ಲಕ್ಷ್ಮಣ್ ಇದ್ರಷ್ಟೇ ವೈಭವ್ ವೈಭವ – ಗಂಭೀರ್ ಅಡಿ ಬೆಂಚ್ ಗಷ್ಟೇ ಸೀಮಿತ
ಸೂರ್ಯವಂಶಿ ಚಾನ್ಸ್ ಹಿಂದೆ ಲೆಕ್ಕಾಚಾರ

ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅವ್ರ ಕೆಲ ನಿರ್ಧಾರಗಳ ಬಗ್ಗೆ ವಿರೋಧ ಇದ್ದೇ ಇದೆ. ಟೀಂ ಸೆಲೆಕ್ಷನ್, ಪ್ಲೇಯಿಂಗ್ 11 ಫೈನಲ್, ಅವ್ರು ನೀಡುವ ಸ್ಟೇಟ್ಮೆಂಟ್ಸ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ನೆಗೆಟಿವಿಟಿ ಜೊತೆಗೆ ಟ್ರೋಲ್ ಕೂಡ ಆಗ್ತಾ ಇರ್ತಾರೆ. ಅದ್ರಲ್ಲೂ ಈಗ ವೈಭವ್ ಸೂರ್ಯವಂಶಿ ವಿಚಾರದಲ್ಲಿ ಗಂಭೀರ್ ನಡೆಗೆ ಮಾಜಿ ಕ್ರಿಕೆಟ್ಗರೇ ತಿರುಗಿಬಿದ್ದಿದ್ದಾರೆ. ಗಂಭೀರ್ ಅಂಡರ್ನಲ್ಲಿ ಹಾಗೇ ವಿವಿಎಸ್ ಲಕ್ಷ್ಮಣ್ ಅಡಿಯಲ್ಲಿ ಸೂರ್ಯವಂಶಿಗೆ ಸಿಕ್ಕಿರೋ ಚಾನ್ಸ್ಗಳನ್ನ ಟ್ಯಾಲಿ ಮಾಡಲಾಗ್ತಿದೆ.
ಇದನ್ನೂ ಓದಿ : ಸೋತರೂ ದಾಖಲೆ ಬರೆದ ಅಭಿಷೇಕ್!- ಒಂದೇ ವರ್ಷದಲ್ಲಿ ಸಿಕ್ಸರ್ಗಳ ವಿಶ್ವದಾಖಲೆ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20ಐ ಸರಣಿ ಈಕ್ವಲ್ ಆಗಿ ಕೊನೇ ಪಂದ್ಯವೇ ನಿರ್ಣಾಯಕ ಹಂತಕ್ಕೆ ಬಂದಾಗ ವೈಭವ್ ಸೂರ್ಯವಂಶಿ ಹೆಸರು ಮತ್ತೊಮ್ಮೆ ಚರ್ಚೆಯಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲೂ ಬೆಂಚ್ ಕಾದಿರುವ ಸೂರ್ಯವಂಶಿಗೆ ಚಾನ್ಸ್ ಕೊಡ್ಬೇಕಿತ್ತು ಅನ್ನೋದು ಸಾಕಷ್ಟು ಕ್ರಿಕೆಟಿಗರ ವಾದ. ಅಭಿಮಾನಿಗಳ ಆಸೆಯೂ ಅದೇ ಆಗಿದೆ. ಆದ್ರೆ ಓಪನಿಂಗ್ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇದ್ದಾರೆ ಎನ್ನುವ ಕಾರಣಕ್ಕೆ ಸೂರ್ಯವಂಶಿ ಬೆಂಚ್ ಕಾಯುವ ಅನಿವಾರ್ಯತೆ ಇದೆ. ಹೀಗಿದ್ರೂ ಗಂಭೀರ್ ಬೇಕಂತನೇ ಚಾನ್ಸ್ ಕೊಡ್ತಿಲ್ಲ ಅನ್ನೋರೂ ಇದ್ದಾರೆ. ವಿವಿಎಸ್ ಲಕ್ಷ್ಮಣ್ ಹೆಸರನ್ನ ಮುಂದಿದ್ದು ವಾದ ಮಾಡ್ತಿದ್ದಾರೆ.
ಗಂಭೀರ್ ಗಿಂತ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾಗ್ಲೇ ಹೆಚ್ಚಿನ ಚಾನ್ಸ್!
