯನ್ ಟೈಗರ್ಸ್, ಸಿಂಹಳೀಯರ ಸ್ಪಿನ್ ಬಲೆಗೆ ಒಬ್ಬರ ಹಿಂದೊಬ್ಬರಂತೆ ಬಿದ್ದರು. ಚೇಸಿಂಗ್ಗಿಳಿದಾಗ ಟೀಮ್ ಇಂಡಿಯಾ ಅದ್ಧೂರಿ ಆರಂಭ ಪಡೆದುಕೊಳ್ಳಿತ್ತು. ಮೊದಲು 10 ಓವರ್ ಎಲ್ಲಾ ಚೆನ್ನಾಗಿತ್ತು. ಆದ್ರೆ, ಆ ಬಳಿಕ ಟೀಮ್ ಇಂಡಿಯಾ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೀತು. ಮಿಡಲ್ ಆರ್ಡರ್ನ ಬ್ಯಾಟರ್ಸ್ ಕೈ ಕೊಟ್ಟಿದ್ರಿಂದ ಸುಲಭವಾಗಿ ಗೆಲ್ಲಬಹುದಿದ್ದ ಮತ್ತೊಂದು ಪಂದ್ಯವನ್ನ ಭಾರತ ಕೈ ಚೆಲ್ಲಿಕೊಳ್ಳಬೇಕಾಯ್ತು. ಬಟ್ ಇಲ್ಲಿ ಬ್ಯಾಟರ್ಸ್ ಕೈ ಕೊಟ್ರು ಅನ್ನೋದಕ್ಕಿಂತ ಹೆಡ್ ಕೋಚ್ ಗೌತಮ್ ಗಂಭೀರ್ ಮಾಡಿದ ಎಕ್ಸ್ಪೆರಿಮೆಂಟ್ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿ ಬರ್ತಿವೆ. ಇದೇ ಪ್ರಯೋಗದಿಂದ ಕನ್ನಡಿಗ ಕೆ.ಎಲ್ ರಾಹುಲ್ರ ಕ್ರಿಕೆಟ್ ಕರಿಯರ್ ಕೂಡ ಅಂತ್ಯವಾಗೋ ಆತಂಕ ಎದುರಾಗಿದೆ.
ಪ್ರಯೋಗದಿಂದಲೇ ಫೇಲ್ಯೂರ್?
ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ಗೌತಮ್ ಗಂಭೀರ್‌ಗೆ ಬಹಳ ಮುಖ್ಯವಾಗಿತ್ತು. ಯಾಕಂದ್ರೆ ಮುಖ್ಯ ಕೋಚ್ ಆಗಿ ಚಾರ್ಜ್ ತೆಗೆದುಕೊಂಡ ಮೇಲೆ ಮೊದಲ ಪ್ರವಾಸ ಇದು. ಟಿ-20 ಸರಣಿಯಲ್ಲಿ ಗೆಲುವು ಸಾಧಿಸಿದ್ದರೂ, ಏಕದಿನ ಸರಣಿಯಲ್ಲಿ ಭಾರೀ ಮುಖಭಂಗವಾಗಿದೆ. ತಂಡ ಸೋಲುತ್ತಿದ್ದಂತೆಯೇ ಗೌತಮ್ ಗಂಭೀರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ತಂಡದಲ್ಲಾದ ಕೆಲ ಬದಲಾವಣೆಗಳು. ಗಂಭೀರ್ ಕೋಚ್ ಆದ್ಮೇಲೆ ತಂಡದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮೂರು ಮಾದರಿಯಲ್ಲಿ ಆಡುವ ಕೆಲವು ಆಟಗಾರರು ಮಾತ್ರ ಇದ್ದು, ಏಕದಿನ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ರಾಹುಲ್ ದ್ರಾವಿಡ್ ಕಟ್ಟಿದ ತಂಡದಲ್ಲಿ ಗಂಭೀರ್ ಅನಗತ್ಯ ಪ್ರಯೋಗ ಮಾಡ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಲಾಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಪ್ರಯೋಗ ಯಾಕೆ ಮಾಡಬೇಕು ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನವನ್ನು ಬದಲಾಯಿಸಬೇಕು ಎಂಬ ಸಲಹೆಗಳು ಕೇಳಿಬಂದಿದೆ. ಯಾಕಂದ್ರೆ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ರಂಥ ಆಟಗಾರರು ನಾಲ್ಕು, ಐದನೇ ಕ್ರಮಾಂಕದಲ್ಲಿ ಆಡೋ ಬ್ಯಾಟರ್ಸ್. ಆದ್ರೆ ಇಂಥಾ ಬಲವನ್ನೇ ಬ್ರೇಕ್ ಮಾಡಿ ಗಂಭೀರ್ ಇಲ್ಲೂ ಬದಲಾವಣೆ ತಂದಿದ್ರು. ಅದ್ಯಾವ ಲೆಕ್ಕದಲ್ಲಿ ಶಿವಂ ದುಬೆಯನ್ನ 4ನೇ ಸ್ಥಾನದಲ್ಲಿ, ಅಕ್ಷರ್ ಪಟೇಲ್ರನ್ನ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ರಿ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಸಮಕಾಲೀನ ಕ್ರಿಕೆಟ್’ನಲ್ಲಿ ಜಗತ್ತಿನಲ್ಲೇ ಬೆಸ್ಟ್ ಬ್ಯಾಟಿಂಗ್ ಲೈನಪ್ ನಮ್ಮ ಭಾರತದ್ದು. ಕಳೆದ ಐದು ವರ್ಷಗಳಿಂದಲ್ಲಿ best ಮಿಡರ್ ಆರ್ಡರ್ ಬ್ಯಾಟರ್ ಎನಿಸಿಕೊಂಡಿರುವ ರಾಹುಲ್’ರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ರೆ ಹೇಗೆ ತಾನೇ ಗೆಲ್ಲೋಕೆ ಸಾಧ್ಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಫ್ಯಾನ್ಸ್. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗಂಭೀರ್, ಸುನಿಲ್ ನರೈನ್ನನ್ನ ಓಪನರ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಿ ಸಕ್ಸಸ್ ಆಗಿದ್ರು. ಹಾಗೇ ಲಂಕಾ ವಿರುದ್ಧದ ಟಿ-20 ಸರಣಿಯ ಕೊನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಹಾಗೇ ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ಗೆದ್ದು ಬೀಗಿದ್ರು. ಸೋ ಏಕದಿನ ಪಂದ್ಯಕ್ಕೂ ಅದೇ ರೀತಿ ಪ್ರಯೋಗ ಮಾಡಲು ಹೋಗಿದ್ದೇ ಸೋಲಿಗೆ ಕಾರಣ ಅನ್ನೋದು ಅಭಿಮಾನಿಗಳ ವಾದ.
ಇಲ್ಲಿ ಭಾರತದ ಬ್ಯಾಟರ್ಸ್ ಫೆಲ್ಯೂರ್ ಎಷ್ಟು ನಿಜವೂ ಲಂಕಾ ತಂಡ ಗೆಲ್ಲೋಕೆ ಮುಖ್ಯ ಕಾರಣ ಲಂಕಾದ ಸ್ಪಿನ್ನರ್ಸ್. 2ನೇ ಏಕದಿನ ಪಂದ್ಯ ಮಾತ್ರವಲ್ಲ, ಡ್ರಾನಲ್ಲಿ ಅಂತ್ಯವಾದ ಮೊದಲ ಏಕದಿನದಲ್ಲೂ ಸ್ಪಿನ್ ಮುಂದೆ ಟೀಮ್ ಇಂಡಿಯಾ ಮಂಡಿಯೂರಿತ್ತು. ಅವತ್ತೂ ಕೂಡ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್ಗಳಿಗೆ ಸುಲಭಕ್ಕೆ ಶರಣಾಗಿದ್ರು. ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಒಟ್ಟು 9 ಮಂದಿ ಬ್ಯಾಟರ್ಸ್ ಸ್ಪಿನ್ನರ್ಗಳಿಗೆ ತಲೆಬಾಗಿದ್ರು. ಭಾನುವಾರದ ಪಂದ್ಯದಲ್ಲೂ ಕೂಡ ಯುವ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಬರೋಬ್ಬರಿ 6 ವಿಕೆಟ್ ಕಿತ್ತು ಮಿಂಚಿದ್ರು. ಒಟ್ನಲ್ಲಿ ಲಂಕನ್ನರ ಸ್ಪಿನ್ನರ್ಸ್ ಅಬ್ಬರಕ್ಕೆ ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಜಗಜ್ಜಾಹೀರಾಗಿದೆ. ಅನುಭವಿ ಆಟಗಾರರೇ ಎಡವಿರೋದು ಆತಂಕಕ್ಕೆ ಕಾರಣವಾಗಿದೆ. ಸೋ ಕೊನೆಯ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.