ಕೇವಲ ಧೋನಿಯಿಂದಾಗಿ ಮಾತ್ರ ವರ್ಲ್ಡ್‌ಕಪ್ ಗೆದ್ದಿಲ್ಲ..! – ಧೋನಿಗೆ ಮತ್ತೆ ಟಾಂಗ್ ಕೊಟ್ಟ ಗಂಭೀರ್!

ಕೇವಲ ಧೋನಿಯಿಂದಾಗಿ ಮಾತ್ರ ವರ್ಲ್ಡ್‌ಕಪ್ ಗೆದ್ದಿಲ್ಲ..! – ಧೋನಿಗೆ ಮತ್ತೆ ಟಾಂಗ್ ಕೊಟ್ಟ ಗಂಭೀರ್!

ಗೌತಮ್​ ಗಂಭೀರ್ ನೀಡಿರುವ ಹೊಸ ಸ್ಟೇಟ್​​ಮೆಂಟ್ ಈಗ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ.  ಗಂಭೀರ್ ಪ್ರಕಾರ ಒಂದು ಟೀಮ್ ವಿಶ್ವಕಪ್‌ನಲ್ಲಿ ಗೆಲ್ಲಲು ಬರೀ ಕ್ಯಾಪ್ಟನ್‌ನಿಂದ ಮಾತ್ರ ಸಾಧ್ಯವಿಲ್ಲ. ಟೂರ್ನಿ ಗೆಲ್ಲಲು ಟೀಮ್ ನ ಎಲ್ಲಾ ಆಟಗಾರರ ಪರ್ಫಾಮ್ ಕೂಡಾ ಮುಖ್ಯ ಆಗಿರುತ್ತದೆ.

ಇದನ್ನೂ ಓದಿ: ವಿಶ್ವಕಪ್ ಬಗ್ಗೆ ಧೋನಿ ಭವಿಷ್ಯ ನಿಜವಾಗುತ್ತಾ? – ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಗ್ಯಾರಂಟಿನಾ?

