ಸರಣಿ ಗೆದ್ದು ಗುಡುಗಿದ ಗಂಭೀರ್ – DC ಓನರ್ ಗೆ ಓಪನ್ ವಾರ್ನಿಂಗ್
ಟೆಸ್ಟ್ ಡ್ಯಾಮೇಜ್ ಕೇಳಿದ್ದೇ ತಪ್ಪಾ?

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಫಾರ್ಮೆಟ್ನಲ್ಲಿ ಕ್ಲೀನ್ ಸ್ವೀಪ್ ಆದ್ರೂ ಏಕದಿನ ಮಾದರಿಯಲ್ಲಿ ಸರಣಿ ಗೆದ್ದು ಟೀಂ ಇಂಡಿಯಾ ಕಂ ಬ್ಯಾಕ್ ಮಾಡಿದೆ. ಈ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಹೆಡ್ಕೋಚ್ ಗೌತಮ್ ಗಂಭೀರ್ ಫುಲ್ ಫೈರ್ ಆಗಿದ್ದಾರೆ. ಯಾರೆಲ್ಲಾ ತಮ್ಮನ್ನ ಟೀಕೆ ಮಾಡಿದ್ರೋ ಅವ್ರ ಮೇಲೆ ಕೆಂಡ ಕಾರಿದ್ದಾರೆ. ಅಲ್ದೇ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರಿಗೆ ಓಪನ್ ಆಗೇ ವಾರ್ನ್ ಮಾಡಿದ್ದಾರೆ. ವಿಶಾಖಪಟ್ಟಣದಲ್ಲಿ ಮೂರನೇ ಏಕದಿನ ಪಂದ್ಯ ಗೆದ್ದ ಭಾರತ ಸರಣಿ ಕೈವಶ ಮಾಡಿಕೊಳ್ತು. ಪಂದ್ಯದ ಬಳಿಕ ಮಾತನಾಡಿದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಲವು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದಾರೆ. ಹಾಗೇ ಟೆಸ್ಟ್ ಸರಣಿ ಸೋತಾಗ ತಮ್ಮ ವಿರುದ್ಧ ಕೇಳಿ ಬಂದಿದ್ದ ಟೀಕೆಗಳಿಗೂ ಆನ್ಸರ್ ಮಾಡಿದ್ದಾರೆ. ಇದೇ ವೇಳೆ ನಮ್ಮ ತಂಟೆಗೆ ಬರ್ಬೇಡಿ ಅಂತಾ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ : IPLಗೆ ಮ್ಯಾಕ್ಸಿ, ಫಾಫ್ ಗುಡ್ ಬೈ – UNSOLD ಟೆನ್ಷನ್.. PSLಗೆ ಎಂಟ್ರಿ!
ಗಿಲ್ ಇಲ್ಲದ್ದಕ್ಕೇ ಟೆಸ್ಟ್ ಸರಣಿ ಸೋತಿವೆಂದ ಗಂಭೀರ್!
ಪಂದ್ಯದ ಬಳಿಕ ಮಾತನಾಡಿದ ಗಂಭೀರ್, ಕೋಚಿಂಗ್ ಕೆಲಸದ ಬಗೆಗಿನ ಟೀಸ್ಗಳು ಶಾಕಿಂಗ್ ಆಗುವಂತೆ ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾವು ಅಂದುಕೊಂಡಂತೆ ರಿಸಲ್ಟ್ ಬಂದಿಲ್ಲ. ಇದಕ್ಕೆ ಸಾಕಷ್ಟು ರೀಸನ್ಸ್ ಇದೆ. ಸೌತ್ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಸೋಲಿಗೆ ಕಾರಣ ಕ್ಯಾಪ್ಟನ್ ಶುಭ್ಮನ್ ಗಿಲ್ ಅವ್ರ ಇಂಜುರಿ. ಕೋಲ್ಕತ್ತಾದ ಪಂದ್ಯದಲ್ಲಿ ಕ್ಯಾಪ್ಟನ್ ಇಲ್ಲದೇ ಆಡಿದ್ದೇವೆ ಅನ್ನೋದನ್ನ ಮರೆಯೋಕಾಗಲ್ಲ. ಶುಭ್ಮನ್ ಗಿಲ್ ಕಳೆದ ಆರೇಳು ಟೆಸ್ಟ್ ಪಂದ್ಯಗಳಿಂದ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.. ಅವ್ರ ಆಬ್ಸೆನ್ಸ್ನಲ್ಲಿ ತಂಡಕ್ಕೆ ಎಫೆಕ್ಟ್ ಆಗುತ್ತೆ. ಇವೆಲ್ಲವನ್ನೂ ಗಮನಿಸಬೇಕಾಗುತ್ತೆ. ಆದ್ರೆ ವಿಷ್ಯ ಏನಂದ್ರೆ ಕ್ರಿಕೆಟ್ ಬಗ್ಗೆ ಸಂಬಂಧನೇ ಇಲ್ದೋರು ಇದನ್ನೆಲ್ಲಾ ಟೀಕೆ ಮಾಡ್ತಿದ್ದಾರೆ. ಅದ್ರಲ್ಲೂ ಐಪಿಎಲ್ ಮಾಲೀಕರೊಬ್ಬರು ಪ್ರತ್ಯೇಕ ಕೋಚಿಂಗ್ ಬಗ್ಗೆಯೂ ಬರೆದಿದ್ದಾರೆ. ಇದು ನಿಜಕ್ಕೂ ತುಂಬಾ ಆಶ್ಚರ್ಯ. ಅವರು ತಮ್ಮ ಕ್ಷೇತ್ರದ ಕೆಲಸಗಳನ್ನು ನೋಡಿಕೊಂಡಿದ್ರೇ ಒಳ್ಳೇದು. ನಾವು ಅವರ ಕ್ಷೇತ್ರಕ್ಕೆ ಹೋಗುವುದಿಲ್ಲ. ಆದ್ದರಿಂದ, ನಾವು ಮಾಡುವ ಕೆಲಸದಲ್ಲಿ ಅವರಿಗೆ ಹಸ್ತಕ್ಷೇಪ ಮಾಡಲು ಯಾವುದೇ ಹಕ್ಕಿಲ್ಲ. ಹೀಗಾಗಿ ಅವರವರ ಕೆಲಸ ನೋಡ್ಕೊಂದು ಸುಮ್ಮನಿರುವುದು ಉತ್ತಮ ಅಂತಾ ಗೌತಮ್ ಗಂಭೀರ್ ತಿರುಗೇಟು ಕೊಟ್ಟಿದ್ದಾರೆ. ಅಷ್ಟಕ್ಕೂ ಇಲ್ಲಿ ಗಂಭೀರ್ ಟಾಂಟ್ ಕೊಟ್ಟಿರೋದು ಡಿಸಿ ಮಾಲೀಕರಿಗೆ.
ಸ್ಪೆಷಲಿಸ್ಟ್ ಕೋಚ್ ಬೇಕು ಎಂದಿದ್ದ ಪಾರ್ಥ್ ಜಿಂದಾಲ್!
ಗೌತಮ್ ಗಂಭೀರ್ ಹೆಸರೇಳದೇ ವಾರ್ನಿಂಗ್ ಕೊಟ್ಟಿರೋದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕ ಪಾರ್ಥ್ ಜಿಂದಾಲ್ಗೆ. ಯಾಕಂದ್ರೆ ಟೀಮ್ ಇಂಡಿಯಾ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಪಾರ್ಥ್ ಜಿಂದಾಲ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಭಾರತ ತಂಡವು ಗೆಲುವಿನ ಹತ್ತಿರಕ್ಕೂ ಬರಲಿಲ್ಲ, ತವರಿನಲ್ಲಿ ಎಂತಹ ಹೀನಾಯ ಸೋಲು. ನಮ್ಮ ಟೆಸ್ಟ್ ತಂಡ ತವರಿನಲ್ಲಿ ಇಷ್ಟು ವೀಕ್ ಆಗಿರೋದನ್ನ ನೋಡಿಯೇ ಇಲ್ಲ. ರೆಡ್ ಬಾಲ್ ಸ್ಪೆಷಲಿಸ್ಟ್‌ಗಳನ್ನು ಆಯ್ಕೆ ಮಾಡದಿದ್ದಾಗ ಹೀಗಾಗುತ್ತದೆ. ಟೆಸ್ಟ್ ಕ್ರಿಕೆಟ್‌ಗಾಗಿ ಸ್ಪೆಷಲಿಸ್ಟ್ ರೆಡ್ ಬಾಲ್ ಕೋಚ್ ಅನ್ನು ಆಯ್ಕೆ ಮಾಡಲು ಇದು ಸಕಾಲ ಎಂದು ಪಾರ್ಥ್ ಜಿಂದಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದನ್ನೇ ಪ್ರಸ್ತಾಪಿಸಿ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ನೀಡಿರುವುದು ಏಕದಿನ ಸರಣಿ ಗೆದ್ದ ಬಳಿಕ ಅನ್ನೋದನ್ನ ನಾವಿಲ್ಲಿ ಮರೆಯೋಕಾಗಲ್ಲ.
ಅಷ್ಟಕ್ಕೂ ಇಲ್ಲಿ ಪಾರ್ಥ್ ಜಿಂದಾಲ್ ಹೇಳಿದ್ದು ಟೆಸ್ಟ್ ಕ್ರಿಕೆಟ್ ಬಗ್ಗೆ. ಬಟ್ ಗಂಭೀರ್ ಏಕದಿನ ಸರಣಿ ಗೆದ್ದು ತಿರುಗೇಟು ಕೊಟ್ಟಿದ್ದಾರೆ. ಆಲ್ರೆಡಿ ರೆಡ್ ಬಾಲ್ ಫಾರ್ಮೆಟ್ಗೆ ಎಷ್ಟು ಡ್ಯಾಮೇಜ್ ಆಗ್ಬೇಕು ಅಷ್ಟಾಗಿದೆ. 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಹೋಗ್ತಾರೋ ಇಲ್ವೋ ಗೊತ್ತಿಲ್ಲ.

ನೋಡಿರಿ