15 ವರ್ಷದ ಡೈನಮಿಕ್ ಬ್ಯಾಟರ್ ವೈಭವ್ ಸೂರ್ಯವಂಶಿ ಭಾರತ ಪರ ಈಗಾಗಲೇ ಎಂಟು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಌಂಡ್ ಈ 8 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾಗ ವೈಭವ್ಗೆ ಚಾನ್ಸ್ ಕೊಟ್ಟಿರುವಂಥದ್ದು. ಇನ್ನು ಮೂರು ಪಂದ್ಯಗಳಲ್ಲಿ ಗಂಭೀರ್ ಕೋಚ್ ಆಗಿದ್ದಾಗ ಅವಕಾಶ ಕೊಟ್ಟಿದ್ದಾರೆ. ಗಂಭೀರ್ ಅಂಡರ್ನಲ್ಲಿ ಸೂರ್ಯವಂಶಿ 14 ಪಂದ್ಯಗಳಲ್ಲಿ ತಂಡಕ್ಕೆ ಸೆಲೆಕ್ಟ್ ಆಗಿದ್ದು ಈ ಪೈಕಿ ಕೇವಲ ಮೂರು ಬಾರಿ ಮಾತ್ರವೇ ಪ್ಲೇಯಿಂಗ್ 11ನಲ್ಲಿ ಆಡಿದ್ದಾರೆ. ಅದೂ ಕೂಡ ಇಂಗ್ಲೆಂಡ್ ಸಿರೀಸ್ನಲ್ಲಿ. ಆದ್ರೆ ಹಂಗಾಮಿ ಕೋಚ್ ಆಗಿ ಭಾರತ ತಂಡವನ್ನ ವಿವಿಎಸ್ ಲಕ್ಷ್ಮಣ್ ಮುನ್ನಡೆಸಿದಾಗ ಐದು ಪಂದ್ಯಗಳಲ್ಲಿ ಸೂರ್ಯವಂಶಿ ಭಾರತದ ಪರ ಆಡಿದ್ದಾರೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಿರುವ ಲಕ್ಷ್ಮಣ್, ಜಿಂಬಾಬ್ವೆ ಟಿ20ಐ ಪ್ರವಾಸ ಮತ್ತು ಏಷ್ಯನ್ ಗೇಮ್ಸ್ ಟೂರ್ನಮೆಂಟ್ನಲ್ಲಿ ಗಂಭೀರ್ ಬದಲಿಗೆ ಕೋಚ್ ಜವಾಬ್ದಾರಿ ಹೊತ್ತಿದ್ರು. ಜಿಂಬಾಬ್ವೆ ಸರಣಿಯಲ್ಲಿ ಭಾರತದ ಪರ ಮೂರೂ ಪಂದ್ಯಗಳನ್ನು ಸೂರ್ಯವಂಶಿ ಆಡಿದ್ದರು. ಆ ನಂತ್ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡದ ಪರ ಸೆಮಿಫೈನಲ್ ಮತ್ತು ಫೈನಲ್ನಲ್ಲಿಯೂ ಕಣಕ್ಕಿಳಿದಿದ್ರು. ಹಾಗಂತ ಸಂಜುರನ್ನ ತಂಡದಿಂದ ಡ್ರಾಪ್ ಮಾಡಿರಲಿಲ್ಲ. ಒನ್ ಡೌನ್ ಬ್ಯಾಟರ್ ಆಗಿ ಆಡಿಸಲಾಗಿತ್ತು. ಸಿಕ್ಕಿರುವಂಥ ಅವಕಾಶಗಳಲ್ಲೇ ಸೂರ್ಯವಂಶಿ ಬ್ಯಾಟಿಂಗ್ನಲ್ಲಿ ಇಂಪ್ಯಾಕ್ಟ್ ಮಾಡಿದ್ದಾರೆ. ಎಂಟು ಟಿ20 ಪಂದ್ಯಗಳಲ್ಲಿ 186 ರ ಗಮನಾರ್ಹ ಸ್ಟ್ರೈಕ್ ರೇಟ್ನಲ್ಲಿ 246 ರನ್ ಗಳಿಸಿದ್ದಾರೆ. ಪ್ರಸ್ತುತ ವಿಂಡೀಸ್ ವಿರುದ್ಧದ ಸರಣಿಯಲ್ಲಿ ತಂಡದಲ್ಲಿದ್ರೂ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ. ಇನ್ನು ಮುಂದಿನ ವಾರದಿಂದ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ಶುರುವಾಗೋದ್ರಿಂದ ಅಲ್ಲಾದ್ರೂ ಸೂರ್ಯವಂಶಿಗೆ ಚಾನ್ಸ್ ಕೊಡ್ತಾರಾ ಅನ್ನೋ ಚರ್ಚೆ ನಡೀತಿದೆ. ಆದ್ರೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾರನ್ನ ಓವರ್ ಟೇಕ್ ಮಾಡಿ ಸೂರ್ಯವಂಶಿ ಅವಕಾಶ ಗಿಟ್ಟಿಸಿಕೊಳ್ಳೋದು ಕಷ್ಟವೇ.

ನೋಡಿರಿ