ಶ್ರೀಲಂಕಾ ವಿರುದ್ಧ ಇಂಗ್ಲೆಂಡ್​ ಸೋಲನುಭವಿಸುತ್ತಲೇ ಮಾತನಾಡಿರುವ ಗಂಭೀರ್, ಕ್ಯಾಪ್ಟನ್​ ಏಕಾಂಗಿಯಾಗಿ ವರ್ಲ್ಡ್​​ಕಪ್​ನಲ್ಲಿ ತಂಡವನ್ನ ಗೆಲ್ಲಿಸೋಕೆ ಸಾಧ್ಯವಾಗುತ್ತೆ ಅನ್ನೋದಾದ್ರೆ ಜಾಸ್ ಬಟ್ಲರ್​ ಈ ಬಾರಿ ಇಂಗ್ಲೆಂಡ್​​ನ್ನ ಗೆಲ್ಲಿಸಿಕೊಡಬೇಕಿತ್ತು. ಆದ್ರೆ ಕ್ಯಾಪ್ಟನ್​ ಜಾಸ್ ಬಟ್ಲರ್​ಗೆ ತಂಡವನ್ನ ಗೆಲ್ಲಿಸಿಕೊಡೋಕೆ ಸಾಧ್ಯವಾಗಿಲ್ಲ ಯಾಕೆ? ಅದಕ್ಕೆ ಕಾರಣ ಬಟ್ಲರ್​ ಟೀಂನ ಬ್ಯಾಟ್ಸ್​​ಮನ್​ಗಳು ಮತ್ತು ಬೌಲರ್ಸ್​ಗಳು ಪರ್ಫಾಮ್​ ಮಾಡುವಲ್ಲಿ ಫೇಲ್ ಆಗಿದ್ದಾರೆ. ಹೀಗಾಗಿ ಟೂರ್ನಿ ಗೆದ್ದಾಗ ಒಬ್ಬನಿಗೆ ಮಾತ್ರ ಕ್ರೆಡಿಟ್ ಕೊಟ್ರೆ ತಂಡದ ಇತರೆ 14 ಮಂದಿ ಆಟಗಾಗಾರರಿಗೆ ಹೇಗಾಗ್ಬೇಡ ಅಂತಾ ಗಂಭೀರ್ ಹೇಳಿದ್ದಾರೆ. ಇಲ್ಲಿ ಗಂಭೀರ್​ ಹೇಳಿರೋದಿಷ್ಟೇ.. ಕ್ರಿಕೆಟ್ ಆಗಲಿ.. ಫುಟ್ಬಾಲ್ ಆಗಲಿ ಅಥವಾ ಇನ್ಯಾವುದೇ ಒಂದು ಟೀಂ ಆಗಿ ಆಡುವ ಸ್ಪೋರ್ಟ್ಸ್​ ಆಗಿರಲಿ.. ಒಬ್ಬನಿಂದಾಗಿಯೇ ಪಂದ್ಯವನ್ನ ಗೆಲ್ಲಲು ಸಾಧ್ಯವೇ ಇಲ್ಲ. ಇಲ್ಲಿ ಇಂಡಿವಿಜ್ಯುವಲ್​ ಪರ್ಫಾಮೆನ್ಸ್ ಕೂಡ ಮ್ಯಾಟರ್ ಆಗುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಬೇಕಾದ್ರೆ 2011ರ ವರ್ಲ್ಡ್​​ಕಪ್ ಫೈನಲ್​​ನ್ನೇ ತೆಗೆದುಕೊಳ್ಳೋಣ. ಆ ಮ್ಯಾಚ್​ನಲ್ಲಿ ಗಂಭೀರ್​​ 97 ಗಳಿಸಿದ್ದರು. ಧೋನಿ 91 ರನ್ ಹೊಡೆದಿದ್ದರು. ಒಂದು ವೇಳೆ ಗಂಭೀರ್​ 97 ರನ್​ ಮಾಡದೆ ಇದ್ದರೆ ಟೀಂ ಇಂಡಿಯಾ ಗೆಲ್ಲೋದು ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ ಧೋನಿ 91 ರನ್​ ಮಾಡದೇ ಇದ್ದರೂ ವರ್ಲ್ಡ್​​ಕಪ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಇಬ್ಬರೂ ಪರ್ಫಾಮ್​ ಮಾಡಿದ್ರಿಂದಾಗಿಯೇ ನಾವು ಸಕ್ಸಸ್​​ಫುಲ್​ ಆಗಿ ಚೇಸ್ ಮಾಡೋಕೆ ಸಾಧ್ಯವಾಯ್ತು. ಹೀಗಾಗಿ ಕೇವಲ ಧೋನಿಯಿಂದಾಗಿಯೇ ವಿಶ್ವಕಪ್​ ಗೆದ್ದಿದೆ ಅಂತಾ ಬಿಂಬಿಸೋದು ಸರಿಯಲ್ಲ ಅನ್ನೋದು ಗಂಭೀರ್​ ಅಭಿಪ್ರಾಯ. ಇಲ್ಲಿ ಗಂಭೀರ್ ಹೇಳಿರೋದ್ರಲ್ಲೂ ತಪ್ಪೇನಿಲ್ಲ. ಕೇವಲ ಧೋನಿಯಿಂದಾಗಿ ಮಾತರ ವರ್ಲ್ಡ್​​ಕಪ್ ಗೆದ್ದಿಲ್ಲ. ಆದ್ರೆ 28 ವರ್ಷಗಳ ಬಳಿಕ ವರ್ಲ್ಡ್​​ಕಪ್​ ಗೆಲ್ಲುವಲ್ಲಿ ಎಂ.ಎಸ್. ಧೋನಿ ಕೂಡ ಮಹತ್ತರ ಪಾತ್ರವಹಿಸಿದ್ದಾರೆ ಅನ್ನೋದ್ರಲ್ಲೂ ಯಾವುದೇ ಡೌಟ್ ಇಲ್ಲ. ಧೋನಿ ಸೇರಿದಂತೆ ಎಲ್ಲಾ 15 ಮಂದಿ ಆಟಗಾರರಿಂದಾಗಿ ಅಂದು ವಿಶ್ವಕಪ್​ ಗೆದ್ದಿತ್ತು. ಈ ಬಾರಿಯೂ ಅಷ್ಟೇ, ವರ್ಲ್ಡ್​​ಕಪ್ ಗೆದ್ದರೆ ಕೇವಲ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಷ್ಟೇ ಹೀರೋ ಆಗೋದಿಲ್ಲ. ಟೀಂನ ಎಲ್ಲಾ ಆಟಗಾರರಿಗೂ ಕ್ರೆಡಿಟ್ ನೀಡ್ಲೇಬೇಕು. ಕೆಲವರು ರೋಲ್​ ದೊಡ್ಡ ಮಟ್ಟದಲ್ಲಿರುತ್ತೆ. ಯಾಕಂದ್ರೆ ಅವರು ಉಳಿದೆಲ್ಲಾ ಆಟಗಾರರಿಗಿಂತೂ ಟಾಪ್​ ಕ್ಲಾಸ್ ಪರ್ಫಾಮ್ ಮಾಡಿರ್ತಾರೆ. ಒಂದು ವೇಳೆ ಈ ಬಾರಿ ಕೊಹ್ಲಿ ಒಟ್ಟು 5 ಸೆಂಚೂರಿ ಬಾರಿಸಿ.. ಟೀಂ ಇಂಡಿಯಾ ವಿಶ್ವಕಪ್​ ಕೂಡ ಗೆಲ್ತು ಅಂತಾ ಇಟ್ಕೊಳ್ಳೋಣ. ಆಗ ಸಹಜವಾಗಿಯೇ ಕೊಹ್ಲಿಯಿಂದಾಗಿಯೇ ವರ್ಲ್ಡ್​​ಕಪ್ ಗೆದ್ದಿದ್ದು ಅನ್ನೂ ಎಕ್ಸ್​ಟ್ರಾ ಹೈಪ್ ಸಿಗುತ್ತೆ. ಹೀಗಾಗಿ ಇಂಡಿವಿಜ್ಯುವಲ್ ಆಗಿ ಹೆಚ್ಚಿನ ಕೊಡುಗೆ ನೀಡುವ ಸಹಜವಾಗಿಯೇ ಪ್ಲೇಯರ್ಸ್​​ಗಳಿಗೆ ಸಹಜವಾಗಿಯೇ ಹೆಚ್ಚಿನ ಕ್ರೆಡಿಟ್ ಕೂಡ ಸಿಗುತ್ತೆ.. ಮಾಧ್ಯಮಗಳಲ್ಲಿ ಹೈಪ್ ಸಿಗುತ್ತೆ.. ಹಾಗಂತಾ ಮಾಧ್ಯಮಗಳೇ ಇರಲಿ.. ಕ್ರಿಕೆಟ್ ಅಭಿಮಾನಿಗಳೇ ಇರಲಿ.. ಇಡೀ ಟೀಂನ್ನ ಮರೆಯಬಾರದು.. ಒಂದು ತಂಡವಾಗಿ ಗೆದ್ದಿದ್ದೀವಿ ಅನ್ನೋದನ್ನ ಕೂಡ ಅರ್ಥಮಾಡಿಕೊಳ್ಳಬೇಕಿರೋದು ಇಂಪಾರ್ಟೆಂಟ್ ಆಗುತ್ತೆ. ಇದು ಆ್ಯಕ್ಚುವಲಿ ಫ್ಯಾಕ್ಟ್..

Sulekha